ಡ್ರಗ್ಸ್‌ ಸೇವಿಸುವವರಿಂದ ತಮ್ಮ ವೃತ್ತಿಗೆ ಮೋಸ: ನಿಖಿಲ್‌ ಕುಮಾ​ರ​ಸ್ವಾ​ಮಿ

Kannadaprabha News   | Asianet News
Published : Sep 11, 2020, 07:24 AM ISTUpdated : Sep 11, 2020, 07:29 AM IST
ಡ್ರಗ್ಸ್‌ ಸೇವಿಸುವವರಿಂದ ತಮ್ಮ ವೃತ್ತಿಗೆ ಮೋಸ: ನಿಖಿಲ್‌ ಕುಮಾ​ರ​ಸ್ವಾ​ಮಿ

ಸಾರಾಂಶ

ಡ್ರಗ್ ಮಾಫಿಯಾ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಡ್ರಗ್ ಸೇವಿಸಿ ತಮ್ಮ ವೃತ್ತಿಗೆ ಮೋಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಬೆಂಗಳೂರು (ಸೆ.11): ಡ್ರಗ್‌ ಅನ್ನೋದು ಚಿತ್ರರಂಗಕ್ಕೆ ಮಾತ್ರವಲ್ಲ, ಎಲ್ಲರಿಗೂ ಮತ್ತು ಎಲ್ಲಾ ಕ್ಷೇತ್ರಗಳಿಗೂ ಮಾರಕ. ಹೀಗಾಗಿ ಯಾರೋ ಇಬ್ಬರು ಮೂವರು ಮಾಡಿದ ತಪ್ಪಿಗಾಗಿ ಚಿತ್ರರಂಗಕ್ಕೆ ಬೆರಳು ತೋರಿಸಬೇಡಿ ಎಂದು ನಟ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

ಡ್ರಗ್‌ ಕೇಸ್‌ ಬೆಳವಣಿಗೆಗಳ ಕುರಿತು ಗುರುವಾರ  ಮಾತನಾಡಿದ ನಿಖಿಲ್‌ ಕುಮಾರ್‌, ಚಿತ್ರರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡುತ್ತಿದ್ದೇನೆ. 

ತಿಳಿದವರೇ ಡ್ರಗ್‌ ಬಳಸುತ್ತಾರೆ, ಅದರ ಜಾಲದಲ್ಲಿದ್ದಾರೆ ಎಂದರೆ ಅವರಿಗೆ ನಾವು ಬುದ್ಧಿ ಹೇಳಲು ಸಾಧ್ಯವಿಲ್ಲ’ ಎಂದರು. ಜತೆಗೆ, ಮಾದಕ ಪದಾರ್ಥಗಳಿಗೆ ಅಡಿಕ್ಷನ್‌ ಆಗಿರುವವರು ವೃತ್ತಿಗೆ ಮೋಸ ಮಾಡುತ್ತಿದ್ದಾರೆ ಎಂದು ದೂಷಿಸಿದರು. ‘ಕಾನೂನು ಮತ್ತು ಸಮಾಜಕ್ಕೆ ವಿರುದ್ಧವಾದ ಕೆಲಸಗಳನ್ನು ಯಾರೇ ಮಾಡಿದರೂ ಅಂಥವರಿಗೆ ಕಾನೂನು ಶಿಕ್ಷೆ ಕೊಡುತ್ತದೆ ಎಂದರು.

ವೈದ್ಯರೊಂದಿಗೆ ಯಾವಾಗಿನಿಂದ ಲವ್ ಇತ್ತು? ಸಂಜನಾ ಹಿಂದೆಯೇ ಹೇಳಿದ್ದರು .

ಈ ವಿಚಾರದಲ್ಲಿ ನಾವು ಜಾಗೃತಿ ಮೂಡಿಸಬೇಕಿರೋದು ಅಮಾಯಕ ಯುವ ಜನರಿಗೆ. ಯಾಕೆಂದರೆ ಮಾದಕ ವಸ್ತುಗಳಿಗೆ ಅಂಟಿಕೊಂಡರೆ ಅವರು ತಲುಪಬೇಕಾದ ಗುರಿ ತಲುಪುವುದಿಲ್ಲ ಎನ್ನುವ ತಿಳಿವಳಿಕೆ ಹೇಳಬೇಕಿದೆ’ ಎಂದರು.

PREV
click me!

Recommended Stories

ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು
ರೈತ, ಆಟೋ ಚಾಲಕರ ಹೆಣ್ಮಕ್ಕಳಿಗೆ ಗವಿಮಠದಿಂದ ಫ್ರೀ ಕಾಲೇಜು, ಹಾಸ್ಟೆಲ್‌