* ತಾಂತ್ರಿಕ ದೋಷದಿಂದ ಏರ್ ಇಂಡಿಯಾ ವಿಮಾನ ಹಾರಾಟ ವಿಳಂಬ
* ಡಿಜಿಸಿಎ ಅನುಮತಿ ಸಿಕ್ಕಿದ ಬಳಿಕ ಹಾರಾಟ ನಡೆಸಲು ಸಿದ್ಧವಾದ ವಿಮಾನ
* ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿದ್ದ ವಿಮಾನ
ಬೆಂಗಳೂರು(ಸೆ.18): ತಾಂತ್ರಿಕ ದೋಷದಿಂದ ಏರ್ ಇಂಡಿಯಾ ವಿಮಾನವೊಂದು ರನ್ ವೇನಲ್ಲೇ ನಿಂತ ಘಟನೆ ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು(ಶನಿವಾರ) ಬೆಳಗ್ಗೆ ನಡೆದಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಬೆಳಗ್ಗೆ 10.35ಕ್ಕೆ ದೆಹಲಿಗೆ ವಿಮಾನ ಹೊರಟಿತ್ತು. ಡಿಜಿಸಿಎ (ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಅನುಮತಿ ಸಿಗದಿದ್ದರಿಂದ ಏರ್ ಇಂಡಿಯಾ ವಿಮಾನವೊಂದು(AI 505) ಮೂರು ಗಂಟೆಗಳ ಕಾಲ ರನ್‌ವೇನಲ್ಲೇ ನಿಂತಿತ್ತು.
undefined
ಕೆಂಪೇಗೌಡ ಏರ್‌ಪೋರ್ಟ್‌ಲ್ಲಿ ನಿಷ್ಕ್ರೀಯ ವಿಮಾನ ತೆರವುಗೊಳಿಸಲು ‘ರಿಕವರಿ ಕಿಟ್’
ಮೂರು ಗಂಟೆಗಳ ಬಳಿಕ ಡಿಜಿಸಿಎ ಅನುಮತಿ ಸಿಕ್ಕಿದ ಬಳಿಕ ವಿಮಾನ ಹಾರಾಟ ನಡೆಸಲು ಸಿದ್ಧವಾಗಿದೆ. ಏರ್ ಇಂಡಿಯಾ ಕಂಪನಿ ಬಸ್ ಮೂಲಕ ಪ್ರಯಾಣಿಕರನ್ನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಕರೆತರಲಾಗಿತ್ತು. ಸಧ್ಯ ಪ್ರಯಾಣಿಕರನ್ನ ಟರ್ಮಿನಲ್ ವಿಶ್ರಾಂತಿ ಕೊಠಡಿಯಲ್ಲಿ ಕೂರಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.