Belagavi News: QR Code ಮೂಲಕವೇ ಸಿಗಲಿದೆ ಎಲ್ಲ ಮಾಹಿತಿ!

Published : Dec 16, 2022, 08:17 PM ISTUpdated : Dec 16, 2022, 08:21 PM IST
Belagavi News: QR Code ಮೂಲಕವೇ ಸಿಗಲಿದೆ ಎಲ್ಲ ಮಾಹಿತಿ!

ಸಾರಾಂಶ

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಡಿ.19 ರಿಂದ ಹತ್ತು ದಿನಗಳ ಕಾಲ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜತೆಗೆ ವಿನೂತನ ಹಾಗೂ ಪ್ರಥಮ ಬಾರಿಗೆ ಕ್ಯೂಆರ್‌ ಕೋಡ್‌ ಆಧಾರಿತ ಗುರುತಿನ ಚೀಟಿ ನೀಡಲು ಜಿಲ್ಲಾಡಳಿತ ಕ್ರಮಕೈಗೊಂಡಿದೆ.

ಜಗದೀಶ ವಿರಕ್ತಮಠ

ಬೆಳಗಾವಿ (ಡಿ.16) : ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಡಿ.19 ರಿಂದ ಹತ್ತು ದಿನಗಳ ಕಾಲ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜತೆಗೆ ವಿನೂತನ ಹಾಗೂ ಪ್ರಥಮ ಬಾರಿಗೆ ಕ್ಯೂಆರ್‌ ಕೋಡ್‌ ಆಧಾರಿತ ಗುರುತಿನ ಚೀಟಿ ನೀಡಲು ಜಿಲ್ಲಾಡಳಿತ ಕ್ರಮಕೈಗೊಂಡಿದೆ.

ಸುವರ್ಣ ವಿಧಾನ ಸೌಧದಲ್ಲಿ ಪ್ರತಿ ವರ್ಷ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಬರುವ ಶಾಸಕರು, ಪರಿಷತ್‌ ಸದಸ್ಯರು, ಅಧಿಕಾರಿಗಳು, ಸಚಿವರಿಗೆ ಗುರುತಿನ ಚೀಟಿಯನ್ನು ನೀಡುವುದರ ಜತೆಗೆ ಶಾಸಕರು, ಸಚಿವರು ವಾಸ್ತವ್ಯ ಹೂಡಿರುವ ಹೋಟೆಲ್‌ ಹಾಗೂ ಇನ್ನೀತರ ಸ್ಥಳಗಳ ಮಾಹಿತಿ ಇರುವುದ ಕೈ ಪಿಡಿ ಹಾಗೂ ಗುರುತಿನ ಚೀಟಿಯನ್ನು ಮುದ್ರಣ ಮಾಡಲಾಗುತ್ತಿತ್ತು. ಈ ಭಾರಿಯ ಚಳಿಗಾಲದ ಅಧಿವೇಶನಕ್ಕೆ ಜಿಲ್ಲಾಡಳಿತ ಪ್ರಥಮ ಬಾರಿಗೆ ವಿನೂತನ ಕಾರ್ಯಕ್ಕೆ ಮುಂದಾಗಿ, ದುಂದುವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮಕೈಮಗಳನ್ನು ಕೈಗೊಂಡಿದೆ.

