ಶಿವಮೊಗ್ಗ (ಡಿ.16) : ಜಾತಿ, ಭಾಷೆ, ಆಚಾರ, ವಿಚಾರದ ಹೆಸರಿನಲ್ಲಿ ಸಣ್ಣ ಗುಂಪುಗಳಾಗಿರುವ ಹಿಂದೂ ಸಮಾಜ ಒಂದಾಗಿ ನಿಲ್ಲಬೇಕು ಎಂದು ಆರ್‌ಎಸ್‌ಎಸ್ ಶಿವಮೊಗ್ಗ ವಿಭಾಗ ಸಂಚಾಲಕ ಉಮಾಪತಿ ಹೇಳಿದರು. ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಶುಕ್ರವಾರ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಡಿ.25ರಂದು ನಡೆಯಲಿರುವ ವೇದಿಕೆಯ ತ್ರೈವಾರ್ಷಿಕ ಪ್ರಾಂತ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿದ್ದ ಸಕಲ ಸಮಾಜಗಳ ಪ್ರಮುಖರ ಸಭೆ ‘ಹಿಂದೂ ಹೃದಯ ಸಂಗಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಆದರೆ, ಮತಾಂತರ ಚಟುವಟಿಕೆ, ಉಗ್ರವಾದ, ಲವ್ ಜಿಹಾದ್‌ನಂತಹ ಅನೇಕ ಕಠಿಣ ಸವಾಲುಗಳು ನಮ್ಮ ಮುಂದಿವೆ. ದೊಡ್ಡ ಪ್ರಮಾಣದಲ್ಲಿ ಹಿಂದೂ ಸಮಾಜದ ಯುವತಿಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಹಿಂದೂ ಹೆಣ್ಣು ಮಕ್ಕಳಿಗೆ ನೈತಿಕ ಕ್ಷಮತೆ ಮತ್ತು ಧೈರ್ಯ ತುಂಬುವ ಕೆಲಸ ಆಗಬೇಕಾಗಿದೆ. ದೇಶದಲ್ಲಿ 20 ಕೋಟಿಗೂ ಹೆಚ್ಚು ಮುಸ್ಲಿಮರಿದ್ದು, ಅನೇಕ ಜಿಲ್ಲೆಗಳಲ್ಲಿ ಅವರೇ ಬಹುಸಂಖ್ಯಾತರಾಗಿದ್ದಾರೆ. ಅಹಿಂದ ಸಮಾಜದ 35 ಕೋಟಿಗೂ ಹೆಚ್ಚು ಜನರಿದ್ದು, ಅವರನ್ನು ತಮ್ಮೆಡೆಗೆ ಸೆಳೆದು ದೇಶವನ್ನಾಳುವ ಹುನ್ನಾರ ನಡೆಸುತ್ತಿದ್ದಾರೆ ಎಂದರು.
ಕೇಸರಿ ಬಟ್ಟೆಯಲ್ಲಿ ದೀಪಿಕಾ ಪಡುಕೋಣೆ ಹಾಟ್ ದೃಶ್ಯ, 'ಪಠಾಣ್' ಮೇಲೆ ಹಿಂದು ಕೆಂಗಣ್ಣು!
ಮತಾಂತರಗೊಂಡ ಹಿಂದೂ ಯುವತಿ ತಾನು ಮದುವೆಯಾದ 15 ದಿನದಲ್ಲಿ ಮುಸ್ಲಿಂ ಸಮಾಜದಲ್ಲಿ ಅವರ ಧರ್ಮದ ಬಗ್ಗೆ ಆಚರಣೆ ಮತ್ತು ಧಾರ್ಮಿಕ ವಿಷಯಗಳ ಬಗ್ಗೆ ಕಡ್ಡಾಯವಾಗಿ ಪ್ರತಿದಿನ ನನಗೆ ಆಚರಿಸುವಂತೆ ತಾಕೀತು ಮಾಡುತ್ತಾರೆ. ಆದರೆ, ನನ್ನ ಅಪ್ಪ ನಾನು ಬೆಳೆದು ದೊಡ್ಡವಳಾದರೂ ಒಂದು ದಿನವಾದರೂ ನನಗೆ ಹಿಂದೂ ಧರ್ಮದ ಹಿರಿಮೆ ಮತ್ತು ಸಂಸ್ಕೃತಿ ಬೋಧಿಸಲಿಲ್ಲ. ಹಾಗಾಗಿ ನಾನು ದಾರಿ ತಪ್ಪಬೇಕಾಯಿತು ಎಂದು ಅಳಲು ತೋಡಿಕೊಂಡಳು. ನನ್ನ ತಂದೆ ಕೇವಲ ಹೆಚ್ಚಿನ ಅಂಕ ಪಡೆಯುವ ಹಾಗೆ ಒತ್ತಾಯಿಸುತ್ತಿದ್ದರು. ಬೇರೆ ವಿಷಯಗಳ ಬಗ್ಗೆ ತಿಳಿಸಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದಳು. ಮುಂದೆಯಾದರೂ ಹಿಂದೂ ಧರ್ಮ ನಮ್ಮ ಸಂಸ್ಕೃತಿ ಹಾಗೂ ಕೌಟುಂಬಿಕ ಮೌಲ್ಯಗಳನ್ನು ಮಕ್ಕಳಲ್ಲಿ ತುಂಬಬೇಕಾಗಿದೆ ಎಂದು ಹೇಳಿದರು.
