ಹೆಸರಿನ ಜೊತೆಗೆ ಸಾರಾ ಇದ್ದವರೆಲ್ಲ ನನ್ನ ಸಹೋದರರಲ್ಲ ಎಂದು ಶಾಸಕ ಸಾರಾ.ಮಹೇಶ್ ಹೇಳಿದ್ದಾರೆ. ಸಾಲಿಗ್ರಾಮ ಕೋಮು ಗಲಭೆ ಸಂಬಂಧಿಸಿ ಮಾತನಾಡಿದ ಅವರು, ಪ್ರಕರಣದಲ್ಲಿ ತಮ್ಮ ಸಹೋದರನ ಹೆಸರು ತಳಕು ಹಾಕಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರು(ಡಿ.17): ಹೆಸರಿನ ಜೊತೆಗೆ ಸಾರಾ ಇದ್ದವರೆಲ್ಲ ನನ್ನ ಸಹೋದರರಲ್ಲ ಎಂದು ಶಾಸಕ ಸಾರಾ.ಮಹೇಶ್ ಹೇಳಿದ್ದಾರೆ. ಸಾಲಿಗ್ರಾಮ ಕೋಮು ಗಲಭೆ ಸಂಬಂಧಿಸಿ ಮಾತನಾಡಿದ ಅವರು, ಪ್ರಕರಣದಲ್ಲಿ ತಮ್ಮ ಸಹೋದರನ ಹೆಸರು ತಳಕು ಹಾಕಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಲಿಗ್ರಾಮ ಕೋಮು ಗಲಾಟೆ ಪ್ರಕರಣವಾಗಿ ಪ್ರತಿಕ್ರಿಯಿಸಿ, ಪ್ರಕರಣ ಸಂಬಂಧ ಇನ್ನೂ ಯಾವುದೇ ಶಾಂತಿ ಸಭೆ ಏರ್ಪಟ್ಟಿಲ್ಲ. ಹೆಸರಿನ ಹಿಂದೆ ಸಾರಾ ಇದ್ದವರೆಲ್ಲ ನನ್ನ ಸಹೋದರರು ಅಲ್ಲ. ಪ್ರಕರಣದಲ್ಲಿ ನನ್ನ ಒಬ್ಬನೇ ಸಹೋದರ ಸಿಲುಕಿರೋದು. ಒಬ್ಬ ಸಹೋದರ ಜಿಪಂ ಸದಸ್ಯ ಆಗಿದ್ದಾನೆ. ಈಗ ಪ್ರಕರಣದಲ್ಲಿ ಸಿಲುಕಿರುವ ಸಹೋದರ ಯಾರು ಅಂತಲೇ ಗೊತ್ತಿರಲಿಲ್ಲ. ಆದರೆ ಈಗ ಎಲ್ಲರಿಗೂ ಆತನ ಬಗ್ಗೆ ಗೊತ್ತಾಗುವಂತೆ ಆಗಿದೆ ಎಂದಿದ್ದಾರೆ.
ತನ್ವೀರ್‌ಸೇಠ್ ಕೊಲೆಯತ್ನ, ಆರೋಪಿ ಸ್ಥಳದಲ್ಲೇ ಸಿಕ್ಕರೂ ಅಂತ್ಯ ಕಾಣದ ಪ್ರಕರಣ
ಇಡೀ ಪ್ರಕರಣವನ್ನು ವಿರೋಧ ಪಕ್ಷದ ಕೆಲವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ಶಾಸಕ ಆಗುವುದಕ್ಕಿಂತಲೂ ಮುಂಚಿನಿಂದ ಸಾಲಿಗ್ರಾಮದಲ್ಲಿ ಇಂತಹ ಘಟನೆಗಳು ನಡೆದಿವೆ. ಹಿಂದೆ ಗೋಲಿಬಾರ್ ಸಹ ಆಗಿದೆ. ನನ್ನನ್ನು ಶಾಸಕ ಮಾಡಿದ ಮೇಲೆ ಸ್ವಲ್ಪ ಹತೋಟಿಗೆ ಬಂದಿದೆ. ಎರಡೂ ಕಡೆಯವರು ಹಲವು ಮಂದಿ ತಲೆ ಮರೆಸಿಕೊಂಡಿದ್ದಾರೆ. ಅವರೆಲ್ಲ ಸಿಕ್ಕ ನಂತರ ಒಂದು ಕಡೆ ಕುಳಿತು ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.
PSI ಹುದ್ದೆ ಕೊಡಿಸ್ತೀನಿ ಎಂದು 31 ಲಕ್ಷ ರೂಪಾಯಿಗೂ ಹೆಚ್ಚು ವಂಚನೆ
ಜೆಡಿಎಸ್ ನಿಂದ ಮತ್ತಿಬ್ಬರು ಶಾಸಕರು ಕೈ ಜಾರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸದ್ಯ ಜೆಡಿಎಸ್ ಪಕ್ಷವನ್ನು ಯಾರೂ ಬಿಟ್ಟು ಹೋಗುತ್ತಿಲ್ಲ. ಇದು ಸತ್ಯಕ್ಕೆ ದೂರವಾದ ವಿಚಾರ. ಎಲ್ಲರೊಂದಿಗೆ ನಿತ್ಯ ಮಾತನಾಡುತ್ತಲೇ ಇದ್ದೇವೆ. ಹಲವರು ನಿನ್ನೆ ಕೂಡ ಕುಮಾರಸ್ವಾಮಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಈ ವಿಚಾರದ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.