ಮಂಡ್ಯದ ಶ್ರೀರಂಗನಾಥ ದೇವಸ್ಥಾನ ಹುಂಡಿಯಲ್ಲಿ ಅಮೆರಿಕನ್ ಡಾಲರ್..!

By Kannadaprabha News  |  First Published Jan 12, 2020, 11:55 AM IST

ಮಂಡ್ಯದ ಶ್ರೀರಂಗಪಟ್ಟಣದ ಪ್ರಸಿದ್ಧ ಶ್ರೀರಂಗನಾಥ ದೇವಾಲಯದಲ್ಲಿ ಹುಂಡಿ ಎಣಿಕೆ ನಡೆಸಲಾಗಿದೆ. ಸುಮಾರು 26 ಲಕ್ಷದಷ್ಟು ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ. ಜೊತೆಗೇ ಹಲವಾರು ವಿದೇಶಿ ರಾಷ್ಟ್ರಗಳ ಕರೆನ್ಸಿಯೂ ಲಭ್ಯವಾಗಿದೆ.


ಮಂಡ್ಯ(ಜ.12): ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯದಲ್ಲಿ ಭಕ್ತರ ಹಾಕಿದ ಕಾಣಿಕೆ ಹುಂಡಿಯ ಎಣಿಕೆ ಕಾರ್ಯ ಶನಿವಾರ ನಡೆದಿದೆ. ದೇವಾಲಯದ ಕಾರ್ಯನಿರ್ವಹಣಾಧಿ ಕಾರಿ ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರ ಸಮ್ಮುಖದಲ್ಲಿ 7 ಹುಂಡಿಗಳಲ್ಲಿ ಎಣಿಕೆ ಕಾರ್ಯ ನಡೆದಿದೆ.

ಒಟ್ಟು 26,46,464 ರುಪಾಯಿ ಸಂಗ್ರಹವಾಗಿದೆ. ಅಮೆರಿಕದ 5 ಡಾಲರ್‌ಗಳು, ಮಲೇಷ್ಯಾ 15 ಕರೆನ್ಸಿ, ನೇಪಾಳದ 3, ಸಿಂಗಾಪುರದ 1, ಒಮನ್ 2, ಆಸ್ಟ್ರೇಲಿಯಾದ 1 ಕರೆನ್ಸಿ ಹುಂಡಿಯಲ್ಲಿ ಲಭ್ಯವಾಗಿದೆ.

Tap to resize

Latest Videos

ತುಮಕೂರು: ಹುಂಡಿಗೆ ಕನ್ನ ಹಾಕಲು ಬಂದು ಕಾಲು ಮುರಿದುಕೊಂಡ

26 ಮಿ.ಗ್ರಾಂ. ಚಿನ್ನ ಹಾಗೂ 270 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಸಂಗ್ರಹವಾದ ಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಜಮಾ ಮಾಡಲಾಗಿದೆ ಎಂದು ದೇವಾಲಯದ
ಇಒ ನಂಜೇಗೌಡ ತಿಳಿಸಿದ್ದಾರೆ.

ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಿಬ್ಬಂದಿ ಹಾಗೂ ದೇವಾಲಯದ ಸಿಬ್ಬಂದಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಾಸನ್, ಇಂದಿರಾ, ಶ್ರೀನಿವಾಸ್, ವೆಂಕಟೇಶ, ಆನಂದ್ ಇದ್ದರು.

ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಕಾಲೇಜಿನಿಂದ ಸರ್ಕಾರಿ ಜಾಗ ಒತ್ತುವರಿ..!

click me!