ತಾಲೂಕಿನಲ್ಲಿರುವ ಬಹುತೇಕ ಗ್ರಾಮ ಪಂಚಾಯಿತಿಗಳಿಂದ ಸರ್ಕಾರದ ಬೊಕ್ಕಸಕ್ಕೆ ವಿವಿಧ ಯೋಜನೆಗಳ ದುರುಪಯೋಗ ಹಾಗೂ ಭಾರೀ ಭ್ರಷ್ಟಾಚಾರಗಳಿಂದ ಕೋಟ್ಯಂತರ ರು. ವಂಚನೆಯಾಗುತ್ತಿದೆ. ಇದಕ್ಕೆ ತಾಲೂಕು ಪಂಚಾಯಿತಿ ಮುಖ್ಯ ನಿರ್ವಹಣಾಧಿಕಾರಿಗಳೇ ನೇರ ಹೋಣೆ
ತಿಪಟೂರು (ಅ.20): ತಾಲೂಕಿನಲ್ಲಿರುವ ಬಹುತೇಕ ಗ್ರಾಮ ಪಂಚಾಯಿತಿಗಳಿಂದ ಸರ್ಕಾರದ ಬೊಕ್ಕಸಕ್ಕೆ ವಿವಿಧ ಯೋಜನೆಗಳ ದುರುಪಯೋಗ ಹಾಗೂ ಭಾರೀ ಭ್ರಷ್ಟಾಚಾರಗಳಿಂದ ಕೋಟ್ಯಂತರ ರು. ವಂಚನೆಯಾಗುತ್ತಿದೆ. ಇದಕ್ಕೆ ತಾಲೂಕು ಪಂಚಾಯಿತಿ ಮುಖ್ಯ ನಿರ್ವಹಣಾಧಿಕಾರಿಗಳೇ ನೇರ ಹೋಣೆಯಾಗಿದ್ದು, ತೆರಿಗೆ ವಂಚನೆ ಮಾಡಿರುವ ಪಿಡಿಓಗಳ ಮೇಲೆ ಕ್ರಮ ಜರುಗಿಸದೆ ರಕ್ಷಣೆಗೆ ನಿಂತಿದ್ದಾರೆಂದು ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ ಆರೋಪ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಸವಲತ್ತುಗಳನ್ನು ನೀಡಿ ಸರ್ಕಾರಿ ಅಧಿಕಾರಿಗಳನ್ನು ನೇಮಿಸಿದರೆ ಇವರು ಸೇವಾ ನಿಷ್ಠೆ ಪ್ರದರ್ಶಿಸದೆ ಮೇಲಾಧಿಕಾರಿಗಳೊಂದಿಗೆ ಶಾಮೀಲಾಗಿದ್ದು ಅಧಿಕಾರ ದುರುಪಯೋಗ ಮಾಡಿ ಸಾರ್ವಜನಿಕರಿಗೆ ಹಾಗೂ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. 750 ಕೋಟಿ ತೆರಿಗೆಯಲ್ಲಿ ರೈತರಿಂದ ಶೇ.56ರಷ್ಟುತೆರಿಗೆ ವಸೂಲಿ ಮಾಡುತ್ತಿದ್ದು ರೈತರಿಗೆ ಸರಿಯಾಗಿ ಕೊಡುತ್ತಿಲ್ಲ. 1995 ರಿಂದ 2022ವರಗೆ ನಿಯಮದ ಪ್ರಕಾರ ಲೆಕ್ಕ ಪರಿಶೋಧನಾ ಸಮಿತಿ ರಚಿಸಿಲ್ಲ. ಆಯವ್ಯಯ ಪತ್ರಿಕೆ ಹಾಜರುಪಡಿಸಿಲ್ಲ. ಅನುದಾನ ರಿಜಿಸ್ಟರ್ ನಿರ್ವಹಿಸಿಲ್ಲ, ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ನಿರ್ವಹಣೆ ಇಲ್ಲ. ಸರ್ಕಾರದ ಅನುದಾನವನ್ನು ಸರ್ಕಾರದ ಆದೇಶದಂತೆ ಖರ್ಚು ಮಾಡಿಲ್ಲ. ಮಾಸಿಕ-ಅರ್ಧ-ವಾರ್ಷಿಕ ಲೆಕ್ಕಪತ್ರಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಕಳಿಸುವುದಿಲ್ಲ, ಯಾವುದೇ ರಶೀದಿ ಪುಸ್ತಕಗಳು ದಾಸ್ತಾನು ಕಾಣಿಸುತ್ತಿಲ್ಲ, ತೆರಿಗೆ ವಸೂಲಾತಿ ಕುಂಠಿತಗೊಂಡಿದ್ದು, ತೆರಿಗೆ ಆದಾಯ ರಿಜಿಸ್ಟರ್‌ಗಳನ್ನು ನಿರ್ವಹಣೆ ತಪಾಸಣೆಗೆ ಹಾಜರುಪಡಿಸಿಲ್ಲ. ಕೇಂದ್ರದ ಮಹತ್ತರ ಯೋಜನೆ ಕುಡಿಯುವ ನೀರು, ಬೀದಿ ದೀಪ ಸಾಮಗ್ರಿ ಖರೀದಿ ನಿರ್ವಹಣೆಯಲ್ಲಿ ನ್ಯೂನತೆಗಳು ಕಂಡುಬರುತ್ತಿವೆ. ಇನ್ನೂ ಹಲವಾರು ನ್ಯೂನತೆಗಳು ಕಂಡು ಬಂದಿದ್ದು