Ambedkar Jayanti 2022: ನಾಲಿಗೆಯ ಕುಂಚದಲ್ಲಿ ಅರಳಿತು ಸಮಾನತೆ ಸಾರಿದ ಬಾಬಾ ಸಾಹೇಬರ ಚಿತ್ರ

By Govindaraj S  |  First Published Apr 14, 2022, 3:17 PM IST

ಅಂಬೇಡ್ಕರ್ ಜನ್ಮದಿನಕ್ಕೆ ಹರಿಹರದ ಯುವಕನೋರ್ವ ವಿಶೇಷ ನಮನ ಸಲ್ಲಿಸಿದ್ದಾನೆ. ತನ್ನ ನಾಲಿಗೆಗೆ ಪ್ಲಾಸ್ಟರ್ ಸುತ್ತಿಕೊಂಡು ನಾಲಿಗೆಯನ್ನೇ ಕುಂಚವನ್ನಾಗಿಸಿ ಅಂಬೇಡ್ಕರ್ ಚಿತ್ರ ಬಿಡಿಸಿದ್ದಾನೆ. ಮಹಾಮಾನವತಾವಾದಿಯ ಜನ್ಮದಿನ್ಕಕೆ ವಿಶೇಷ ಕೊಡುಗೆ ನೀಡಿದ್ದಾನೆ. 


ವರದಿ: ವರದರಾಜ್, ದಾವಣಗೆರೆ 

ದಾವಣಗೆರೆ (ಏ.14): ಮಹಾನಾಯಕ ಅಂಬೇಡ್ಕರ್ ಜನ್ಮದಿನಕ್ಕೆ (Ambedkar Jayanti) ಹರಿಹರದ ಯುವಕನೋರ್ವ ವಿಶೇಷ ನಮನ ಸಲ್ಲಿಸಿದ್ದಾನೆ. ತನ್ನ ನಾಲಿಗೆಗೆ ಪ್ಲಾಸ್ಟರ್ ಸುತ್ತಿಕೊಂಡು ನಾಲಿಗೆಯನ್ನೇ ಕುಂಚವನ್ನಾಗಿಸಿ ಅಂಬೇಡ್ಕರ್ ಚಿತ್ರ (Ambedkar Picture) ಬಿಡಿಸಿದ್ದಾನೆ. ಮಹಾಮಾನವತಾವಾದಿಯ ಜನ್ಮದಿನ್ಕಕೆ ವಿಶೇಷ ಕೊಡುಗೆ ನೀಡಿದ್ದಾನೆ. ಇದು ಭಾರತದಲ್ಲೇ ಮೊಟ್ಟ ಮೊದಲ ಬಾರಿಯ ಮೌತ್ ಅರ್ಟ್ (Mouth Art) ಎಂಬ ಹೆಗ್ಗಳಿಕೆ ಪಾತ್ರವಾಗಿದೆ. 

Tap to resize

Latest Videos

ದಾವಣಗೆರೆ (Davanagere) ಜಿಲ್ಲೆಯ ಹರಿಹರ (Harihar) ನಗರದ ಜಯ ಕುಮಾರ್ (Jaya Kumar) ಮೌತ್ ಆರ್ಟ್ ನ ಖ್ಯಾತಿಯ ತಮ್ಮ ನಾಲಿಗೆಗೆ ಪ್ಲಾಸ್ಟಿಕ್ ರ್ಯಾಪ್ ಸುತ್ತಿಕೊಂಡು ಈ ವಿಭಿನ್ನ ಕಲೆಯ ಮೂಲಕ ಬೃಹತ್ ಕಲಾಕೃತಿ ರಚಿಸಿದ್ದಾರೆ. ಹರಿಹರ ನಗರದಲ್ಲಿ ಆರ್ಟ್ ಹಾಗು ಟ್ಯಾಟೋ ಅಂಗಡಿ ಇಟ್ಟುಕೊಂಡಿರುವ ಜಯಕುಮಾರ್ ಇಂತಹ ಚಿತ್ರ ರಚನೆಯಿಂದಲೇ ಕರ್ನಾಟಕದಂತ್ಯ ಫೇಮಸ್ ಆಗಿದ್ದಾರೆ.

