Haveri: ಕರ್ನಾಟಕ ಜಾನಪದ ವಿವಿಯಲ್ಲಿ ಕಮಿಷನ್‌ ದಂಧೆ..!

By Kannadaprabha News  |  First Published Feb 17, 2022, 12:41 PM IST

*    ಕುಲಸಚಿವರು, ಕುಲಪತಿಗಳ ಜೊತೆ ಮ್ಯಾಚ್‌ ಫಿಕ್ಸಿಂಗ್‌
*   ಖಾಯಂ ನೇಮಕಾತಿ ಮಾಡದಂತೆ ಸರ್ಕಾರಕ್ಕೆ ಪತ್ರ ಬರೆದ ಅಧಿಕಾರಿಗಳು
*   ಹಲವಾರು ಕನಸು ಹೊತ್ತು ಕರ್ನಾಟಕ ಜಾನಪದ ವಿವಿ ಸ್ಥಾಪಿಸಿದ್ದ ಬೊಮ್ಮಾಯಿ 


ಶಿಗ್ಗಾಂವಿ(ಫೆ.17):  ಅಧಿಕಾರಿಗಳ ಕಮಿಷನ್‌ ದಂಧೆಯ(Commission Racket) ಅಟ್ಟಹಾಸಕ್ಕೆ ಕರ್ನಾಟಕ ಜಾನಪದ ವಿವಿಯ(Karnataka Folklore University) ದಿಕ್ಕು ತಪ್ಪಿದೆ. ಅಧಿಕಾರಿಗಳೇ ಖಾಯಂ ನೇಮಕಾತಿ ಮಾಡದಂತೆ ಸರ್ಕಾರಕ್ಕೆ ಪತ್ರಗಳನ್ನು ಬರೆದಿದ್ದಾರೆ. ಕುಲಸಚಿವರು, ಕುಲಪತಿಗಳ ಜೊತೆ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡು 9 ವರ್ಷ ಕಜಾ ವಿವಿಯ ಹಾದಿ ತಪ್ಪಿಸಿದ್ದಾರೆ ಎಂದು ಜಾನಪದ ಪರಿಷತ್‌ ತಾಲೂಕು ಅಧ್ಯಕ್ಷ ಬಸವರಾಜ ಗೋಬ್ಬಿ(Basavarah Gobbi) ಆರೋಪಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹಲವಾರು ಕನಸುಗಳನ್ನು ಹೊತ್ತು ಕರ್ನಾಟಕ ಜಾನಪದ ವಿವಿ ಯನ್ನು ಸ್ಥಾಪಿಸಿದ್ದಾರೆ. ಆದರೆ ಇಲ್ಲಿನ ಅಧಿಕಾರಿಗಳು ಕಮಿಷನ್‌ ದಂಧೆಗೆ ನಿಂತು ಬೊಮ್ಮಾಯಿಯವರ ಕನಸ್ಸಿಗೆ ಎಳ್ಳುನೀರು ಬಿಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

undefined

Dharwad| ಕರ್ನಾಟಕ ವಿವಿ: ಸಹ-ಪ್ರಾಧ್ಯಾಪಕ ನೇಮಕಾತಿಯಲ್ಲಿ ಅಕ್ರಮ..?

2015ರಲ್ಲಿ ಡಿ.ಬಿ. ನಾಯಕ ಹಣಕಾಸು ಅಧಿಕಾರಿಯಾಗಿ ಆರುವರೆ ಕೋಟಿ ರುಪಾಯಿಗಳ ಕಾಮಗಾರಿಗಳನ್ನು ಬಿಡುಗಡೆ ಮಾಡುತ್ತಾರೆ. ಆ ಹಣ ಯಾವುದು? ಹಿರಿಯ ಸಂಶೋಧನಾಧಿಕಾರಿಯನ್ನು ನೇಮಕ ಮಾಡಿಕೊಂಡು 4 ತಿಂಗಳಾದರೂ ಸರ್ಕಾರಕ್ಕೆ ಮಾಹಿತಿ ನೀಡದೆ 60 ಸಾವಿರ ವೇತನ ಹೆಚ್ಚಳ ಮಾಡುತ್ತಾರೆ, ನಕಲಿ ಪ್ರಾದೇಶಿಕ ಕೇಂದ್ರಗಳನ್ನು ತೆರೆದು ಕೋಟ್ಯಾಂತರ ವೆಚ್ಚವನ್ನು ಪಾವತಿ ಮಾಡಿರುವ ಕುಲಸಚಿವರು ಪ್ರಧಾನ ಕಾರ್ಯದರ್ಶಿಗಳಿಗೆ ಎಷ್ಟುಪತ್ರಗಳನ್ನು ಬರೆದಿದ್ದಾರೆ? ಕಜಾ ವಿವಿ ಮೇಲೆ ಕೇಸ್‌(Case) ದಾಖಲಿಸಿದ್ದ ಹರಿಲಾಲ್‌ ಅವರಿಗೆ ಲಕ್ಷಗಟ್ಟಲೇ ಹಣ(Money) ನೀಡಲಾಗಿದೆ, ಸ್ಥಳೀಯರಾದ ಕುಲಪತಿಯಾಗುವ ಅರ್ಹತೆ ಹೊಂದಿರುವ ಸಣ್ಣರಾಮರನ್ನು ವ್ಯವಸ್ಥಿತವಾಗಿ ಡಿ.ಬಿ. ನಾಯಕ ಹಾದಿ ತಪ್ಪಿಸಿದ್ದಾರೆ ಎಂದು ದೂರಿದರು.