DAVANAGERE: ಡಿ.20ರಂದು ಬೆಳಗಾವಿಯ ಸುವರ್ಣಸೌಧದ ಎದುರು ‌ರೈತರಿಂದ ಪ್ರತಿಭಟನೆ

ಪ್ರತಿ ವರ್ಷ ಚಳಿಗಾಲ ಅಧಿವೇಶ ಸಂದರ್ಭದಲ್ಲಿ ಸಚಿವರು, ಶಾಸಕರ, ಅಧಿಕಾರಿಗಳು ವಾಸಿಸುವ ವಸತಿ, ಸಂಚರಿಸುವ ವಾಹನ ಸಂಖ್ಯೆ ಸೇರಿದಂತೆ ವಿವಿಧ ಮಾಹಿತಿ ಒಳಗೊಂಡಿರುವ 1ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಪ್ರಕಟಿಸಲಾಗುತಿತ್ತು. ಇದಕ್ಕಾಗಿ ಲಕ್ಷಾಂತರ ರು. ವೆಚ್ಚ ಮಾಡಲಾಗುತಿತ್ತು. ಈ ಬಾರಿ ಕ್ಯೂಆರ್‌ ಕೋಡ್‌ ಆಧಾರಿತ ಗುರುತಿನ ಚೀಟಿ ಕೊಡುವುದರಿಂದ ಮಾಹಿತಿ ಪುಸ್ತಕಗಳ ಪ್ರಕಟಣೆ 200ಕ್ಕೆ ಸೀಮಿತಗೊಳ್ಳಲಿದೆ. ಇದರಿಂದ ಸರ್ಕಾರಕ್ಕೆ ಹಣ ಉಳಿತಾಯವಾಗಲಿದೆ ಅಲ್ಲದೇ ಅಧಿವೇಶನ ವೇಳೆ ಸುವರ್ಣ ವಿಧಾನಸೌಧದಕ್ಕೆ ಭದ್ರತೆ ಹೆಚ್ಚಿಸಲು, ಅಧಿಕಾರಿ, ಸಾರ್ವಜನಿಕರರ ಮೇಲೆ ಸಂಪೂರ್ಣ ನಿಗಾವಹಿಸಲು ಕ್ಯೂಆರ್‌ ಕೋಡ್‌ ಇರುವ ಗುರುತಿನ ಚೀಟಿಯನ್ನು ನೀಡಲು ನಿರ್ಧರಿಸಿದೆ.

ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಬಾಗಲಕೋಟೆ, ಧಾರವಾಡ, ಮೈಸೂರು, ಹಾವೇರಿ, ಕಲಬುರ್ಗಿ, ಗದಗ, ಶಿವಮೊಗ್ಗ, ಮಂಡ್ಯ, ವಿಜಯಪುರ, ರಾಯಚೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಸರ್ಕಾರದ ವಿವಿಧ ಇಲಾಖೆ ಹಿರಿಯ, ಕಿರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗಕ್ಕೆ ಜಿಲ್ಲಾಡಳಿತ ಸುಮಾರು 7 ಸಾವಿರಕ್ಕೂ ಅಧಿಕ ಕ್ಯೂಆರ್‌ ಕೋಡ ಗುರುತಿನ ಚೀಟಿ ನೀಡಲು ವ್ಯವಸ್ಥೆ ಮಾಡಿಕೊಂಡಿದೆ. ಕಲಾಪ ವೀಕ್ಷಣೆಗೆ ಬರುವವ ಸಾರ್ವಜನಿಕರಿಗೆ ಸ್ಕಾ್ಯನಿಂಗ್‌ ಆಧಾರಿತ ಗುರುತಿನ ಚೀಟಿ ನೀಡಲಾಗುತ್ತಿದೆ. ಇದಕ್ಕಾಗಿ ಸುವರ್ಣ ವಿಧಾನಸೌಧ ಪ್ರವೇಶ ದ್ವಾರದಲ್ಲಿಯೇ ನಾಲ್ಕು ಸ್ಕಾ್ಯನಿಂಗ್‌ ಕೇಂದ್ರಗಳನ್ನು ತೆರಯಲಾಗುತ್ತಿದೆ. ಅಧಿವೇಶನಕ್ಕೆ ನಿಯೋಜನೆಗೊಳ್ಳದಿರುವವರು ಕಚೇರಿಗೆ ಗೈರಾಗುವ ಅಧಿಕಾರಿ, ಸಿಬ್ಬಂದಿ ಮೇಲೆ ವಿಶೇಷ ನಿಗಾ ವಹಿಸಲು ಕ್ರಮವಹಿಸಿದೆ.

ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಲಿರುವ ಚಳಿಗಾಲ ಅಧಿವೇಶನ ಕಲಾಪಗಳನ್ನು ವೀಕ್ಷಿಸಲು ಆಗಮಿಸುವ ಸಾರ್ವಜನಿಕರು, ಶಾಲಾ,​ಕಾಲೇಜು ವಿದ್ಯಾರ್ಥಿಗಳಿಗೆ ಪ್ರವೇಶ ದ್ವಾರದಲ್ಲಿಯೇ ಪ್ರತಿಯೊಬ್ಬರನ್ನು ಸ್ಕಾ್ಯನಿಂಗ್‌ ಮಾಡಿ ಗುರುತಿನ ಚೀಟಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ಗುರುತಿನ ಚೀಟಿಗಳು ಇದ್ದರೆ ಮಾತ್ರ ವಿಧಾನಸಭೆ, ವಿಧಾನ ಪರಿಷತ್‌ ಕಲಾಪ ವೀಕ್ಷಣೆ ಅವಕಾಶ ಇದೆ. ಪ್ರತಿ ಸಾರಿ ಕಲಾಪ ವೀಕ್ಷಣೆಗಾಗಿ ಪ್ರವೇಶ ಪತ್ರ ನೀಡಲಾಗುತಿತ್ತು. ಆದರೆ, ಅಂಕಿ ಸಂಖ್ಯೆಗಳು ನಿಖರವಾಗಿ ಸಿಗುತ್ತಿಲ್ಲ. ಹಾಗಾಗಿ ಹೈಟೆಕ್‌ ವ್ಯವಸ್ಥೆ ಅಳವಡಿಸಲಾಗಿದೆ.

Belagavi: ಅಪಘಾತ ಮರೆಮಾಚಲು ಮರಾಠಿಗರ ದಾಳಿ ಎಂದು ಸುಳ್ಳು ದೂರು!

ಕ್ಯೂಆರ್‌ ಕೋಡ್‌ ಕಾರ್ಯ ?:

ಚಳಿಗಾಲದ ಅಧಿವೇಶಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ, ಸಿಬ್ಬಂದಿ ಹಾಗೂ ಶಾಸಕರು, ಸಚಿವರುಗಳಿಗೆ ನೀಡಲಾಗುವ ಗುರುತಿನ ಚೀಟಿಯ ಹಿಂಬದಿಯಲ್ಲಿ ಕ್ಯೂರ್‌ ಕೋಡ್‌ ಮುದ್ರಣ ಮಾಡಲಾಗಿದೆ. ಈ ಕ್ಯೂಆರ್‌ಕೋಡನ್ನು ಮೊಬೈನಲ್ಲಿ ಸ್ಕಾ್ಯನ ಮಾಡಿದ್ದಲ್ಲಿ ಒಂದು ಲಿಂಕ್‌ ಲಭ್ಯವಾಗಲಿದೆ. ಈ ಲಿಂಕ್‌ ಮೂಲಕ ಚಳಿಗಾಲದ ಅಧಿವೇಶನದ ಮಾಹಿತಿ ಕೈಪಿಡಿ ಲಭ್ಯವಾಗಲಿದೆ. ಈ ಕೈಪಿಡಿಯಲ್ಲಿ ಮೊದಲನೇದಾಗಿ ಚಳಿಗಾಲದ ಅಧಿವೇಶನದ ಪುಸ್ತಕ, ಎರಡನೇದಾಗಿ ಪಾಸ್‌ ವಿತರಣಾ ಸಮಿತಿ ಹಾಗೂ ಮೂರನೇದಾಗಿ ವಸತಿ ಸಮಿತಿ ಆಯ್ಕೆಗಳು ಲಭ್ಯವಾಗಲಿವೆ. ಈ ಮೂರು ಆಯ್ಕೆಗಳ ಮೂಲಕ ತಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

PREV
Read more Articles on
click me!

Recommended Stories

New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!
'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