ಅತಿಯಾದ ಬಿಸಿಲ ಝಳ ಒಂದಡೆ ಮತ್ತೊಂದಡೆ ಬರುವ ಸೂಚನೆ ನೀಡಿ ಮಾಯಾವಾಗಿದ್ದ ಮಳೆಯಿಂದ ಕೃಷಿಕರು ಹೊಲದತ್ತ ಮುಖ ಮಾಡಿರಲ್ಲ. ಸದ್ಯ ಕಳೆದ ಮೂರು, ನಾಲ್ಕು ದಿನಗಳಿಂದ ಉತ್ತಮವಾಗಿ ಮಳೆಯಾಗುತ್ತಿರುವ ಕಾರಣ ರೈತಾಪಿ ವರ್ಗ ಹರ್ಷಗೊಂಡಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.07): ಅತಿಯಾದ ಬಿಸಿಲ ಝಳ ಒಂದಡೆ ಮತ್ತೊಂದಡೆ ಬರುವ ಸೂಚನೆ ನೀಡಿ ಮಾಯಾವಾಗಿದ್ದ ಮಳೆಯಿಂದ (Rain) ಕೃಷಿಕರು (Farmers) ಹೊಲದತ್ತ ಮುಖ ಮಾಡಿರಲ್ಲ. ಸದ್ಯ ಕಳೆದ ಮೂರು, ನಾಲ್ಕು ದಿನಗಳಿಂದ ಉತ್ತಮವಾಗಿ ಮಳೆಯಾಗುತ್ತಿರುವ ಕಾರಣ ರೈತಾಪಿ ವರ್ಗ ಹರ್ಷಗೊಂಡಿದೆ. ಬಯಲು ತಾಲ್ಲೂಕುಗಳಾದ ಕಡೂರು ಮತ್ತು ತರೀಕೆರೆಯಲ್ಲಿ ಮಳೆರಾಯನ ಆಗಮನವಾಗಿದೆ. ಇತ್ತ ಮಲೆನಾಡು ಭಾಗದಲ್ಲಿ ಮಳೆಗಾಲದ ವಾತಾವರಣವಿರುವ ಕಾರಣ ಅನ್ನದಾತರು ಕೃಷಿ ಚುಟುವಿಕೆಗಳತ್ತ ಮುಖ ಮಾಡಿದ್ದಾರೆ.
ಮುಂಗಾರು ಪೂರ್ವದ ಮಳೆ-ಹೊಲದಲ್ಲಿ ಅನ್ನದಾತ: ಬೇಸಿಗೆಯ ಬಿಸಿಲನ ಝಳದಿಂದ ಮಲೆನಾಡಿನಲ್ಲಿ ಬಯಲುಸೀಮೆ ವಾತಾರಣವ ನಿರ್ಮಾಣವಾಗಿತ್ತು. ಬರುವ ಸೂಚನೆ ನೀಡಿ ಮಾಯಾವಾಗಿದ್ದ ಮಳೆಯಿಂದ ಕೃಷಿಕರು ಹೊಲದತ್ತ ಮುಖಮಾಡಿರಲ್ಲ. ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಹಿಂಗಾರು ಬೆಳೆಗಳು ಕೈಕೊಟ್ಟಿತ್ತು. ಮಳೆ ಆಶ್ರಯವನ್ನು ಪಡೆದಿದ್ದ ಭೂಮಿಯನ್ನು ರೈತರು ಹಾಳು ಬಿಟ್ಟು ಆಕಾಶದತ್ತ ಮುಖಮಾಡಿದ್ದರು. ವಾಡಿಕೆಯಂತೆ ಮೇ ಕೊನೆ ವಾರ, ಜೂನ್ ಮೊದಲ ವಾರದಲ್ಲೇ ಉತ್ತಮ ಮಳೆ ಆಗಬೇಕಾಗಿತ್ತು.ಆದ್ರೆ ಮುಂಗಾರು ಪೂರ್ವವಾಗಿ ಬಿದ್ದ ಮಳೆ ರೈತಾಪಿ ವರ್ಗಕ್ಕೆ ಹರ್ಷವನ್ನು ಮೂಡಿಸಿದೆ.
