ವಿಮಾನ ನಿಲ್ದಾಣ ಕಾಮಗಾರಿ ಮಾರ್ಚ್‌ಗೆ ಪೂರ್ಣ; ಸಂಸದ ರಮೇಶ ಜಿಗಜಿಣಗಿ

By Kannadaprabha NewsFirst Published Dec 9, 2022, 12:35 PM IST
Highlights

ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಭರದಿಂದ ಸಾಗಿದ್ದು, ಬರುವ ಮಾಚ್‌ರ್‍, ಏಪ್ರಿಲ್‌ ತಿಂಗಳೊಳಗೆ ಕಾಮಗಾರಿಗಳು ಪೂರ್ಣಗೊಂಡು ವಿಮಾನಗಳು ಹಾರಾಟ ನಡೆಸಲಿವೆ ಎಂದು ಕೇಂದ್ರ ಮಾಜಿ ಸಚಿವ, ಸಂಸದ ರಮೇಶ ಜಿಗಜಿಣಗಿ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯಪುರ (ಡಿ.9) : ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಭರದಿಂದ ಸಾಗಿದ್ದು, ಬರುವ ಮಾಚ್‌ರ್‍, ಏಪ್ರಿಲ್‌ ತಿಂಗಳೊಳಗೆ ಕಾಮಗಾರಿಗಳು ಪೂರ್ಣಗೊಂಡು ವಿಮಾನಗಳು ಹಾರಾಟ ನಡೆಸಲಿವೆ ಎಂದು ಕೇಂದ್ರ ಮಾಜಿ ಸಚಿವ, ಸಂಸದ ರಮೇಶ ಜಿಗಜಿಣಗಿ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯಪುರ ಹೊರವಲಯದ ಬುರಾಣಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಗುರುವಾರ ವೀಕ್ಷಿಸಿದ ಅವರು, ಸರ್ಕಾರ ವಿಮಾನ ನಿಲ್ದಾಣ ಏರ್‌ಬಸ್‌ -320 ಮೇಲ್ದರ್ಜೆಗೇರಿಸಿರುವುದರಿಂದ ಕಾಮಗಾರಿಗಳು ವೇಗ ಪಡೆದುಕೊಂಡಿದ್ದು, ಮಾಚ್‌ರ್‍ ಅಂತ್ಯದವರೆಗೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.

ರಾಜ್ಯದಲ್ಲಿ ದಲಿತ ಸಿಎಂ ಹೋರಾಟ ನಿಲ್ಲದು: ಸಂಸದ ಜಿಗಜಿಣಗಿ

ವಿಮಾನ ನಿಲ್ದಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಬೆಂಗಳೂರಿನ ಐಡೆಕ್‌ ಸಂಸ್ಥೆಗೆ ಕಾಮಗಾರಿ ನಿರ್ವಹಣೆ ಮತ್ತು ಸಲಹೆಗಾರನ್ನಾಗಿ ನೇಮಿಸಲಾಗಿದೆ. ಕಾಮಗಾರಿಯ ವಿನ್ಯಾಸವನ್ನು ವಿಮಾನ ನಿಲ್ದಾಣ ವಿನ್ಯಾಸಗೊಳಿಸುವಲ್ಲಿ ಪರಿಣಿತರಾದ ಮೆ: ರೈಟ್ಸ್‌ ಗುರಗಾಂವ ಇವರಿಗೆ ವಹಿಸಲಾಗಿದೆ ಎಂದು ತಿಳಿಸಿದರು.

ವಿಜಯಪುರ ವಿಮಾನ ನಿಲ್ದಾಣದಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ, ಜಿಲ್ಲೆಯ ಆಮದು, ರಫ್ತು ವ್ಯವಹಾರ, ವ್ಯಾಪಾರ ವಹಿವಾಟು, ಸರಕು-ಸಾಗಾಣಿಕೆ ವ್ಯವಸ್ಥೆ ಸೇರಿದಂತೆ ಜಿಲ್ಲೆಯ ಅಭಿವೃದ್ದಿಗೆ ಅನುಕೂಲವಾಗಲಿದೆ ಎಂದರು.

ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್‌-72 ದಿಂದ ಏರ್‌ಬಸ್‌- 320 ವಿಮಾನಗಳ ಹಾರಾಟಕ್ಕಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಸಹ ಭರದಿಂದ ಸಾಗಿದ್ದು, ಒಟ್ಟು .347.92 ಕೋಟಿ ಕಾಮಗಾರಿಯನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲನೇ ಹಂತದ ಕಾಮಗಾರಿಗಾಗಿ . 222.92 ಕೋಟಿ ಹಾಗೂ ಎರಡನೇ ಹಂತದ ಕಾಮಗಾರಿಗೆ . 125 ಕೊಟಿ ನಿಗದಿಪಡಿಸಲಾಗಿದ್ದು, ಎಟಿಆರ್‌-72 ವಿಮಾನಗಳ ಹಾರಾಟಕ್ಕಾಗಿ . 95 ಕೋಟಿ ಹಾಗೂ ಏರ್‌ಬಸ್‌- 320 ವಿಮಾನಗಳ ಹಾರಾಟಕ್ಕಾಗಿ ಮೇಲ್ದರ್ಜೆಗೇರಿಸಿರುವುದರಿಂದ ಹೆಚ್ಚುವರಿಯಾಗಿ . 127.92 ಕೋಟಿ ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದರು.

ಮೊದಲನೇ ಹಂತದಲ್ಲಿ .222.92 ಕೋಟಿಗಳಲ್ಲಿ ರನ್‌ವೇ, ಟ್ಯಾಕ್ಸಿ ವೇ, ಎಪ್ರಾನ…, ಇಸೋಲೇಶನ್‌ ಬೇ, ಕೂಡು ರಸ್ತೆ, ಒಳ ರಸ್ತೆಗಳು, ಪೆರಿಪೆರಲ್‌ ರಸ್ತೆಗಳು ಹಾಗೂ ಇತರೆ ಕಾಮಗಾರಿಗಳನ್ನು ಕೈಗೊಂಡು ಅಭಿವೃದ್ದಿಪಡಿಸಲಾಗುತ್ತಿದೆ ಎಂದು ವಿವರಿಸಿದರು.

ಏರ್‌ಸ್ಕಿ್ರಪ್‌್ಟ, ರನ್‌ವೇ, ಪ್ಯಾಸೆಂಜರ್‌ ಟರ್ಮಿನಲ್‌ ಬಿಲ್ಡಿಂಗ್‌, ಸಿಎಫ್‌ಆರ್‌ ಬಿಲ್ಡಿಂಗ್‌ ಇಎಸ್‌ಎಸ್‌ ಬಿಲ್ಡಿಂಗ್‌, ಎಟಿಸಿ ಬಿಲ್ಡಿಂಗ್‌, ಯುಜಿ ಟ್ಯಾಂಕ್‌, ಓರ್ವ ಹೆಡ್‌ ಟ್ಯಾಂಕ್‌, ಬೌಂಡ್ರಿ ವಾಲ್ಸ್‌, ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅಪ್ರಾನ್‌, ಐಸೋಲೇಶನ್‌ ಬೇ, ಅಪ್ರೋಚ್‌ ರೋಡ್‌, ಇಂಟರ್ನಲ್‌ ರೋಡ್‌, ಜನರಲ್‌ ವಿಐಪಿ ಕಾರ್‌ ಪಾರ್ಕ್, ವಿಐಪಿ ಮೂವಮೇಟ್‌ ರೋಡ, ಪಿಟಿಬಿ, ಸಿಎಫ್‌ಆರ್‌ ಮತ್ತು ಎಸ್ಟಿಪಿ ರೋಡ, ಕ್ರ್ಯಾಶ್ಗೇಟ್‌ ರೋಡ್‌, ಫä್ಯಲ್‌ ಫಾಮ್‌ ಪಾವ್ಮೆಂಟ್‌, ಬಾಕ್ಸ್‌ ಕಲ್ವರ್ಚ್‌ ಹಾಗೂ ಪೈಪ್‌ ಕಲ್ವರ್ಚ್‌ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.

ಸಣ್ಣ ಹುಡುಗ(ರಾಹುಲ್‌ ಗಾಂಧಿ) ಕರ್ಕೊಂಡು ಕಾಂಗ್ರೆಸ್‌ ಯಾತ್ರೆ: ಸಂಸದ ಜಿಗಜಿಣಗಿ ವ್ಯಂಗ್ಯ

ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಹಾನಗರ ಪಾಲಿಕೆ ಸದಸ್ಯ ಮಳುಗೌಡ ಪಾಟೀಲ, ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರ ರಾಜು ಮುಜುಂದಾರ, ಸಹಾಯಕ ಅಭಿಯಂತರ ರೇವಣ್ಣ ಮಸಳಿ, ಗುತ್ತಿಗೆದಾರ ಸಿ.ಬಿ.ಆಲೂರ, ಪ್ಯಾಕೇಜ್‌-2 ಪ್ರಾಜೆಕ್ಟ್ ಮ್ಯಾನೇಜರ್‌ ಸರವಣನ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

click me!