ಬಿಆರ್‌ಟಿಎಸ್ ರಸ್ತೆಯಲ್ಲಿ ಇತರ ವಾಹನಗಳಿಗೆ ಅವಕಾಶ ಕಲ್ಪಿಸಿ: ಧಾರವಾಡ ಧ್ವನಿಯಿಂದ ಪಾದಯಾತ್ರೆ

By Govindaraj S  |  First Published Jul 15, 2024, 5:12 PM IST

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಮಧ್ಯೆ ಅನುಷ್ಠಾನಗೊಂಡಿರುವ ಬಿಆರ್‌ಟಿಎಸ್ ಯೋಜನೆ ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿ ಇದ್ದೇ ಇರುತ್ತದೆ. 


ವರದಿ: ಪರಮೇಶ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಜು.15): ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಮಧ್ಯೆ ಅನುಷ್ಠಾನಗೊಂಡಿರುವ ಬಿಆರ್‌ಟಿಎಸ್ ಯೋಜನೆ ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿ ಇದ್ದೇ ಇರುತ್ತದೆ. ಬ್ಯಾರಿಕೇಡ್‌ ಕಳಪೆ ಇರುವುದರಿಂದಲೋ, ಚಿಗರಿ ಬಸ್‌ಗಳು ಸಾರ್ವಜನಿಕರ ಮೈಮೇಲೆಯೇ ಏರಿ ಬರುವುದರಿಂದಲೋ ಆ ರಸ್ತೆಯಲ್ಲಿ ಅಪಘಾತ ನಡೆಯುತ್ತಿರುವುದರಿಂದಲೋ ಹೀಗೆ ಒಂದಿಲ್ಲೊಂದು ರೀತಿಯ ಸುದ್ದಿಯಲ್ಲಿ ಈ ಯೋಜನೆ ಇದ್ದೇ ಇರುತ್ತದೆ. ಅವಳಿನಗರ ಬೆಳೆದಂತೆಲ್ಲ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗತೊಡಗಿವೆ ಹುಬ್ಬಳ್ಳಿ ಧಾರವಾಡ ನಗರಗಳ ಮಧ್ಯೆ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ.

Tap to resize

Latest Videos

ಚಿಗರಿ ಬಸ್‌ಗೆ ಪ್ರತ್ಯೇಕ ರಸ್ತೆಯ ವ್ಯವಸ್ಥೆ ಇದ್ದು ಆ ರಸ್ತೆಯಲ್ಲಿ ಚಿಗರಿ ಬಸ್‌ಗಳಲ್ಲದೇ ಖಾಸಗಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿಲ್ಲ ಬಿಆರ್‌ಟಿಎಸ್ ರಸ್ತೆ ಬಿಟ್ಟು ನಿಗದಿತ ರಸ್ತೆಯಲ್ಲಿ ಮಾತ್ರ ಖಾಸಗಿ ವಾಹನಗಳು ಸಂಚರಿಸಬೇಕಿದೆ. ಇದರಿಂದ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿವೆ.ಹೀಗಾಗಿ ಕೆಲ ಪ್ರದೇಶಗಳಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ಬಿಆರ್‌ಟಿಎಸ್ ರಸ್ತೆಯಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಧಾರವಾಡ ಧ್ವನಿ ಎಂಬ ಪಕ್ಷಾತೀತ ಹೋರಾಟ ಸಂಘಟನೆಯೊಂದು ಪಾದಯಾತ್ರೆ ಮಾಡುವ ಮೂಲಕ ಒತ್ತಾಯ ಮಾಡಿದೆ.

ಪ್ರತಿದಿನ ಶೇ.95 ರಷ್ಟು ಸಮಯ ಬಿಆರ್‌ಟಿಎಸ್ ರಸ್ತೆ ಖಾಲಿಯಾಗಿಯೇ ಇರುತ್ತವೆ.ಸಾರ್ವಜನಿಕ ರಸ್ತೆ ಪ್ರತಿದಿನ ವಾಹನಗಳಿಂದ ಕಿಕ್ಕಿರಿದು ತುಂಬಿರುತ್ತವೆ. ಹೀಗಾಗಿ ಬಿಆರ್‌ಟಿಎಸ್ ರಸ್ತೆಯಲ್ಲಿ  ಧಾರವಾಡ ಜ್ಯುಬಿಲಿ ವೃತ್ತದಿಂದ ನವಲೂರಿನವರೆಗೆ, ಉಣಕಲ್‌ನಿಂದ ರಾಣಿ ಚೆನ್ನಮ್ಮ ವೃತ್ತದವರೆಗೂ ಬೈಕ್, ಆಟೊ, ಕಾರು ಮತ್ತು ಲಘು ವಾಹನಗಳು ಸಂಚರಿಸಲು ಅನುಮತಿ ನೀಡಬೇಕು ಎಂದು ಧಾರವಾಡ ಧ್ವನಿ ಸಂಘಟನೆ ಸದಸ್ಯರು ನವಲೂರಿನಿಂದ ಬಿಆರ್‌ಟಿಎಸ್ ರಸ್ತೆಯಲ್ಲೇ ಧಾರವಾಡ ಡಿಸಿ ಕಚೇರಿವರೆಗೂ ಪಾದಯಾತ್ರೆ ನಡೆಸುವ ಮೂಲಕ ಒತ್ತಾಯ ಮಾಡಿದರು.

ಎಸ್.ನಿಜಲಿಂಗಪ್ಪ ಇಲ್ಲದಿದ್ದರೆ ಕರ್ನಾಟಕ ಏಕೀಕರಣ ಆಗುತ್ತಿರಲಿಲ್ಲ: ಸಂಸದ ಬೊಮ್ಮಾಯಿ

ಈ ಪಾದಯಾತ್ರೆಗೆ ಜೆಎಸ್‌ಎಸ್ ಸಂಸ್ಥೆ ಕೂಡ ಬೆಂಬಲ ನೀಡಿತು ನವಲೂರಿನಿಂದ ಪಾದಯಾತ್ರೆ ಬರುತ್ತಿದ್ದ ಸಂದರ್ಭದಲ್ಲಿ ಚಿಗರಿ ಬಸ್‌ ಮಧ್ಯೆ ಬಂದಿದ್ದಕ್ಕೆ ಆಕ್ರೋಶಗೊಂಡ ಹೋರಾಟಗಾರರು ಆ ಚಿಗರಿ ಬಸ್‌ಗೆ ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದರು ಅಲ್ಲದೇ ಚಿಗರಿ ಬಸ್‌ಗೆ ಪೂಜೆ ಮಾಡಿ ಅದರ ಮುಂದೆ ತೆಂಗಿನಕಾಯಿ ಒಡೆದು ವಿಭಿನ್ನ ರೀತಿಯಲ್ಲಿ ಹೋರಾಟ ನಡೆಸಿದರು ಒಟ್ಟಾರೆ ಬಿಆರ್‌ಟಿಎಸ್ ಯೋಜನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಸಮಸ್ಯೆ ಬಗೆಹರಿಸಬೇಕು ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಒಂದು ಸಮಿತಿ ರಚಿಸಬೇಕು ಆ ಸಮಿತಿಯಲ್ಲಿ ಸಾರ್ವಜನಿಕರನ್ನೂ ಸೇರಿಸಿ ಶೀಘ್ರ ಮತ್ತು ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಡಬೇಕು ಎಂದು ಹೋರಾಟಗಾರರು ಡಿಸಿ ಅವರಿಗೆ ಮನವಿ ಸಲ್ಲಿಸಿದರು.

click me!