ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿಗೆ ಕೋಲಾರದ ಯುವತಿ ನೇಮಕ

By Kannadaprabha News  |  First Published Oct 20, 2022, 3:00 AM IST

ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಯುಎನ್‌ಎಚ್‌ಆರ್‌ಸಿಗೆ ಕೋಲಾರದ ಯುವತಿ ಡಾ.ಕೆ.ಪಿ.ಅಶ್ವಿನಿ ನೇಮಕ


ಕೋಲಾರ(ಅ.20):  ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಯುಎನ್‌ಎಚ್‌ಆರ್‌ಸಿಗೆ ಕೋಲಾರದ ಯುವತಿ ಡಾ.ಕೆ.ಪಿ.ಅಶ್ವಿನಿ ನೇಮಕವಾಗಿದ್ದಾರೆ. ಕೋಲಾರ ತಾಲೂಕಿನ ಕಸಬಾ ಕುರುಬರಹಳ್ಳಿ ಗ್ರಾಮದ ವಿ.ಪ್ರಸನ್ನಕುಮಾರ್‌ ಹಾಗೂ ಜಯಮ್ಮ ದಂಪತಿಯ ಜೇಷ್ಟ ಪುತ್ರಿ ಕೆ.ಪಿ.ಅಶ್ವಿನಿ ಎಂಪಿಲ್‌, ಪಿಹೆಚ್‌.ಡಿ ಪದವಿಯನ್ನು ಜವಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯ ನವದೆಹಲಿಯಲ್ಲಿ ಪಡೆದಿದ್ದಾರೆ.

ಬೆಂಗಳೂರು ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸಂಸ್ಥೆಯಲ್ಲಿ ಒಡಿಸ್ಸಾ ಮತ್ತು ಛತ್ತೀಸ್‌ಘಡ ರಾಜ್ಯಗಳ ಆದಿವಾಸಿಗಳ ಪ್ರದೇಶಗಳಲ್ಲಿ ಗಣಿಗಾರಿಕೆಯಿಂದ ಆದಿವಾಸಿಗಳ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ವಿಶೇಷ ಆಧ್ಯಯನ ಮಾಡಿದರು.

Latest Videos

undefined

UN Report: ಭಾರತದಲ್ಲಿ ಬಡವರ ಸಂಖ್ಯೆ 41 ಕೋಟಿ ಇಳಿಕೆ!

ನಾಲ್ಕು ವರ್ಷಗಳಿಂದ ಸೆಂಟ್‌ ಜೋಸೆಫ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಇವರು ದಲಿತ ಚಳವಳಿಗಳಲ್ಲಿ ಭಾಗವಹಿಸಿ ಮೂಲಕ ಗಮನ ಸೆಳೆದಿದ್ದಾರೆ. ಪ್ರಸ್ತುತ ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಯು.ಎನ್‌.ಹೆಚ್‌.ಆರ್‌.ಸಿ ಆಗಿ ನೇಮಕವಾಗಿದ್ದಾರೆ.

ಜಿನೀವಾ ಮೂಲದ 47 ಮಂದಿ ಸದಸ್ಯರ ವಿಶ್ವಸಂಸ್ಥೆಯ ಮಾನವ ಹಕ್ಕು ಸಂಸ್ಥೆಯು ಡಾ.ಅಶ್ವಿನಿ ಅವರ ನೇಮಕಾತಿಯನ್ನು ಅನುಮೋದಿಸಿದೆ. ಪ್ರಸ್ತುತ ವರ್ಣಬೇಧ, ಕ್ಸೆನೋಫೋಬಿಯಾ ಮತ್ತು ಅಸಹಿಷ್ಣುತೆಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸಬೇಕಾಗುತ್ತದೆ.
 

click me!