ಹಾವೇರಿ: ಪ್ರಣವಾನಂದ ಸ್ವಾಮೀಜಿ- ಗ್ರಾಮಸ್ಥರ ಮಧ್ಯೆ ಜಟಾಪಟಿ, 144 ಸೆಕ್ಷನ್ ಜಾರಿ

By Suvarna News  |  First Published Oct 4, 2020, 2:10 PM IST

ನೀವೂ ನಮ್ಮ ಸ್ವಾಮಿಯಲ್ಲ, ನಮ್ಮೂರಿಂದ ಹೊರಹೋಗಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರು| ಸ್ವಾಮೀಜಿ ಹಾಗೂ  ಗ್ರಾಮಸ್ಥರ ಮಧ್ಯೆ ವಾಗ್ವಾದ| ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ 144 ಸೆಕ್ಷನ್ ಜಾರಿ| ಗ್ರಾಮದಲ್ಲಿ ಬೀಡುಬಿಟ್ಟ ಎರಡೂ ನೂರಕ್ಕೂ ಅಧಿಕ ಪೋಲಿಸರು| 


ಹಾವೇರಿ(ಅ.04): ಶಿವಾಜಿ ಮಹಾರಾಜರ ಪುತ್ಥಳಿಗೆ ಹಾರ ಹಾಕುವ ಸಂಬಂಧ ಪ್ರಣವಾನಂದ ಸ್ವಾಮೀಜಿ ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ ನಡೆದ ಘಟನೆ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ.

ಅರೇಮಲ್ಲಾಪುರ ಗ್ರಾಮದ ಸರ್ಕಲ್‌ನಲ್ಲಿ ಶಿವಾಜಿ ಮೂರ್ತಿಗೆ ಇಂದು ಬೆಳಿಗ್ಗೆ ತೀವ್ರ ವಿರೋಧದ ನಡುವೆಯೂ ಶರಣಬಸವೇಶ್ವರ ಮಠದ ಪೀಠಾಧ್ಯಕ್ಷರಾಗಿರುವ ಪ್ರಣವನಾನಂದ ಸ್ವಾಮೀಜಿ ಜಿದ್ದಿಗೆ ಬಿದ್ದು  ಸ್ಥಳೀಯ ಶಾಸಕ ಅರುಣಕುಮಾರ ಪುಜಾರ್ ಜೊತೆ ಮಾಲಾರ್ಪಣೆ ಮಾಡಲು ಆಗಮಿಸಿದ್ದರು. ಈ ವೇಳೆ ಕುಪಿತಗೊಂಡ ಗ್ರಾಮಸ್ಥರು ನೀವೂ ನಮ್ಮ ಸ್ವಾಮಿಯಲ್ಲ, ನಮ್ಮೂರಿಂದ ಹೊರಹೋಗಬೇಕು ಎಂದು ಆಗ್ರಹಿಸಿದ್ದಾರೆ. ಹೀಗಾಗಿ ಸ್ವಾಮೀಜಿ ಹಾಗೂ  ಗ್ರಾಮಸ್ಥರ ಮಧ್ಯೆ ತೀವ್ರತರವಾದ ವಾಗ್ವಾದ ನಡೆದಿದೆ. 

Latest Videos

undefined

ನಿಂತಿದ್ದ ಚಕ್ಕಡಿ ಮೇಲೆ ಶವವಿಟ್ಟು ಹೋದ ಸಿಬ್ಬಂದಿ

ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಬಿಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಎರಡೂ ನೂರಕ್ಕೂ ಅಧಿಕ ಪೋಲಿಸರು ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಗ್ರಾಮಸ್ಥರು ಈಗಾಗಲೇ ಮಠಕ್ಕೆ ಬೀಗ ಹಾಕಿ ಸ್ವಾಮೀಜಿಗೆ ಘೇರಾವ್ ಹಾಕಿದ್ದಾರೆ. ಏನೆ ಮಾಡಿದರೂ ಸರಿ ನಾನು ಮಾಲೆ ಹಾಕೇ ಹಾಕುತ್ತೇನೆ ಎಂದು ಸ್ವಾಮೀಜಿ  ಹಠ ಹಿಡಿದಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. 
 

click me!