ಕಾಂಗ್ರೆಸ್‌ನ ವಿಷ ನುಂಗಿ, ಪ್ರಧಾನಿ ವಿಷಕಂಠ ಆಗಿದ್ದಾರೆ : ಚೌವ್ಹಾಣ್‌

By Kannadaprabha News  |  First Published Apr 30, 2023, 6:03 AM IST

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮತ ನೀಡಿದರೆ ಅದು ಭ್ರಷ್ಟಾಚಾರಕ್ಕೆ ಮತ ಹಾಕಿದಂತೆ ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌವ್ಹಾಣ್‌ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.


  ಮಧುಗಿರಿ :  ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮತ ನೀಡಿದರೆ ಅದು ಭ್ರಷ್ಟಾಚಾರಕ್ಕೆ ಮತ ಹಾಕಿದಂತೆ ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌವ್ಹಾಣ್‌ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

ಶನಿವಾರ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ರೋಡ್‌ ಶೋ ನಡೆಸಿ ಮಾತನಾಡಿ, ಕಾಂಗ್ರೆಸ್‌ ಅಧಿಕಾರಕ್ಕಾಗಿ ಎಂತಹ ಸುಳ್ಳನ್ನೂ ಸಹ ಹೇಳುತ್ತಿದೆ. ಇವರಿಗೆ

Tap to resize

Latest Videos

ಜನರ ಕಲ್ಯಾಣಕ್ಕಿಂತ ಇವರ ಕಲ್ಯಾಣವೇ ಮುಖ್ಯವಾಗಿದೆ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್‌ ನೀಡಿದೆ. ಆದರೆ ಕಾಂಗ್ರೆಸ್‌-ಜೆಡಿಎಸ್‌ ಹೊರಗಿನವರಿಗೆ ಟಿಕೆಟ್‌ ನೀಡಿದ್ದು

ಮಧುಗಿರಿ ಅಭಿವೃದ್ಧಿಯಾಗಲು ಬಿಜೆಪಿಯಿಂದ ಮಾತ್ರ ಸಾಧ್ಯ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮಧುಗಿರಿ ಬೆಟ್ಟಕ್ಕೆ ರೋಪ್‌ ವೇ ಮಾಡಿಕೊಟ್ಟು ಮಧುಗಿರಿಯ ಎಲ್ಲ ಅಭಿವೃದ್ಧಿ ಮಾಡಲಾಗುವುದು. ವಿಶ್ವದಲ್ಲೇ ದೇಶದ ಗೌರವ ಕಾಪಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ವಿಷಸರ್ಪ ಎನ್ನುತ್ತಾರೆ. ಆದರೆ ದೇಶಕ್ಕೆ ವಿಷಕಾರಿಯಾದ ಕಾಂಗ್ರೆಸ್‌ನವರ

ಎಲ್ಲ ವಿಷವನ್ನು ನುಂಗಿರುವ ಪ್ರಧಾನಿಗಳು ಇಂದು ಭಾರತಕ್ಕಾಗಿ ವಿಷಕಂಠನಾಗಿದ್ದಾರೆ. ವಿದೇಶದಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.

ಭಯೋತ್ಪಾದಕರು ಇಂದು ದೇಶದ ನೆಲದಲ್ಲಿ ಕಾಲಿಡಲು ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಲು ನರೇಂದ್ರ ಮೋದಿಯ ಆಡಳಿತ ಕಾರಣವಾಗಿದೆ. ಪ್ರಧಾನಿಯವರನ್ನು

ಏನೂ ಮಾಡಲಾಗದ ಕಾಂಗ್ರೆಸ್‌ ಇಂದು ವೃಥಾ ಆರೋಪ ಮಾಡುತ್ತಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಮತ ಹಾಕುವುದು ಅಭಿವೃದ್ಧಿಗೆ ಯಾವುದೇ ಪ್ರಯೋಜನವಿಲ್ಲ ಎಂದರು.

ಇವೆರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು. ಕುಟುಂಬದ ಹಿತಾಸಕ್ತಿ ಮಾತ್ರ ಇವರಿಗೆ ಬೇಕಿದೆ. ಇವರಿಗೆ ಜನರ ಕಲ್ಯಾಣಕ್ಕಿಂತ ಅಧಿಕಾರವೇ ಮುಖ್ಯವಾಗಿದ್ದು, ಕಾಂಗ್ರೆಸ್‌

