Inscriptions: ಅಗಳಗಂಡಿ ಮಕ್ಕಳಿಂದ ಶಾಸನೋಕ್ತ ವೀರಗಲ್ಲು ಪತ್ತೆ!

By Kannadaprabha News  |  First Published Apr 30, 2023, 10:34 AM IST

ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎತ್ತಿನಟ್ಟಿಪ್ರದೇಶದಲ್ಲಿ 14-15 ನೇ ಶತಮಾನಕ್ಕೆ ಸೇರಿದ ವೀರಗಲ್ಲನ್ನು ಎತ್ತಿನಟ್ಟಿಯ ಸ್ಥಳೀಯ ಮಕ್ಕಳು ಪತ್ತೆ ಮಾಡಿದ್ದು, ವೀರಗಲ್ಲಿನ ಹೆಚ್ಚಿನ ಅಧ್ಯಯನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ಮಾಡಿದ್ದಾರೆ.


,ಕೊಪ್ಪ (ಏ.30) : ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎತ್ತಿನಟ್ಟಿಪ್ರದೇಶದಲ್ಲಿ 14-15 ನೇ ಶತಮಾನಕ್ಕೆ ಸೇರಿದ ವೀರಗಲ್ಲನ್ನು ಎತ್ತಿನಟ್ಟಿಯ ಸ್ಥಳೀಯ ಮಕ್ಕಳು ಪತ್ತೆ ಮಾಡಿದ್ದು, ವೀರಗಲ್ಲಿನ ಹೆಚ್ಚಿನ ಅಧ್ಯಯನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ಮಾಡಿದ್ದಾರೆ.

ಮೂರು ಪಟ್ಟಿಕೆಗಳನ್ನು ಹೊಂದಿರುವ ವೀರಗಲ್ಲು ಕೆಳಗಿನ ಎರಡು ಪಟ್ಟಿಕೆಗಳು ಭಗ್ನಗೊಂಡಿವೆ. ಕೆಳಗಿನ ಪಟ್ಟಿಕೆಯಲ್ಲಿ ಅಪ್ಸರೆಯರು ವೀರನನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಿರುವ ಚಿತ್ರಣವಿದೆ. ಎರಡನೇ ಪಟ್ಟಿಕೆ ವಿಶೇಷತೆಯಿಂದ ಕೂಡಿದ್ದು ಸ್ವರ್ಗದಲ್ಲಿರುವ ವೀರನನ್ನು ಪೂಜಿಸುತ್ತಿರುವಂತೆ ಚಿತ್ರಣ ಮಾಡಿರಬಹುದೆಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಎರಡನೇ ಪಟ್ಟಿಕೆಯಲ್ಲಿ ವೀರ ಮತ್ತು ಮತ್ತೋರ್ವ ವ್ಯಕ್ತಿಯನ್ನು ಪೀಠದಲ್ಲಿ ಕುಳಿತಿರುವಂತೆ ಕೆತ್ತಲಾಗಿದ್ಧು ಪಕ್ಕದಲ್ಲಿ ಸ್ತ್ರೀ, ಪುರುಷರ ವಿಗ್ರಹವಿದೆ.

Tap to resize

Latest Videos

undefined

ಉಡುಪಿಯ ಅಡ್ಕದಕಟ್ಟೆಯ ಬಳಿ ತ್ರಿಕೋನಾಕಾರದ ಶಾಸನ ಪತ್ತೆ!

ಮೇಲಿನ ಪಟ್ಟಿಕೆಯಲ್ಲಿ ಪದ್ಮಾಸನದಲ್ಲಿ ಪೀಠದ ಮೇಲೆ ಕುಳಿತಿರುವ ವಿಗ್ರಹಕ್ಕೆ ಗಜಗಳು ಅಭಿಷೇಕ ಮಾಡುತ್ತಿರುವ ಉಬ್ಬು ಶಿಲ್ಪ ಕಾಣಬಹುದಾಗಿದೆ. ಈ ವೀರಗಲ್ಲಿನ ಮೊದಲ ಮತ್ತು ಎರಡನೆಯ ಪಟ್ಟಿಕೆಯಲ್ಲಿ ಕನ್ನಡ ಲಿಪಿ ಮತ್ತು ಭಾಷೆಯ ಶಾಸನವಿದ್ದು, ಬಹುತೇಕ ಅಕ್ಷರಗಳು ನಾಶ ಗೊಂಡಿವೆ. ಅಳಿದುಳಿದ ಅಕ್ಷರಗಳ ಆಧಾರದ ಮೇಲೆ ಶಾಸನವು 14-15 ನೇ ಶತಮಾನಕ್ಕೆ ಸೇರಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಶಾಸನವನ್ನು ಪತ್ತೆ ಮಾಡಿದ ಮಕ್ಕಳಾದ ಸಂಜಯ್‌ ನಾಯಕ್‌ ಕಾರ್ತಿಕ್‌ ಶ್ರೇಯಸ್‌, ಅದ್ವೈತ್‌, ಸಮೃದ್‌್ಧ, ಸುವಿನ್‌, ಪ್ರವೀಣ್‌ ಸೃಜನೀ ಶ್ರೀನಿತ, ಪ್ರಜ್ವಲ್‌ ಮನ್ವಿತ್‌ ಇವರ ಕಾರ್ಯ ಅಭಿನಂದನೀಯವಾಗಿದ್ದು, ಇತಿಹಾಸವನ್ನು ರಕ್ಷಿಸಿಕೊಂಡು ಹೋಗವಲ್ಲಿ ಮಕ್ಕಳ ಪಾತ್ರ ಮುಖ್ಯವಾಗಿದೆ ಎಂದು ಮಕ್ಕಳ ಶೋಧನಾ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಜಮಖಂಡಿ: ಕಸದ ತಿಪ್ಪೆಗುಂಡಿಯಲ್ಲಿ ಶೈವ ಶಾಸನ ಪತ್ತೆ!

ಏ.29 ಕೊಪ್ಪ 01 ಫೋಟೋ:

ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎತ್ತಿನಟ್ಟಿಪ್ರದೇಶದಲ್ಲಿ ಸ್ಥಳೀಯ ಮಕ್ಕಳು ಪತ್ತೆ ಹಚ್ಚಿದ 14-15 ನೇ ಶತಮಾನಕ್ಕೆ ಸೇರಿದ ಶಾಸನೋಕ್ತ ವೀರಗಲ್ಲು

click me!