ದಾಖಲೆಗಳೊಂದಿಗೆ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ದೂರು ನೀಡಿದ್ದೇವೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಚಂದ್ರಕಲಾ, ಜಿಲ್ಲಾ ಘಟಕದ ಮಂಜುಳಾ, ರೇಣುಕಮೂರ್ತಿ, ರಾಜಶೇಖರ್, ಈಶ್ವರಯ್ಯ, ಮಂಜುಳಾ, ರಂಗಸ್ವಾಮಿ, ಶಿವಲಿಂಗಯ್ಯ, ಚಂದ್ರಯ್ಯ ಬಸವರಾಜು, ಕುಮಾರಸ್ವಾಮಿ ಮಹಾದೇವಮ್ಮ, ಎಣ್ಣಜ್ಜ, ಕುಮಾರಯ್ಯ, ಜವರಪ್ಪ, ಶಿವಲಿಂಗಪ್ಪ, ಹೊನ್ನಪ್ಪ ಕೆಂಪಯ್ಯ, ಚಿತ್ತಯ್ಯ, ರಮೇಶ್, ವಿರೂಪಾಕ್ಷಯ್ಯ, ಮರುಳಯ್ಯ, ಸಿದ್ದಲಿಂಗಯ್ಯ, ಮಹದೇವಯ್ಯ ಮತ್ತಿತರ ರೈತರುಗಳಿದ್ದರು.
ಬಾಕ್ಸ್ :
ದಿನಸಿ, ಎಣ್ಣೆ ಪದಾರ್ಥಗಳು ಹಾಗೂ ಗೃಹೋಪಯೋಗಿ ವಸ್ತುಗಳ ಮೇಲೆ ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ)ನಮೂದಿಸಲಾಗಿರುತ್ತದೆ. ಆದರೆ ಕೃಷಿ ಯಂತ್ರೋಪಕರಣಗಳ ಮೇಲೆ ಗರಿಷ್ಠ ಮಾರಾಟ ಬೆಲೆ ನಮೂದಿಸದೆ ರೈತರನ್ನು ವಂಚಿಸಲಾಗುತ್ತಿದ್ದು ಕಂಪನಿ ಮತ್ತು ಡೀಲರ್‌ಗಳಿಗೆ ಕೇಂದ್ರ ಸರ್ಕಾರ 2021ರಲ್ಲೇ ಆದೇಶ ನೀಡಿದ್ದರೂ ಜಾರಿಯಾಗಿಲ್ಲ. ಕೂಡಲೇ ಕೃಷಿ ಯಂತ್ರೋಪಕರಣಗಳ ಮೇಲೆ ಎಂಆರ್‌ಪಿ ಬೆಲೆ ನಮೂದಿಸಬೇಕು.
ಕೊಂಚೆ ಶಿವರುದ್ರಪ್ಪ ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಕಿಸಾನ್ ಸಂಘ
ತೆರಿಗೆ ವಂಚಕರ ರಕ್ಷಣೆಗೆ ನಿಂತಿರುವ ಇಓ: ಆರೋಪ
ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯ ದರ್ಶಿ ಕೊಂಚೆ ಶಿವ ರುದ್ರಪ್ಪ ಆರೋಪ
ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು
ಆಯವ್ಯಯ ಪತ್ರಿಕೆ ಹಾಜರುಪಡಿಸಿಲ್ಲ. ಅನುದಾನ ರಿಜಿಸ್ಟರ್ ನಿರ್ವಹಿಸಿಲ್ಲ, ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ನಿರ್ವಹಣೆ ಇಲ್ಲ.
ಗ್ರಾಪಂಗಳಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರು. ವಂಚನೆ: ಕೊಂಚೆ ಶಿವರುದ್ರಪ್ಪ
ಕೇಂದ್ರ ಸರ್ಕಾರ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಸವಲತ್ತುಗಳನ್ನು ನೀಡಿ ಸರ್ಕಾರಿ ಅಧಿಕಾರಿಗಳನ್ನು ನೇಮಿಸಿದರೆ ಇವರು ಸೇವಾ ನಿಷ್ಠೆ ಪ್ರದರ್ಶಿಸದೆ ಮೇಲಾಧಿಕಾರಿಗಳೊಂದಿಗೆ ಶಾಮೀಲಾಗಿದ್ದು ಅಧಿಕಾರ ದುರುಪಯೋಗ
ಅಧಿಕಾರ ದುರುಪಯೋಗ ಮಾಡಿ ಸಾರ್ವಜನಿಕರಿಗೆ ಹಾಗೂ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ.