ಅರಣ್ಯ ಇಲಾಖೆ ತಕ್ಷಣ ಗುಡ್ಡದ ಪ್ರತಿಯೊಂದು ಭಾಗದಲ್ಲಿ ತನಿಖಾ ಠಾಣೆಗಳನ್ನು ತೆರೆಯಬೇಕು| ಗುಡ್ಡದ ಪ್ರಮುಖ ಭಾಗಗಳಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ಮಾಣ ಮಾಡಬೇಕು| ಕಾಡುಪ್ರಾಣಿಗಳ ದಾಳಿ ತಡೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ಸುರಕ್ಷತಾ ಕಿಟ್‌ಗಳನ್ನು ನೀಡಬೇಕೆಂದು ಪರಿಸರಪ್ರೇಮಿಗಳ ಒತ್ತಾಯ|
ಗದಗ(ಡಂಬಳ)(ಜ.27): ಸೋಮವಾರ ಕಪ್ಪತ್ತಗುಡ್ಡಕ್ಕೆ ಬೆಂಕಿ ಬಿದ್ದು ಅಪಾರ ಹಾನಿಯಾದ ಬೆನ್ನಲ್ಲೇ ಮಂಗಳವಾರವೂ ಮತ್ತೊಂದು ಪ್ರದೇಶದಲ್ಲಿ ಬೆಂಕಿ ತಾಗಿ ಸುಮಾರು 15 ಎಕರೆಗೂ ಅಧಿಕ ಪ್ರದೇಶದಲ್ಲಿನ ಅರಣ್ಯ ನಾಶವಾಗಿದೆ. ಡಂಬಳ ಹಾಗೂ ಡೋಣಿ ಮಧ್ಯದ ಎತ್ತಿನಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡು ಹತ್ತಾರು ಎಕರೆ ಅರಣ್ಯ ಪ್ರದೇಶದಲ್ಲಿ ಅಪಾರ ಪ್ರಮಾಣದ ಔಷಧಿಯ ಗಿಡಮರಗಳು ಹಾಗೂ ಹಲವು ಪ್ರಾಣಿ, ಪಕ್ಷಿಗಳು ಬೆಂಕಿಗೆ ಆಹುತಿವಾಗಿವೆ.
ಬೇಸಿಗೆಯಲ್ಲಿ ಕಪ್ಪತ್ತಗುಡ್ಡಕ್ಕೆ ಪದೇ ಪದೇ ಬೆಂಕಿ ಬಿದ್ದು ಅಪಾರ ಪ್ರಮಾಣದಲ್ಲಿ ಅರಣ್ಯ ಮತ್ತು ಪ್ರಾಣಿ, ಪಕ್ಷಿಗಳು ನಾಶವಾಗುತ್ತಿದ್ದು, ಕೂಡಲೇ ಸಂಬಂಧಪಟ್ಟವರು ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆ ತಕ್ಷಣ ಗುಡ್ಡದ ಪ್ರತಿಯೊಂದು ಭಾಗದಲ್ಲಿ ತನಿಖಾ ಠಾಣೆಗಳನ್ನು ತೆರೆಯಬೇಕು. ಗುಡ್ಡದ ಪ್ರಮುಖ ಭಾಗಗಳಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ಮಾಣ ಮಾಡಬೇಕು. ಕಾಡುಪ್ರಾಣಿಗಳ ದಾಳಿ ತಡೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ಸುರಕ್ಷತಾ ಕಿಟ್‌ಗಳನ್ನು ನೀಡಬೇಕೆಂದು ಪರಿಸರಪ್ರೇಮಿಗಳ ಒತ್ತಾಯವಾಗಿದೆ.
ಕಪ್ಪತ್ತಗುಡ್ಡಕ್ಕೆ ಬೆಂಕಿ : 70 ಹೆಕ್ಟೇರ್ ಅರಣ್ಯ ನಾಶ
ಸಸ್ಯಗಳು ಉಳಿದರೆ ಮಾತ್ರ ಉತ್ತಮ ಪರಿಸರ ಇರಲು ಸಾಧ್ಯ. ಕಪ್ಪತ್ತಗುಡ್ಡದಲ್ಲಿರುವ ಪ್ರತಿಯೊಂದು ಗಿಡವನ್ನು ಕಾಪಾಡುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ ಎಂದು ಪರಿಸರವಾದಿ ಗೋಣಿಬಸಪ್ಪ ಕೋರ್ಲಹಳ್ಳಿ ತಿಳಿಸಿದ್ದಾರೆ.