ಅಕ್ರ​ಮ​ವಾಗಿ ಸಂಗ್ರಹಿಸಿದ್ದ ಟನ್‌ಗಟ್ಟಲೆ ಯೂರಿಯಾ ಜಪ್ತಿ

By Kannadaprabha News  |  First Published Sep 11, 2020, 7:50 AM IST

ರಾಜ್ಯದ ಹಲವೆಡೆ ಯೂರಿಯಾ ಕೊರತೆಯಿಂದ ರೈತರು ಕಂಗಾಲಾಗುತ್ತಿರುವ ಬೆನ್ನಲ್ಲೇ ಇದೀಗ ಟನ್‌ಗಟ್ಟಲೇ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಯೂರಿಯಾ ವಶಪಡಿಸಿಕೊಳ್ಳಲಾಗಿದೆ. 


ರಾಮ​ನ​ಗ​ರ (ಸೆ.11):  ಒಂದು ಕಡೆ ರಾಜ್ಯಾದ್ಯಂತ ರಸಗೊಬ್ಬರದ ಅಭಾವದಿಂದ ರೈತರು ಪರದಾಡುತ್ತಿದ್ದರೆ, ರಾಮನಗರದಲ್ಲಿ ಅಕ್ರಮವಾಗಿ 6 ಟನ್‌ ಯೂರಿಯವನ್ನು ದಾಸ್ತಾನು ಮಾಡಲಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. 

ತಾಲೂಕಿನ ಬೈರ​ಮಂಗಲ-ಹೊಸೂರು ಗ್ರಾಮ​ದ ಶ್ರೀ ವಿರ​ಭ​ದ್ರ​ಸ್ವಾಮಿ ಟ್ರೇಡರ್ಸ್‌ಗೆ ಸೇರಿದ ಗೋದಾ​ಮಿನ ಮೇಲೆ ದಾಳಿ ನಡೆ​ಸಿದ ಕೃಷಿ ಅಧಿಕಾರಿ ವನಿತಾ ನೇತೃತ್ವದ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿ ಸುಮಾರು 6 ಟನ್‌ನಷ್ಟುವಿಜಯ್‌ ಯೂರಿಯಾವನ್ನು ಜಪ್ತಿ ಮಾಡಿ ಮಳಿಗೆಗಳನ್ನು ಸೀಲ್‌ ಮಾಡಿದ್ದಾರೆ.

Tap to resize

Latest Videos

ರಾಜ್ಯಕ್ಕೆ ಬರಲಿದೆ 51000 ಟನ್‌ ಯೂರಿಯಾ: ಸಚಿವ ...

ರಾಜ್ಯದಲ್ಲಿ ಲಾಕ್‌ಡೌನ್ ಹಿನ್ನಲೆಯಲ್ಲಿ ರಸಗೊಬ್ಬರ ಪೂರೈಕೆ ಕಡಿಮೆಯಾಗಿತ್ತು. ಅಲ್ಲದೇ ಯೂರಿಯಾ ಕೊರತೆ ಉಂಟಾಗಿ ರೈತರು ಪರದಾಡುವಂತಾಗಿತ್ತು. 

ಸರ್ಕಾರ ಆಮದು ಮಾಡಿ ರೈತರಿಗೆ ಯೂರಿಯಾ ಪೂರೈಕೆ ಮಾಡಿತ್ತು. ಆದರೆ ಇದೀಗ ಹಲವೆಡೆ ಅಕ್ರಮವಾಗಿ ಯೂರಿಯಾ ದಾಸ್ತಾನು ಮಾಡಿರುವುದು ಬೆಳಕಿಗೆ ಬರುತ್ತಿದೆ. 

click me!