ಅನೇಕ ಹಿಂದೂ ಧರ್ಮದ ಮಠಾಧೀಶರು ತಮ್ಮ ಜಾತಿಗಷ್ಟೇ ಸೀಮಿತವಾಗಿದ್ದಾರೆ. ಇಡೀ ಹಿಂದೂ ಸಮಾಜ ಒಟ್ಟಾಗಲು ಮಠಾಧೀಶರು ಕೂಡ ಜಾಗೃತಿ ಮೂಡಿಸಬೇಕಾಗಿದೆ. ಆಳವಾದ ಚಿಂತನೆ ಮಾಡಬೇಕಾದ ಸಂದರ್ಭವಿದು. ಇಲ್ಲವಾದರೆ ದೇಶದೆಲ್ಲೆಡೆ ಕಾಶ್ಮೀರಕ್ಕೆ ಬಂದ ಪರಿಸ್ಥಿತಿ ಉಂಟಾಗುತ್ತದೆ. ಮುಸ್ಲಿಂ ಸಮಾಜ ವೇಗವಾಗಿ ಬೆಳೆಯುತ್ತಿದೆ. ಹಿಂದೂ ಸಮಾಜ ನಿಧಾನಗತಿಯಲ್ಲಿ ಸಾಗುತ್ತಿದೆ. ಇದನ್ನು ಸರಿ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಸಂಘದ ಹಿರಿಯ ಪ್ರಚಾರಕ ದಾ.ಮ.ರವೀಂದ್ರ ಮಾತನಾಡಿ, ಪ್ರಕೃತಿ ದೇವ ನಿರ್ಮಿತ. ಆದರೆ ಸಂಸ್ಕೃತಿ ಮಾನವ ನಿರ್ಮಿತ, ನಾವೇ ಮಾಡಿಕೊಂಡಿರುವುದು. ಹೆಮ್ಮೆ ಎಂದರೆ ನಮ್ಮ ದೇಶ ಹಾಗೂ ಸಂಸ್ಕೃತಿ ವಿಶ್ವದಲ್ಲೇ ಉತ್ತಮವಾಗಿದೆ. ಏಕೆಂದರೆ ನಮ್ಮದು ಸಮಶೀತೋಷ್ಣ ವಲಯದಲ್ಲಿ ಇರುವ ಫಲವತ್ತಾದ ಭೂಮಿ. ಆದರೆ, ಭಾರತಕ್ಕಿಂತ ಹಲವಾರು ಪಟ್ಟು ದೊಡ್ಡದಾದ ಅಮೆರಿಕ, ಚೀನಾ, ರಷ್ಯಾ ಆ ದೇಶಗಳಿಗೆ ಫಲವತ್ತಾದ ಭೂಮಿಯು ಇಲ್ಲ, ವಾತಾವರಣವು ಇಲ್ಲ ಎಂದರು
ಹಿಂದೂ ಸಂಘಟನೆಗಳ ಎಚ್ಚರಿಕೆಗೆ ಬೆದರಿ ಬಣ್ಣ ಬದಲಿಸಿದ ರೈಲ್ವೇ ಇಲಾಖೆ!
17 ಸಾವಿರದಷ್ಟುಇದ್ದ ಬ್ರಿಟಿಷರು ನಮ್ಮ 35 ಕೋಟಿ ಜನರನ್ನು ಆಳಿದರು. ಮುಸ್ಲಿಂ, ಕ್ರಿಶ್ಚಿಯನ್ನರು ಬಹುತೇಕ ಭಾರತೀಯರನ್ನು ಮತಾಂತರಗೊಳಿಸಿದರು. ಅಖಂಡ ಭಾರತವನ್ನು ಪಾಕಿಸ್ತಾನ, ಬಾಂಗ್ಲಾ, ಆಷ್ಘಾನಿಸ್ತಾನ ಎಂದು ವಿಭಜಿಸಿ 50 ಕೋಟಿಗೂ ಹೆಚ್ಚು ಜನರನ್ನು ಬಲವಂತದ ಮತಾಂತರಗೊಳಿಸಿದರು. ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ 20 ಲಕ್ಷಕ್ಕೂ ಹೆಚ್ಚು ಹಿಂದೂಗಳ ಮಾರಣಹೋಮ ನಡೆಯಿತು. ಅನಂತರ ನಮಗೆ ಸ್ವರಾಜ್ಯ ಸಿಕ್ಕಿತು. ಆದರೆ, ನೈಜ ಇತಿಹಾಸವನ್ನು ಮರೆಮಾಚಲಾಯಿತು. ಕ್ರಾಂತಿಕಾರಿ ವೀರರ ಬಗ್ಗೆ ನಮ್ಮ ಇತಿಹಾಸ ತಿಳಿಸಲು ಹಿಂದೇಟು ಹಾಕಿತು ಎಂದರು. ಡಿ.25ರಂದು ಎನ್‌ಇಎಸ್ ಮೈದಾನದಲ್ಲಿ ನಡೆಯುವ ಹಿಂದೂ ಜಾಗರಣಾ ವೇದಿಕೆಯ ತ್ರೈವಾರ್ಷಿಕ ಪ್ರಾಂತ ಸಮ್ಮೇಳನದಲ್ಲಿ 16 ಜಿಲ್ಲೆಯ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುತ್ತಾರೆ. ನಗರದಲ್ಲಿ ಶೋಭಾಯಾತ್ರೆಯ ಬಳಿಕ ಈ ಸಮಾವೇಶ ನಡೆಯಲಿದೆ ಎದು ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ತೇಜಸ್ವಿ, ಪ್ರಮುಖರಾದ ಹರ್ಷಕಾಮತ್, ನಾಗೇಂದ್ರ ಪ್ರಸಾದ್ ಮತ್ತಿತರರಿದ್ದರು.