ಅಂಬೇಡ್ಕರ್‌ ಆದರ್ಶಗಳೇ ಆಡಳಿತಕ್ಕೆ ಪ್ರೇರಣೆ: ಸಿಎಂ ಬೊಮ್ಮಾಯಿ

By Govindaraj S  |  First Published Dec 19, 2022, 8:47 PM IST

ಅಂಬೇಡ್ಕರ್‌ ಆದರ್ಶಗಳ ಪಾಲಿಸುವವನೇ ನಿಜವಾದ ದೇಶಭಕ್ತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಲಾದ ಒನಕೆ ಓಬವ್ವ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಚಿತ್ರದುರ್ಗ (ಡಿ.19): ಅಂಬೇಡ್ಕರ್‌ ಆದರ್ಶಗಳ ಪಾಲಿಸುವವನೇ ನಿಜವಾದ ದೇಶಭಕ್ತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಲಾದ ಒನಕೆ ಓಬವ್ವ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬುದ್ದ, ಬಸವ, ಅಂಬೇಡ್ಕರ್‌ ಸಿದ್ದಾಂತ ನಂಬಿ ಆಡಳಿತ ನಡೆಸುತ್ತಿದ್ದೇನೆ. ಇವರ ಆದರ್ಶಗಳೇ ನನಗೆ ಪ್ರೇರಣೆ. ಸಂವಿಧಾನದಲ್ಲಿ ಎಲ್ಲರೂ ಬದುಕುವ ಸಮಾನ ಅವಕಾಶಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಅನೇಕ ಜಾತಿ, ಮತ, ಪಂಥಗಳ ನಡುವೆಯೂ ಪ್ರಜಾಪ್ರಭುತ್ವ ಉಳಿದಿದೆ ಎಂದರೆ ಅದಕ್ಕೆ ಅಂಬೇಡ್ಕರ್‌ ನೀಡಿದ ಸಂವಿಧಾನ ಕಾರಣ ಎಂದರು.

ಪ್ರಮುಖರನ್ನು ನೆನಪಿಸಿಕೊಂಡ ಸಿಎಂ: ಓಬವ್ವ ಪ್ರತಿನಿಧಿಸುವ ಛಲವಾದಿ ಸಮಾಜ ಈ ನಾಡಿಗೆ ಅನೇಕ ನಾಯಕರ ಕೊಟ್ಟಿದೆ. ಚಿತ್ರದುರ್ಗ ಜಿಲ್ಲೆಯವರೇ ಆದ ಕೆ.ಎಚ್‌.ರಂಗನಾಥ್‌, ಬಿ.ಬಸವಲಿಂಗಪ್ಪ, ಬಿ.ರಾಚಯ್ಯ, ಮಲ್ಲಿಕಾರ್ಜುನ ಖರ್ಗೆ, ಮೋಟಮ್ಮ, ಐಎಎಸ್‌ ಅಧಿಕಾರಿ ಕೆ.ಶಿವರಾಂ, ಸಿದ್ದಯ್ಯ, ಶ್ರೀನಿವಾಸಪ್ರಸಾದ್‌ ಸೇರಿದಂತೆ ಅನೇಕರು ಈ ಸಮಾಜ ಪ್ರತಿನಿಧಿಸುತ್ತಿದ್ದಾರೆ. ಈ ಸಮುದಾಯದಲ್ಲಿ ಸಾರ್ಮಥ್ಯಕ್ಕೆ ಕೊರತೆ ಇಲ್ಲ, ಆದರೆ ಅವಕಾಶಗಳ ಕೊರತೆಯಿದೆ. ಜನರ ರಾಜಕಾರಣ ಮಾಡಿದರೆ ಸಮುದಾಯದ ಜನ ಕೈಬಿಡುವುದಿಲ್ಲ ಎಂದರು. ರಾಜ್ಯ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಆಯೋಗದ ಅಧ್ಯಕ್ಷ ನೆಹರು ಚ. ಓಲೇಕಾರ್‌ ಮಾತನಾಡಿ, ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ರು.2 ಕೋಟಿ ಅನುದಾನ ನೀಡಿದೆ. ವೀರವನಿತೆ ಒನಕೆ ಓಬವ್ವ ಪ್ರಾಧಿಕಾರದ ರಚನೆ ಮಾಡಬೇಕು. ಅದರ ಜೊತೆಗೆ ವೀರ ಒನಕೆ ಓಬವ್ವ ಟ್ರಸ್ಟ್‌ಗೆ 80 ಎಕರೆ ಜಮೀನನ್ನು ಮಂಜೂರು ಮಾಡಿ ಕೊಡಬೇಕು ಎಂದು ವಿನಂತಿಸಿದರು.