Chikkamagaluru ಕಾರಿಗೆ ಅಪ್ಪಳಿಸಿದ ವಿದ್ಯುತ್ ಕಂಬ, ಕೂದಳೆಲೆ ಅಂತರದಲ್ಲಿ ಪ್ರಯಾಣಿಕರು ಪಾರು
ಜಿಲ್ಲೆದ್ಯಾಂತ ಕಳೆದ ಮೂರು ನಾಲ್ಕು ದಿನಗಳಿಂದ ಉತ್ತಮ ಮಳೆಯಾಗಿದೆ. ಇದು ಸಹಜವಾಗಿಯೇ ರೈತಾಪಿವರ್ಗದಲ್ಲಿ ಸಂತಸವನ್ನು ಮೂಡಿಸಿದೆ. ಸರ್ಕಾರ ಪ್ರತಿ ವರ್ಷವೂ ಜಿಲ್ಲೆಗೆ ಪೂರೈಕೆ ಮಾಡುತ್ತಿದ್ದ ಬಿತ್ತನೆ ಬೀಜ, ಗೊಬ್ಬರದಲ್ಲಿ ಈ ಬಾರಿಯೂ ಯಾವುದೇ ಕೊರತೆ ಉಂಟಾಗಿಲ್ಲ. ಜಿಲ್ಲೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜವನ್ನು ಸರ್ಕಾರ ಪೂರೈಕೆ ಮಾಡಿದೆ. ರೈತರಿಗೆ ಮುಂದಿನ ದಿನಗಳಲ್ಲೂ ಬಿತ್ತನೆ ಬೀಜದ ಕೊರತೆ ಎದುರಾಗುವುದಿಲ್ಲ ಎನ್ನುವ ಆಶಾ ಭಾವನೆಯನ್ನುಕೃಷಿ ಇಲಾಖೆ ಅಧಿಕಾರಿಗಳು ಹೊರಹಾಕಿದ್ದಾರೆ.
ಉತ್ತಮ ಮಳೆ ಕಾಫಿ, ಶುಂಠಿ ತರಕಾರಿ ಬೆಳೆಗಳಿಗೂ ಅನುಕೂಲ: ಉತ್ತಮ ಮಳೆಯಾದ ಕಾರಣ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಆರಂಭವಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದ್ದು. ಗದ್ದೆ, ತೋಟಗಳಲ್ಲಿ ರೈತರು ಕೆಲಸ ಮಾಡುತ್ತಿರುವ ದೃಶ್ಯ ಈಗ ಸಾಮಾನ್ಯವಾಗಿದೆ. ಉತ್ತಮ ಮಳೆಯಾಗಿರುವ ಕಾರಣ ಕಾಫಿ, ಶುಂಠಿ ಬೆಳೆ ಸೇರಿದಂತೆ ತರಿಕಾರಿ ಬೆಳೆಗಳಿಗೂ ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ರೈತರು ಬಿತ್ತನೆ ಬೀಜ, ಗೊಬ್ಬರಗಳನ್ನು ಖರೀದಿಯಲ್ಲಿ ಮುಗ್ನರಾಗಿದ್ದಾರೆ. ರಾಗಿ ಜೋಳ ಆಲೂಗೆಡ್ಡೆ, ಭತ್ತ ಕೃಷಿ ಮಾಡಲು ರೈತರು ಭೂಮಿಯನ್ನು ಉಳುಮೆ ಮಾಡುತ್ತಿದ್ದಾರೆ.
PSI Recruitment Scam: ಪ್ರಾಮಾಣಿಕರಿಗೆ ಕೆಲಸ ನೀಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ: ವೈ.ಎಸ್.ವಿ.ದತ್ತಾ
ಸದ್ಯ ಮಳೆ ಆಗಿರುವ ಕಾರಣ ರೈತರು ಮತ್ತೆ ಕೃಷಿ ಚುಟುವಟಿಕೆ ಮುಖ ಮಾಡಿದ್ದು, ಹೊಲ ಗದ್ದೆಗಳಲ್ಲಿ ಕೆಲಸ ಕಾರ್ಯದಲ್ಲಿ ತೊಡಗಿದ್ದು, ಅನ್ನದಾತರು ಭೂಮಿಯನ್ನು ಹದ ಮಾಡಿ ಬಿತ್ತನೆ ಕಾರ್ಯದಲ್ಲಿ ತೊಡಗಿರುವ ದೃಶ್ಯ ಜಿಲ್ಲಾದ್ಯಾಂತ ಕಂಡು ಬರುತ್ತಿದೆ. ಮಳೆಯಾದ ಕಾರಣ ರೈತರು ಕೃಷಿ ಭೂಮಿಯುತ್ತ ಮುಖಮಾಡಿದ್ದಾರೆ. ಇನ್ನು ರೈತರಿಗೆ ಸಂಪರ್ಕವಾದ ರೀತಿಯಲ್ಲಿ ರಸಗೊಬ್ಬರ, ಬಿತ್ತನೆ ಬೀಜವನ್ನು ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಆರಂಭದಲ್ಲಿ ಬಿದ್ದ ಮಳೆ ಮುಂದಿನ ದಿನಗಳಲ್ಲೂ ಇದೇ ರೀತಿ ಮುಂದುವರೆಯಬೇಕೆಂಬ ಆಶಯವನ್ನು ರೈತರು ಹೊರಹಾಕಿದ್ದಾರೆ.