ಕೋಲಾರ (ಸೆ.22): ರೇಷನ್ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ ಆಗಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ದಾಸ್ತಾನು ಕೇಂದ್ರದಿಂದಲೇ ಮಿಶ್ರಣ ಮಾಡಿರುವ ಆರೋಪ ದಟ್ಟವಾಗಿದೆ.
ಕೀಲಗಾಣಿ ಹಾಗೂ ಊರುಕುಂಟೆ ಮಿಟ್ಟೂರು ಪಡಿತರ ಕೇಂದ್ರದಲ್ಲಿ ಪತ್ತೆಯಾಗಿರುವುದಾಗಿ ಸುದ್ದಿ ಹಬ್ಬಿದ್ದು, ಮುಳಬಾಗಿಲು ತಾಲೂಕಿನ ಆಹಾರ ವಿತರಣಾ ಕೇಂದ್ರಗಳಲ್ಲಿ ಈ ರೀತಿಯ ಅಕ್ಕಿ ವಿತರಿಸಿರುವ ದೂರುಗಳು ಕೇಳಿಬಂದಿವೆ. ಅನ್ನ ಮಾಡಲು ಇಟ್ಟರೆ ಅಕ್ಕಿ ಕರಗಿ ಹೋಗುತ್ತಿರುವುದಾಗಿ ಆರೋಪಿಸಲಾಗಿದೆ.
ಪ್ಲಾಸ್ಟಿಕ್ ಅಕ್ಕಿ ಮಾರಾಟ : ಸೂಪರ್ ಮಾರ್ಕೆಟ್ ವಿರುದ್ಧ ಆಕ್ರೋಶ
ಆದರೆ ಆಹಾರ ಇಲಾಖೆ ಅಧಿಕಾರಿಗಳು ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಅಪೌಷ್ಟಿಕ ಅಹಾರ ಕೊರತೆ ಇರುವ ಮಕ್ಕಳಿಗೆ ಪೌಷ್ಟಿಕ ಅಂಶವುಳ್ಳ ಕೆಲವು ಪದಾರ್ಥಗಳನ್ನು ಬೆರೆಸಿ ಕೊಡಲಾಗುತ್ತಿದೆ. ಇದರಿಂದಾಗಿ ಕೆಲವರಲ್ಲಿ ತಪ್ಪು ತಿಳುವಳಿಕೆ ಉಂಟಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.