Tap to resize

Latest Videos

ಗ್ರಾಮ ವಾಸ್ತವ್ಯ ಕ್ರಾಂತಿಕಾರಿ ಹೆಜ್ಜೆ: ಸಿಎಂ ಬೊಮ್ಮಾಯಿ

ಅಂಬೇಡ್ಕರ್‌ ಪ್ರತಿಮೆಗೆ ಮನವಿ: ಚಿತ್ರದುರ್ಗದಲ್ಲಿ ವೀರ ವನಿತೆ ಒನಕೆ ಓಬವ್ವರ ಹೆಸರಿನಲ್ಲಿ ವಿಶ್ವ ವಿದ್ಯಾಲಯ ಸ್ಥಾಪನೆಯಾಗಬೇಕು. ನಗರದ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಒನಕೆ ಓಬವ್ವನ ಹೆಸರಿಡಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಒನಕೆ ಓಬವ್ವ ಹೆಸರಿನಲ್ಲಿ ಮಹಿಳಾ ಕಾಲೇಜು ಮತ್ತು ಮಹಿಳಾ ಪ್ರೌಢಶಾಲೆಗಳನ್ನು ಸ್ಥಾಪನೆ ಮಾಡಬೇಕು. ರಾಜ್ಯದ ಯಾವುದಾದರೂ ಒಂದು ಪ್ರದೇಶದಲ್ಲಿ ಅಗತ್ಯ ಜಮೀನು ಮಂಜೂರು ಮಾಡಿ 157 ಅಡಿ ಎತ್ತರದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪುತ್ಥಳಿಯನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು. ಹಂಪಿ ಕನ್ನಡ ವಿವಿ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಚೆಲುವರಾಜು ಮಾತನಾಡಿ, ಒನಕೆ ಓಬವ್ವ ಎಲ್ಲರಂತೆ ಸಾಮಾನ್ಯ ದುಡಿಯುವ ವರ್ಗದ ಮಹಿಳೆ. 

ಪಾಳೇಗಾರರ ಮನಸ್ಸು ಗೆದ್ದು ದೊಡ್ಡ ಅಸ್ತಿತ್ವ ಪಡೆದು ಜನಮಾನಸದಲ್ಲಿ ಉಳಿದವರು. ಸ್ಥಳೀಯ ಚರಿತ್ರೆಗಳು ಸಾಮ್ರಾಜ್ಯ ನಿರ್ಮಾಣದ ಊರುಗೋಲು. ತಳ ಸಮುದಾಯದ ಕುರಿತು ಅಧ್ಯಯನ ನಡೆದರೂ ಅದನ್ನು ಪಠ್ಯದಲ್ಲಿ ಅಳವಡಿಸುತ್ತಿಲ್ಲ. ಇನ್ನು ಮುಂದೆಯಾದರೂ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಬೇಕು ಎಂದರು. ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ , ಛಲವಾದಿಗಳು ಎಂಬುದು ಶಕ್ತಿ ಹಾಗೂ ಹಠದ ಸಂಕೇತವಾಗಿದೆ. ಹೆಣ್ಣು ಮಕ್ಕಳು ಒನಕೆ ಓಬವ್ವನ ರೀತಿಯಲ್ಲಿ ಬದುಕಬೇಕು. ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ಒನಕೆ ಓಬವ್ವನ ಹೆಸರನಲ್ಲಿ ಆತ್ಮ ರಕ್ಷಣೆ ಕಲೆಯನ್ನು ವಿದ್ಯಾರ್ಥಿನಿಯರಿಗೆ ಸರ್ಕಾರ ನೀಡುತ್ತಿದೆ. ಕೆಚ್ಚದೆಯ ಒನಕೆ ಓಬವ್ವ ಕ್ರಾಂತಿ ನಾಡಿನಲ್ಲೆಲ್ಲಾ ಹಬ್ಬಲಿ ಎಂದರು.

ಅಶೋಕ್‌ ವಾಸ್ತವ್ಯದ ಹಳ್ಳಿಗಳಿಗೆ 1 ಕೋಟಿ: ಸಿಎಂ ಬೊಮ್ಮಾಯಿ ಘೋಷಣೆ

ಕುವೆಂಪು ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ನಲ್ಲಿಕಟ್ಟೆಎಸ್‌ ಸಿದ್ದೇಶ್‌ ಅವರು ಬರೆದ ಸಾಂಸ್ಕೃತಿಕ ನಾಯಕಿ ಒನಕೆ ಓಬವ್ವ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು. ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಬಸವ ನಾಗದೇವ ಸ್ವಾಮೀಜಿ, ಜ್ಞಾನ ಪ್ರಕಾಶ್‌ ಸ್ವಾಮೀಜಿ, ವಿಜಯ ಮಹಾಂತೇಶ ಸ್ವಾಮೀಜಿ, ಬಸವಲಿಂಗ ಮೂರ್ತಿ ಸ್ವಾಮೀಜಿ, ಶಾಸಕರಾದ ಎನ್‌.ಮಹೇಶ್‌, ಎಂ. ಚಂದ್ರಪ್ಪ, ಗೂಳಿಹಟ್ಟಿಡಿ. ಶೇಖರ್‌, ಪೂರ್ಣಿಮಾ ಶ್ರೀನಿವಾಸ, ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ನಿಗಮದ ಅಧ್ಯಕ್ಷ ಡಿ.ಎಸ್‌. ವೀರಯ್ಯ, ವಿಧಾನಪರಿಷತ್‌ ಸದಸ್ಯರಾದ ಕೆ.ಎಸ್‌. ನವೀನ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ. ಸುರೇಶ್‌, ನಗರಸಭೆ ಅಧ್ಯಕ್ಷೆ ಬಿ. ತಿಪ್ಪಮ್ಮ ವೆಂಕಟೇಶ್‌, ಮಾಜಿ ಸಚಿವೆ ಮೋಟಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಪ್ರಕಾಶ್‌ ಜಿ.ಟಿ. ನಿಟ್ಟಾಲಿ, ಜಂಟಿ ನಿರ್ದೇಶಕ ಅಶೋಕ ಎನ್‌. ಛಲವಾದಿ, ಜಿಲ್ಲಾ ಪೊಲೀಸ್‌ ವರಿಷ್ಠಾ್ಠಧಿಕಾರಿ ಕೆ. ಪರಶುರಾಮ್‌, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್‌. ದಿವಾಕರ್‌, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ , ಓಬವ್ವ ಜಯಂತಿ ಸಮಿತಿ ಕಾರ್ಯದರ್ಶಿ ಎಚ್‌.ಸಿ.ನಿರಂಜನಮೂರ್ತಿ, ಭಾ ರ್ಗವಿ, ನವೀನ್‌ ಮೊದಲಾದವರು ಉಪಸ್ಥಿತರಿದ್ದರು.

click me!