'ವಿಜ್ಞಾನಕ್ಕೆ ಸವಾಲಾದ ಅಲಮೇಲಮ್ಮನ ಶಾಪ'

By Kannadaprabha News  |  First Published Oct 27, 2020, 11:05 AM IST

ಮೈಸೂರು ಮನೆತನಕ್ಕೆ ಅಲಮೇಲಮ್ಮ ನೀಡಿದ ಶಾಪ ಇದೀಗ ವಿಜ್ಞಾನಕ್ಕೆ ಸವಾಲಾಗಿ ಪರಿಣಮಿಸಿದ್ದು ಈ ಬಗ್ಗೆ ಅಧ್ಯಯನದ ಅಗತ್ಯತೆ ಬಗ್ಗೆ ಚರ್ಚೆ ನಡೆದಿದೆ


ಮೈಸೂರು (ಅ.27):  ಅಲಮೇಲನ ಶಾಪ ಮೂಢನಂಬಿಕೆ ಎನ್ನಬೇಕೋ, ಶಾಪ ಎನ್ನಬೇಕೋ ತಿಳಿಯುತ್ತಿಲ್ಲ. ವಿಜ್ಞಾನಕ್ಕೆ ಸವಾಲಾಗಿರುವ ಈ ಕುರಿತು ಹೆಚ್ಚಿನ ಅಧ್ಯಯನ ಅಗತ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದರು.

ನಗರದ ವಸ್ತು ಪ್ರದರ್ಶನ ಆವರಣದ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಭಾಂಗಣದಲ್ಲಿ ಸೋಮವಾರ ನಡೆದ ಪುಸ್ತಕ ಬಿಡಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದು ಸಾತ್ವಿಕ ಶಕ್ತಿಯನ್ನು ಧಾರಣೆ ಮಾಡಿಕೊಂಡವರು ಕೊಟ್ಟಶಾಪ ಶತಮಾನಗಳ ಕಾಲ ಮುಂದುವರೆಯುತ್ತಿದೆ. ಇದು ವಿಜ್ಞಾನಕ್ಕೆ ದೊಡ್ಡ ಸವಾಲಾಗಿದ್ದು, ಅಧ್ಯಯನ ನಡೆಯಬೇಕು. ಇದು ಕೆಲವರ ದೃಷ್ಟಿಯಲ್ಲಿ ಮೂಢನಂಬಿಕೆ ಎನ್ನಬುಹುದು. ಆದರೆ ಒಂದು ಕ್ಷಣ ಯೋಚಿಸಿದಾಗ ಶಾಪದಂತೆ ಮಾಲಂಗಿ ಮಡುವಾಗಿದೆ, ತಲಕಾಡು ಮರಳಾಗಿದೆ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂಬ ಶಾಪ ಆರೇಳು ತಲೆಮಾರಿನಿಂದ ಒಬ್ಬರ ನಂತರ ಒಬ್ಬರು ದತ್ತು ಪಡೆಯುತ್ತ ಬರುತ್ತಿದ್ದಾರೆ.

Latest Videos

undefined

ಅಕ್ಕಿ ಉಚಿತವಾಗಿ ಕೊಡ್ತೀವಿ, ಕೊರೋನಾ ಲಸಿಕೆಗೆ ಏಕೆ ವಿರೋಧ? ಸಿ.ಟಿ. ರವಿ

ಥಾಮಸ್‌ ಮೆಕಾಲೆಯ ಶಿಕ್ಷಣ ನೀತಿ, ಭಾರತದ ಜ್ಞಾನ ವಿಜ್ಞಾನದ ಮೇಲೆ ಬೆಳಕು ಚೆಲ್ಲುವುದಕ್ಕಿಂತ ನಮ್ಮಲ್ಲಿ ಕೀಳರಿಮೆ ಮೂಡಿಸುತ್ತದೆ. ಇಲ್ಲಿನ ಪ್ರಜೆಗಳು ಆಳಿಸಿಕೊಳ್ಳುವುದಕ್ಕೇ ಇರುವುದು, ಆಳುವವರೆಲ್ಲರೂ ಹೊರಗಿನಿಂದ ಬಂದವರು ಎನ್ನುವ ಸುಳ್ಳಿನ ಕಥೆ ಹೆಣೆದಿದೆ. ದೇಶದ ಶೌರ್ಯ ಯಶೋಗಾಥೆ ಮರೆ ಮಾಚುವ ದುರುದಮದಂಶದಿಂದ ರೂಪಿಸಿದ ಶಿಕ್ಷಣ ವ್ಯವಸ್ಥೆಯನ್ನೇ ಅನುಸರಿಸುತ್ತಿದ್ದೇವೆ. ನಾವು ಈಗ ತಲಕಾಡಿನ ಇತಿಹಾಸ ಕೆದಕುತ್ತಿದ್ದಂತೆ ಜೈನರ ಜೊತೆಗಿನ ಸಂಬಂಧಕ್ಕೆ ಕುರುಹು ಸಿಗುತ್ತದೆ. ಈ ಕುರಿತು ಸಮಗ್ರ ಅಧ್ಯಯನ ನಡೆಯಬೇಕು. ಇಷ್ಟಕ್ಕೂ ನಾವು ಓದುವಂತೆ ವಾಸ್ಕೋಡಿಗಾಮ ಭಾರತವನ್ನು ಕಂಡುಹಿಡಿದ ಎನ್ನುತ್ತಾರೆ. ಅದು ಕಂಡು ಹಿಡಿದದ್ದಲ್ಲ. ಕಂಡುಕೊಂಡದ್ದು ಎಂದು ಅವರು ಹೇಳಿದರು.

click me!