ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರು ಕೋತಿಯೊಂದರ ಕಪಿಚೇಷ್ಟೆಗೆ ಬಲಿಯಾಗಿರುವ ದುರ್ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ (ಜು.15): ಸೋಮವಾರದ ಸಂತೆ ನಿಮ್ಮಿತ್ತ ದೇವಸ್ಥಾನದ ಮುಂಭಾಗದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರು ಕೋತಿಯೊಂದರ ಕಪಿಚೇಷ್ಟೆಗೆ ಬಲಿಯಾಗಿರುವ ದುರ್ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಹುಲಿ, ಚಿರತೆ ಹಾಗೂ ಆನೆ ದಾಳಿಗೆ ಮನುಷ್ಯರು ಸಾಯುವುದನ್ನು ಕೇಳಿದ್ದೇವೆ. ಇದೇಗೆ ಮಂಗನ ದಾಳಿಯಿಂದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆಶ್ಚರ್ಯಪಟ್ಟುಕೊಂಡರೂ ಇದು, ಘಟನೆ ನಡೆದಿರುವುದು ಸತ್ಯವಾಗಿದೆ. ಬಾಗಲಕೋಟೆ ಜಿಲ್ಲೆಯ ಆಲಗೂರು ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಸುರೇಖಾ ಕಂಬಾರ (44) ಎಂದು ಗುರುತಿಸಲಾಗಿದೆ. ಸುರೇಖಾ ಮೂಲತಃ ಹುನ್ನೂರು ಗ್ರಾಮದವರಾಗಿದ್ದು, ಇಂದು ಸೋಮವಾರ ಸಂತೆಯಾಗಿದ್ದ ಹಿನ್ನೆಲೆಯಲ್ಲಿ ತರಕಾರಿ ಮಾರಾಟ ವ್ಯಾಪಾರಕ್ಕೆ ಬಂದಿದ್ದರು. ಆದರೆ, ಕಪಿ ಚೇಷ್ಟೆಯಿಂದ ಜೀವ ತೆತ್ತಿದ್ದಾರೆ.
undefined
ಬೆಂಗಳೂರು - ಹೊನ್ನಾವರ ಹೆದ್ದಾರಿಯಲ್ಲಿ ಗುಡ್ಡ ಕುಸಿತ; ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರ ಪರದಾಟ
ಆಲಗೂರ ಗ್ರಾಮದಲ್ಲಿ ಪ್ರತಿ ಸೋಮವಾರ ಬೆಳಗ್ಗೆ ಸಂತೆ ನಡೆಯುತ್ತದೆ. ಸಂತೆಗೆ ವಿವಿಧ ಗ್ರಾಮಗಳಿಂದ ವ್ಯಾಪಾರಿಗಳು ಬಂದು ತರಕಾರಿ ಮಾರಾಟ ಮಾಡಿ ಹೋಗುತ್ತಾರೆ. ಪ್ರತಿ ವಾರದಂತೆ ಈ ಸೋಮವಾರವೂ ಸಂತೆಗೆ ತರಕಾರಿ ತೆಗೆದುಕೊಂಡು ಬಂದ ಸುರೇಖಾ ಸಂತೆ ಮೈದಾನದಲ್ಲಿದ್ದ ಚಂದ್ರಾದೇವಿ ದೇವಸ್ಥಾನದ ಕೆಳಭಾಗದಲ್ಲಿ ತರಕಾರಿಗಳನ್ನು ಹಾಕಿಕೊಂಡು ವ್ಯಾಪಾರ ಆರಂಭಿಸಿದ್ದಾರೆ. ಆದರೆ, ದೇವಸ್ಥಾನದ ಮೇಲೆ ಸುತ್ತಲೂ ಕಟ್ಟಲಾದ ಕಂಬಿಗಳ ಮೇಲೆ ಕೋತಿಗಳು ಹಾರಾಡುತ್ತಿದ್ದವು. ಜೊತೆಗೆ, ಆಗಾಗ ಬಂದು ತರಕಾರಿಗಳನ್ನು ಕದ್ದೊಯ್ಯುತ್ತಿದ್ದವು. ಆದರೆ, ಕಪಿಚೇಷ್ಟೆಯನ್ನು ಗಮನಿಸದೇ ತನ್ನ ವ್ಯಾಪಾರದಲ್ಲಿ ಮಗ್ನನಾಗಿದ್ದಾಳೆ.
ಇನ್ನು ದೇವಸ್ಥಾನದ ಎರಡನೇ ಮಹಡಿಯ ಮೇಲಿದ್ದ ಕಂಬಿಯ ಮೇಲೆ ನೇತಾಡುತ್ತಿದ್ದ ಕೋತಿಯ ಭಾರಕ್ಕೆ ತೀರಾ ಹಳತಾಗಿದ್ದ ಸಿಮೆಂಟ್‌ನ ಕಂಬಿಯು ಮುರಿದು ಮೇಲಿಂದ ಸೀದಾ ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳೆಯ ತಲೆಯ ಮೇಲೆ ಬಿದ್ದಿದೆ. ಸುಮಾರು 100 ಕೆ.ಜಿ.ಗಿಂತ ಹೆಚ್ಚು ಭಾರವಿದ್ದ ಸಿಮೆಂಟಿನ ಹಳೆಯ ಕಂಬಿ ಮಹಿಳೆ ತಲೆ ಮೇಲೆ ಬಿದ್ದಾಕ್ಷಣ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವ ಉಂಟಾಗಿದೆ. ಸುಮಾರು 2 ಅಡಿ ಜಾಗದಲ್ಲಿ ಮಹಿಳೆಯ ರಕ್ತದ ಕೋಡಿ ಹರಿದಿದೆ. ಇನ್ನು ಆಂಬುಲೆನ್ಸ್‌ಗೆ ಕರೆ ಮಾಡುವಷ್ಟರಲ್ಲಿ ಮಹಿಳೆ ಪ್ರಾಣಪಕ್ಷಿ ಹಾರಿಹೋಗಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್; ಸಿಬಿಐ ಬಿಗಿ ಹಿಡಿತದಿಂದ ಪರದಾಟ
ಇನ್ನು ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಜಮಖಂಡಿ ಗ್ರಾಮಿಣ ಠಾಣಾ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ನಂತರ, ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನಿಸಿದ್ದಾರೆ.