ಕರ್ನಾಟಕವನ್ನು ದೆಹಲಿಯ ಎಟಿಎಂ ಆಗಿಸಲು ಹೊರಟಿದ್ದು ದೆಹಲಿಯ ಕಾಂಗ್ರೆಸ್‌ ಕಚೇರಿಗೆ ತಲುಪಲಿದೆ. ರಾಜ್ಯದ ಹಣ ಲೂಟಿ ಮಾಡಲು ಕಾಂಗ್ರೆಸ್‌ ಸಿದ್ಧವಾಗಿದ್ದು

ಅದಕ್ಕೆ ಅವಕಾಶ ಮಾಡಿಕೊಡಬೇಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ನೀಡಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇಂದು ಈ ಯೋಜನೆಯನ್ನು ರಾಷ್ಟ್ರೀಯ

ಯೋಜನೆಯೆಂದು ಘೋಷಿಸಿದ್ದು 5300 ಕೋಟಿ ಅನುದಾನ ನೀಡಿದ್ದು ಈ ಭಾಗದಲ್ಲಿ ಬರಗಾಲ ಕೊನೆಯಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಅಭ್ಯರ್ಥಿ ಎಲ್‌.ಸಿ.ನಾಗರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜಣ್ಣ, ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ, ಚುನಾವಣಾ ಉಸು

್ತವಾರಿ ರವೀಶ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಾಗೇಂದ್ರ, ಸೀತಾರಾಮು, ಜಯಣ್ಣ, ಸುರೇಶ್‌, ಕಂಬದ ರಂಗಯ್ಯ, ಯುವಮೋರ್ಚ ಪ್ರಧಾನ ಕಾರ್ಯದರ್ಶಿ

ದೀಕ್ಷಿತ್‌ ತಾಲೂಕು ಅಧ್ಯಕ್ಷ ಕಾರ್ತಿಕ್‌ ಆರಾಧ್ಯ, ಮಾಧ್ಯಮ ಸಂಚಾಲಕರಾದ ಸುನೀಲ್‌, ಮೋಹನ್‌ರಾಜ್‌, ಉಪ್ಪಾರಹಳ್ಳಿ ಶಿವಕುಮಾರ್‌ ಹಾಗೂ ನೂರಾರು

ಕಾರ್ಯಕರ್ತರು ಜೊತೆಗಿದ್ದರು.

ಎಸ್‌ಎಂಎಸ್‌ ಜೋಡಿ ಬಗ್ಗೆ ಎಚ್ಚರವಾಗಿರಿ: ಚೌವ್ಹಾಣ್‌

ರಾಜ್ಯದಲ್ಲಿ ಧರ್ಮದ ವಿಚಾರ ಮುಂದಿಟ್ಟುಕೊಂಡು ಮತಕ್ಕಾಗಿ ಹೊರಟಿರುವ ಈ ಎಸ್‌ಎಂಎಸ್‌ (ಸಿದ್ದರಾಮಯ್ಯ, ಮಲ್ಲಿಕಾರ್ಜುನ್‌ ಖರ್ಗೆ, ಶಿವಕುಮಾರ್‌) ಬಗ್ಗೆ

ರಾಜ್ಯದ ಜನರು ಎಚ್ಚರದಿಂದ ಇರಬೇಕು. ಇವರಿಂದ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದ್ದು ಕಾಂಗ್ರೆಸ್‌ನ ಗ್ಯಾರೆಂಟಿ ನಂಬಬೇಡಿ. ಮಧ್ಯಪ್ರದೇಶದಲ್ಲಿಯೂ ಅಧಿಕಾರಕ್ಕೆ ಬರುವ

ಮುನ್ನ ರೈತರ ಸಾಲ ಮನ್ನಾ ಮಾಡುವ ಬಗ್ಗೆ ಹೇಳಿದ್ದು, ವರ್ಷವಾದರೂ ಸಾಲಮನ್ನಾ ಮಾಡಲಿಲ್ಲ. ಇಲ್ಲೂ ಸಹ ಕಾಂಗ್ರೆಸ್‌ನ ಗ್ಯಾರೆಂಟಿಗಳ ಬಗ್ಗೆ ಜನರು ನಂಬಬಾರದು.

ದæೕಶ ಹಾಗೂ ರಾಜ್ಯದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌವ್ಹಾಣ್‌ ಹೇಳಿದರು.

29ಕೆಎಂಡಿಜಿ1,,,ಮಧುಗಿರಿಯಲ್ಲಿ ನಡೆದ ಬಿಜೆಪಿ ಚುನಾವಣಾ ರಾರ‍ಯಲಿಯಲ್ಲಿ ಮಧ್ಯಪ್ರದೇಶದ ಸಿಎಂ ಶಿವರಾಜ್‌ ಸಿಂಗ್‌ ಚೌವ್ಹಾಣ್‌ ಮಾತನಾಡಿದರು.

click me!