ಶಿರಾ ಉಪ ಚುನಾವಣೆ : ತೀವ್ರ ಹಣಾಹಣಿಯಲ್ಲಿ ಯಾರಿಗಿದೆ ಗೆಲುವಿನ ಅವಕಾಶ

Kannadaprabha News   | Asianet News
Published : Oct 27, 2020, 10:44 AM IST
ಶಿರಾ ಉಪ ಚುನಾವಣೆ : ತೀವ್ರ ಹಣಾಹಣಿಯಲ್ಲಿ ಯಾರಿಗಿದೆ ಗೆಲುವಿನ ಅವಕಾಶ

ಸಾರಾಂಶ

ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ಇದೇ ವೇಳೆ ತೀವ್ರ ಹಣಾಹಣಿ ನಡೆಯುತ್ತಿದ್ದು ಗೆಲುವು ಯಾರಿಗೆ ಎನ್ನುವ ಕುತೂಹಲ ಗರಿಗೆದರಿದೆ.

ತುಮಕೂರು (ಅ.27):  ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಯಾರಿಗೂ ಸುಲಭ ಜಯ ಸಾಧ್ಯವಿಲ್ಲ. ತೀವ್ರ ಹಣಾಹಣಿಯಿದೆ. ಆದರೆ ಬಿಜೆಪಿ ಗೆಲುವು ಖಚಿತ ಎಂದು ಅಭ್ಯರ್ಥಿ ಡಾ. ರಾಜೇಶ್‌ಗೌಡ ವಿಶ್ವಾಸವ್ಯಕ್ತಪಡಿಸಿದರು.

ಅವರು ವಿಜಯದಶಮಿಯಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಧ್ಯಾನ ಮಂದಿರದಲ್ಲಿ ಕೆಲ ಹೊತ್ತು ಧ್ಯಾನ ಮಾಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಪಕ್ಷಗಳು ಪ್ರತಿ ಸ್ಪರ್ಧಿಗಳೆ. ಕಾಂಗ್ರೆಸ್‌ ಅಭ್ಯರ್ಥಿ ಜಯಚಂದ್ರ ಅವರು 6 ಬಾರಿ ಶಾಸಕರಾಗಿ, ಸಚಿವರಾಗಿದ್ದವರು. ಹಾಗಾಗಿ ಈ ಚುನಾವಣೆಯಲ್ಲಿ ತೀವ್ರ ಹಣಾಹಣಿ ಇದ್ದೇ ಇದೆ. ಯಾರಿಗೂ ಸಹ ಸುಲಭದ ಜಯ ದೊರೆಯುವುದಿಲ್ಲ ಎಂದರು.

ಚುನಾವಣೆ ವೇಳೆ ಜಾತಿ ಡಿಕೆಶಿಯಿಂದ ಜಾತಿ ರಾಜಕಾರಣ: ಸದಾನಂದಗೌಡ

ಶಿರಾದ ಜನತೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ಹಳೆಯ ಹುರಿಯಾಳುಗಳನ್ನುನೋಡಿದ್ದು, ಈ ಬಾರಿ ಬದಲಾವಣೆ ಬಯಸಿದ್ದು, ಹೊಸ ಮುಖ ಬಯಸುತ್ತಿದ್ದು, ತಮನ್ನು ಗೆಲ್ಲಿಸಲಿದ್ದಾರೆ ಎಂದರು.

ನನಗೂ ರಾಜಕೀಯ ಹಿನ್ನೆಲೆಯಿದೆ:  ನಾನು ರಾಜಕೀಯಕ್ಕೆ ಹೊಸಬನಾಗಿದ್ದರೂ ನನ್ನ ತಂದೆ ಶಾಸಕರು, ಸಂಸದರಾಗಿದ್ದವರು. ನನಗೂ ರಾಜಕೀಯದ ಹಿನ್ನೆಲೆಯಿದೆ. ಅಲ್ಲದೆ ವೈದ್ಯನಾಗಿ ಜನರ ಒಡನಾಟ ಹೊಂದಿದ್ದೇನೆ. ಕ್ಷೇತ್ರದಲ್ಲಿ ನಾನು ಚಿರಪರಿಚಿತನಾಗಿದ್ದು, ಈ ಬಾರಿ ನೂರಕ್ಕೆ ನೂರರಷ್ಟುನನ್ನ ಕೊರಳಿಗೆ ವಿಜಯದ ಮಾಲೆಯನ್ನು ಕ್ಷೇತ್ರದ ಜನತೆ ಹಾಕಲಿದ್ದಾರೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು.

ಕಳೆದ 4 ವರ್ಷದಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಕ್ಷೇತ್ರದ ಜನತೆಗೆ ರಾಜೇಶ್‌ಗೌಡ ಯಾರು, ಏನು ಎಂಬುದು ಚೆನ್ನಾಗಿ ತಿಳಿದಿದೆ ಎಂದರು.

PREV
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