ಜಿಂದಾಲ್‌ನಲ್ಲಿ ಕೆಲಸ ಮಾಡುತ್ತಿದ್ದ 32 ವರ್ಷದ ವ್ಯಕ್ತಿಗೆ ಸೋಂಕು ದೃಢ| ಸೋಂಕಿತ ಜೂ. 8ರಂದು ಜಿಂದಾಲ್ ಕಂಪನಿಗೆ ಹೋಗಿ ಬಂದಿದ್ದ. ಜೂ. 14ರ ವರೆಗೆ ಹೋಂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿತ್ತು| ಹೊಸಳ್ಳಿಯ ಕ್ವಾರಂಟೈನ್ ಕೇಂದ್ರದಿಂದ ಈತನ ಗಂಟಲು ದ್ರವ ಜೂ. 18ರಂದು ಪರೀಕ್ಷೆಗೆ ಕಳಿಸಲಾಗಿತ್ತು| ಪರೀಕ್ಷೆಯ ಫಲಿತಾಂಶ ಭಾನುವಾರ ಬಂದಿದ್ದು, ಕೊರೋನಾ ಸೋಂಕು ದೃಢ|
ಕೊಪ್ಪಳ(ಜೂ.22): ಜಿಲ್ಲೆಗೆ ಮತ್ತೊಂದು ಜಿಂದಾಲ್ ನಂಜಿನ ನಂಟು ತಾಕಿದೆ. ಗಂಗಾವತಿ ತಾಲೂಕಿನ ಮರಳಿ ಗ್ರಾಮದಲ್ಲಿ ಭಾನುವಾರ ಮತ್ತೊಂದು ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.
ಜಿಂದಾಲ್‌ನಲ್ಲಿ ಕೆಲಸ ಮಾಡುತ್ತಿದ್ದ 32 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಡಳಿತ ಪ್ರಕಟಿಸಿದೆ. ಈತ ಜೂ. 8ರಂದು ಜಿಂದಾಲ್ ಕಂಪನಿಗೆ ಹೋಗಿ ಬಂದಿದ್ದ. ಜೂ. 14ರ ವರೆಗೆ ಹೋಂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿತ್ತು. ಹೊಸಳ್ಳಿಯ ಕ್ವಾರಂಟೈನ್ ಕೇಂದ್ರದಿಂದ ಈತನ ಸ್ವಾ್ಯಬನ್ನು ಜೂ. 18ರಂದು ಪರೀಕ್ಷೆಗೆ ಕಳಿಸಲಾಗಿತ್ತು. ಪರೀಕ್ಷೆಯ ಫಲಿತಾಂಶ ಭಾನುವಾರ ಬಂದಿದ್ದು, ಕೊರೋನಾ ಸೋಂಕು ದೃಢಪಟ್ಟಿದೆ.
ಕೊಪ್ಪಳ: ಕೊರೋನಾ ಪೀಡಿತರ ಚಿಕಿತ್ಸೆಗೆ 9 ಖಾಸಗಿ ಆಸ್ಪತ್ರೆ
ಈತನ ಮನೆಯಲ್ಲಿನ ನಾಲ್ವರು ಹಾಗೂ ಕ್ವಾರಂಟೈನ್ ಕೇಂದ್ರದ ನಾಲ್ವರನ್ನು ಪ್ರಾಥಮಿಕ ಸಂಪರ್ಕಿತರು ಎಂದು ಗುರುತಿಸಲಾಗಿದೆ. ಅಲ್ಲದೆ ಕ್ವಾರಂಟೈನ್ ಕೇಂದ್ರದ ಇತರೆ ನಾಲ್ವರನ್ನು ದ್ವಿತೀಯ ಸಂಪರ್ಕಿತರು ಎಂದು ಪತ್ತೆ ಹಚ್ಚಲಾಗಿದೆ. ಜಿಲ್ಲೆಯ ಒಟ್ಟಾರೆ ಪೈಕಿ 12 ಜನ ಗುಣಮುಖರಾಗಿದ್ದಾರೆ. ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. ಭಾನುವಾರದ ಪ್ರಕರಣ ಸೇರಿ 16 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.