ಸತತ ಐದಾರು ಗಂಟೆಗಳ ಪರಿಶ್ರಮದ ಫಲವಾಗಿ  ನಾಲಿಗೆಯಲ್ಲಿ  ಅಂಬೇಡ್ಕರ್ ರವರ ಕಪ್ಪು ಬಿಳಿಪು ಚಿತ್ರ ಅರಳಿ ನಿಂತಿದೆ. ಇದನ್ನು ಬಿಡಿಸಲು ನಾಲಿಗೆಗೆ ಪ್ಲಾಸ್ಟಿಕ್ ರ್ಯಾಪ್ ಸುತ್ತಿಕೊಂಡು, ಬ್ಲಾಕ್ ಕ್ಯಾನ್ವಸ್ ಶೀಟ್‌ನಲ್ಲಿ ಬಿಳಿ ಬಣ್ಣದಲ್ಲಿ ಈ ಚಿತ್ರ ಬಿಡಿಸಿ ಅಂಬೇಡ್ಕರ್ ರವರ ಜಯಂತಿ ಅಂಗವಾಗಿ ವಿಶೇಷ ನಮನ ಸಲ್ಲಿಸಲಾಗಿದೆ.  ಕಪ್ಪು ಬಿಳುಪು ಚಿತ್ರವನ್ನು 5 ಅಡಿ ಅಗಲ ಹಾಗೂ 6 ಅಡಿ ಉದ್ದದ ಚಿತ್ರ ತಯಾರಿಸಿದ್ದಾರೆ. ಇನ್ನು ಪೆನ್ಸಿಲ್ ಆರ್ಟ್, ಮೌತ್ ಆರ್ಟ್, ಬಾಯಿಯಲ್ಲಿ ಕುಂಚ ಹಿಡಿದು ಬಿಡಿಸುವುದು,‌ ನಾಲಿಗೆಯಲ್ಲಿ ಚಿತ್ರಬಿಡಿಸುವುದು, ಹೀಗೆ ನಾನಾ ರೀತಿಯಲ್ಲಿ ಸಾಕಷ್ಟು ಸೆಲೆಬ್ರಿಟಿಗಳ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದಿದ್ದಾರೆ. 

Ambedkar Portrait Controversy ಕೋರ್ಟ್‌ನಲ್ಲಿ ರಾಷ್ಟ್ರೀಯ ಹಬ್ಬಕ್ಕೆ ಅಂಬೇಡ್ಕರ್‌ ಫೋಟೋ ಕಡ್ಡಾಯ!

ಅಷ್ಟೇ ಅಲ್ಲ, ಕಲಾವಿದ ಜಯಕುಮಾರ್ ರವರು ದರ್ಶನ್, ಸೃಜನ್, ಅಪ್ಪು, ಉಪೇಂದ್ರ, ರಚಿತರಾಮ್, ಚಿಕ್ಕಣ ಹೀಗೆ ಹಲವು ನಟರ  ಹಲವು ಚಿತ್ರಗಳನ್ನ ಬಿಡಿಸಿ ಗಮನ ಸೆಳೆದಿದ್ದರು. ಇದಲ್ಲದೆ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿಯವರ ಪೆನ್ಸಿಲ್ ಆರ್ಟ್ ಬಿಡಿಸಿ ಅವರ ಪ್ರೀತಿಯ ಪಾತ್ರರಾಗಿದ್ದಾರೆ. ಹೀಗೆ ಕೈಯಲ್ಲಿ, ಬಾಯಲ್ಲಿ ಕುಂಚ ಹಿಡಿದು ಆರ್ಟ್ ಬಿಡಿಸುವುದನ್ನು ನೋಡಿದ್ದೇವೆ ಆದರೆ ಇದೇ ಮೊಟ್ಟಮೊದಲ ಬಾರಿಗೆ ಇಡೀ ಭಾರತದಲ್ಲಿ ನಾಲಿಗೆಯಲ್ಲಿ ಅಂಬೇಡ್ಕರ್‌ರವರ ಚಿತ್ರ ಬಿಡಿಸಿ ಮೊದಲು ಪ್ರಯತ್ನದಲ್ಲೇ ಜಯಕುಮಾರ್ ಯಶಸ್ವಿಯಾಗಿದ್ದಾರೆ. ಆ ಬಳಿಕ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇದೀಗ ನಾಲಿಗೆಯಲ್ಲೇ ಇನ್ನು ಮುಂದೇ ಮಹಾನ್ ನಾಯಕರ ಚಿತ್ರ ಅರಳಲಿವೆ ಕಲೆಯನ್ನು ಪ್ರೋತ್ಸಾಯಿಸಿಬೇಕೆನ್ನುತ್ತಾರೆ ಜಯಕುಮಾರ್.

ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ: ನಗರದಲ್ಲಿ ಅಂಬೇಡ್ಕರ್ ಜಯಂತಿಯನ್ನು (Ambedkar Jayanti) ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದಾವಣಗೆರೆ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಪಾಲಿಕೆ ಆವರಣದಲ್ಲಿ ಅಂಬೇಡ್ಕರ್‌ ಜಯಂತಿ ಆಚರಿಸಲಾಯಿತು. 

ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ರಿಷ್ಯಂತ್ , ಜಿಲ್ಲಾ ಪಂಚಾಯತ್ ಸಿಇಓ ಚನ್ನಪ್ಪ ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಇದಕ್ಕು ಮುನ್ನ ನಗರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.‌ಡಾ ಅಂಬೇಡ್ಕರ್ ವೃತ್ತದಿಂದ ಪ್ರಾರಂಭಿಸಿ ಜಯದೇವ ವೃತ್ತ ಆಶೋಕ ರಸ್ತೆ, ಪಿ ಬಿ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಗೆ, ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು.

Ambedkar Jayanti 2022: ಸಂವಿಧಾನದ ಆಶಯ ಕೇಂದ್ರದ ಮೋದಿ ಸರ್ಕಾರದಿಂದ ಸಾಕಾರ

ಅಂಬೇಡ್ಕರ್ ಭವನ‌ ನಿರ್ಮಾಣಕ್ಕೆ 5 ಕೋಟಿ ಮೀಸಲು: ಅಂಬೇಡ್ಕರ್ ಭವನ ನಿರ್ಮಾಣ ಮಾಡಲು 5 ಕೋಟಿ ಹಣ ಸರ್ಕಾರದಿಂದ ಮೀಸಲಿಟ್ಟು 12 ವರ್ಷ ಆಗಿದೆ. ಆದೆ ದಾವಣಗೆರೆ ದಲಿತ ಸಂಘಟನೆಗಳ ಒಕ್ಕೂಟಗಳಲ್ಲಿ ಭಿನ್ನಾಭಿಪ್ರಾಯದಿಂದ ಅಂಬೇಡ್ಕರ್ ಭವನ ನಿರ್ಮಾಣವಾಗಲು ಸಾಧ್ಯವಾಗಿಲ್ಲ. ಆದಷ್ಟು ಬೇಗ ಅಂಬೇಡ್ಕರ್ ‌ಭವನ ನಿರ್ಮಾಣವಾಗಲು ಒಂದು ನಿವೇಶನವನ್ನು ಜಿಲ್ಲಾಡಳಿತ ನೀಡಬೇಕು, ದಲಿತ ಸಂಘಟನೆಗಳ ಒಕ್ಕೂಟ ಒಮ್ಮತಕ್ಕೆ ಬಂದು ಭವನ ನಿರ್ಮಾಣವಾಗಬೇಕೆಂದು ಮಾಯಕೊಂಡ ಶಾಸಕ ಪ್ರೋ ಲಿಂಗಣ್ಣ ಅಭಿಪ್ರಾಯಿಸಿದರು.

click me!