ಡೇಂಜರ್ ಬೆಂಗಳೂರು, ತುರ್ತು ಸಭೆ ಕರೆದ ಬಿಎಸ್‌ವೈ, ಲಾಕ್ ಡೌನ್‌ ಜಾರಿ?

By Suvarna NewsFirst Published Jun 21, 2020, 11:26 PM IST
Highlights

ಬೆಂಗಳೂರಿನಲ್ಲಿ ಕೊರೋನಾ ಉಲ್ಬಣ/ ಡೇಂಜರ್ ಬೆಂಗಳೂರು/ ತುರ್ತು ಸಭೆ ಕರೆದ ಸಿಎಂ ಯಡಿಯೂರಪ್ಪ/ ಮತ್ತೆ ಲಾಕ್ ಡೌನ್ ಜಾರಿ ಸಾಧ್ಯತೆ

ಬೆಂಗಳೂರು(ಜೂ. 21)  ಬೆಂಗಳೂರಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಯಡಿಯೂರಪ್ಪ  ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ತುರ್ತು ಸಭೆ ಕರೆದಿದ್ದಾರೆ.

ಸಭೆಯಲ್ಲಿ ಸಚಿವರು ಬಿಬಿಎಂಪಿ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಮತ್ತೆ ಲಾಕ್ ಡೌನ್ ಬಗ್ಗೆ ಚರ್ಚೆಯಾಗಲಿದೆಯಾ ಎನ್ನುವ ಪ್ರಶ್ನೆ ಮೂಡಿದೆ.

ಕೈ ಮೀರಿದ ಕೊರೋನಾ ಹೊಸ ಮಾತ್ರೆ ಬಂದಿದೆ ನೋಡೋಣ

ಬೇರೆ ರಾಜ್ಯದ ರೀತಿಯಲ್ಲಿ ಕರ್ನಾಟಕದಲ್ಲೂ ಮತ್ತೆ ಲಾಕ್ ಡೌನ್ ಆಗುತ್ತಾ ಕಾದು ನೋಡಬೇಕಿದೆ.  ಈಗಾಗಲೇ ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ಈ ತಿಂಗಳ ಅಂತ್ಯದವರೆಗೆ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿದೆ. ಅಮೃತಸರ ಮತ್ತು ಉತ್ತರಾಖಂಡ್ ನಲ್ಲಿ ವೀಕೆಂಡ್ ನಲ್ಲಿ ಎರಡು ದಿವಸ ಲಾಕ್ ಡೌನ್ ಮಾಡಲಾಗುತ್ತಿದೆ.

ಹೀಗಾಗಿ ರಾಜ್ಯದಲ್ಲಿ ಅದರಲ್ಲಿ ವೀಕೆಂಡ್ ನಲ್ಲಿ ಲಾಕ್ ಡೌನ್ ಮಾಡಿದ್ರೆ ಹೇಗೆ ಅನ್ನೋದ್ರ ಬಗ್ಗೆ ಚಿಂತನೆ ಮಾಡಲಾಗ್ತಿದೆ ಎಂಬ ಮಾಹಿತಿ ಬಂದಿದೆ. ಜನಸಂದಣಿ ಕಡಿಮೆ ಮಾಡಲು ಲಾಕ್ ಡೌನ್ ಅನಿವಾರ್ಯ ಎಂಬ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ.

 ಇನ್ನು ಮೇಲೆ ಲಾಕ್ ಡೌನ್ ಇಲ್ಲ ಎಂದು ಸಿಎಂ ಈ ಹಿಂದೆ ಸ್ಪಷ್ಟಪಡಿಸಿದ್ದರು.  ಆದರೆ ಬೆಂಗಳೂರಲ್ಲಿ ಸೊಂಕು ದಿನೇ ದಿನೆ ಉಲ್ಬಣವಾಗುತ್ತಿದ್ದು ಕ್ರಮ ತೆಗೆದುಕೊಳ್ಳಬೇಕಾದ ಸವಾಲು ಸರ್ಕಾರದ ಮುಂದೆ ಇದೆ.

ಪ್ರಮುಖವಾಗಿ ಐಸಿಯು ಮತ್ತು ವೆಂಟಿಲೇಟರ್ ಬೇಡಿಕೆ ಇರೋದ್ರಿಂದ ಅದ್ರ ಬಗ್ಗೆ  ಸಭೆಯಲ್ಲಿ ಚರ್ಚೆಸುವ ಸಾಧ್ಯತೆ ಇದೆ. ಸಭೆಯಲ್ಲಿ ಖಾಸಗಿ ಆಸ್ಪತ್ರೆಯ ದರ ನಿಗದಿ ಮತ್ತು ಖಾಸಗಿ ಆಸ್ಪತ್ರೆಗಳನ್ನ ಬಳಕೆ ಮಾಡಿಕೊಳ್ಳುವ ವಿಚಾರ,  ಹೆಚ್ಚಿನ ಕ್ವಾರಂಟೈನ್ ಸೆಂಟರ್ ನಿರ್ಮಾಣದ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ.

 

 

click me!