2012-13ರಲ್ಲಿ ಗುಲ್ಬರ್ಗ ಯುನಿವರ್ಸಿಸಿಟಿಯಲ್ಲಿ(Gulbarga University) ಪರೀಕ್ಷಾ ಅವ್ಯವಹಾರಕ್ಕೆ(Exam Scandal) ಸಂಬಂಧಿಸಿದಂತೆ ಡಿ.ಬಿ. ನಾಯಕರ ಮೇಲೆ ಎಫ್‌ಐಆರ್‌(FIR) ದಾಖಲಾಗಿದೆ ಇಂತವರು ಕಜಾ ವಿವಿಗೆ ರಿಜಿಸ್ಟರ್‌ರಾಗಿ ಬರುತ್ತಾರೆ. ಅಲ್ಲದೆ ಅಕ್ರಮವಾಗಿ ಹಲವಾರು ಹುದ್ದೆಗಳನ್ನು ನಿರ್ವಹಿಸಿ ಅಕ್ರಮ ನಡೆಸಿದ್ದಾರೆ ಎಂದರು ಆರೋಪಿಸಿದರು.

ಈ ಎಲ್ಲ ಅಕ್ರಮಗಳನ್ನು ನ್ಯಾಯಾಧೀಶರಿಂದ ತನಿಖೆ ಮಾಡಿಸಿ ಅಧಿಕಾರಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಅಕ್ರಮವಾದ ಹಣವನ್ನು ಕಜಾವಿವಿಗೆ ಸಂದಾಯ ಮಾಡಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೋಳ್ಳುತ್ತೆವೆ ಎಂದರು.

ಧಾರವಾಡ: ಕರ್ನಾಟಕ ವಿವಿ ಪ್ರೊಫೆಸರ್‌ ಮೊಬೈಲ್‌ ಹ್ಯಾಕ್‌, ಹಣಕ್ಕಾಗಿ ಬ್ಲ್ಯಾಕ್‌ಮೇಲ್‌

ಸುದ್ದಿಗೋಷ್ಠಿಯಲ್ಲಿ ಹಿರೇಕೆರೂರ ಬಂಜಾರ ಸಮಾಜದ ತಾಲೂಕು ಉಪಾಧ್ಯಕ್ಷ ಹುಚ್ಚಾನಾಯಕ ಲಮಾಣಿ, ಕಲಾವಿದರಾದ ನಿಂಗಪ್ಪ ಕಾಳೆ, ಪಾರ್ವತಿ ಕಾಳೆ, ರಮೇಶ ಬಾಲಣ್ಣನವರ, ಮಂಜುನಾಥ ಗೋಬ್ಬಿ ಇದ್ದರು.

ಕವಿವಿಯಲ್ಲಿ ಕೋಟಿ ಮೊತ್ತದ ಹಗರಣ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ(Karnatak University) 2013-14ರಲ್ಲಿ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಚಾವಣಿ ಮೇಲೆ 1 ಕೋಟಿಗೂ ಹೆಚ್ಚು ಸಾರ್ವಜನಿಕ ಹಣ ವ್ಯಯಿಸಿ ಅಳವಡಿಸಲಾದ ಸೋಲಾರ ಪ್ಯಾನಲ್‌ ಹಿಂದೆ ವ್ಯಾಪಕ ಭ್ರಷ್ಟಾಚಾರ(Corruption) ನಡೆದಿದೆ ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಮಾಜಿ ಸದಸ್ಯ ಜಯಂತ ಕೆ.ಎಸ್‌. ಆರೋಪಿಸಿದ್ದರು(Allegation).

ಕಳೆದ ವರ್ಷ ಡಿ.04 ರಂದು ಈ ಕುರಿತು ಪ್ರಕಟಣೆ ನೀಡಿದ್ದ ಅವರು, ಈ ಭ್ರಷ್ಟಾಚಾರದ ಬಗ್ಗೆ ಕಳೆದ ಜನೇವರಿ ತಿಂಗಳಲ್ಲಿ ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಮಾಹಿತಿ ಕೇಳಲಾಗಿತ್ತು. ಈ ಸೋಲಾರ ಪ್ಯಾನಲ್‌(Solar Panel) ದಿಂದ 6 ವರ್ಷಗಳಲ್ಲಿ ಒಂದು ಯುನಿಟ್‌ ವಿದ್ಯುತ್‌(Electricity) ಕೂಡ ಉತ್ಪಾದನೆ ಆಗಿಲ್ಲ ಎಂದು ವಿಶ್ವವಿದ್ಯಾಲಯ ಅಧಿಕಾರಿಗಳು ಮಾಹಿತಿ ನೀಡಿದ್ದರು. ಈ ಮಾಹಿತಿಯ ಆಧಾರದ ಮೇಲೆ ಅಂದಿನ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕುಲಪತಿ ಡಾ. ಕೆ.ಬಿ. ಗುಡಸಿ(Dr KB Gidasi) ಅವರನ್ನು ಒತ್ತಾಯಿಸಿದರೆ, ಈ ಹಿಂದಿನ ಅವಧಿಯಲ್ಲಿ ನಡೆದಿರುವ ಹಗರಣದ(Scam) ಬಗ್ಗೆ ನಾನೇಕೆ ತಲೆ ಕೆಡಿಸಿಕೊಳ್ಳಲಿ ಎಂದು ಕುಲಪತಿಗಳು ಮೌಖಿಕವಾಗಿ ಉತ್ತರಿಸುತ್ತಾರೆ. ಒಂದು ಕೋಟಿಗೂ ಅಧಿಕ ಸಾರ್ವಜನಿಕ ಹಣ ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಈ ಹಗರಣದ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರೂ ತಪ್ಪಿತಸ್ಥರ ವಿರುದ್ಧ ಕುಲಪತಿಗಳು(Chancellor) ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿರುವುದು ಸಂಶಯಕ್ಕೆ ಕಾರಣವಾಗಿದೆ.
 

click me!