ಕುಸಿಯುವ ಹಂತದಲ್ಲಿ ಹಾಸನದ ಐತಿಹಾಸಿಕ ಪ್ರಸಿದ್ಧ ದೇಗುಲ

By Kannadaprabha NewsFirst Published Jul 28, 2021, 1:39 PM IST
Highlights
  • ತಾಲೂಕಿನ ದಕ್ಷಿಣ ಕಾಶಿ ಎಂದು ಭಾಸ್ಕರ ನಗರವೆಂದು ಕರೆಯಲ್ಪಡುವ ಶ್ರೀ ಕ್ಷೆತ್ರ ರಾಮನಾಥಪುರದ ಐತಿಹಾಸಿಕ ರಾಮೇಶ್ವರ ದೆವಾಲಯ
  • ಅವನತಿ ಅಂಚಿಗೆ ಬಂದು ತಲುಪಿದ ರಾಮೇಶ್ವರ ದೇವಾಲಯ

ಅರಕಲಗೂಡು (ಜು.28): ತಾಲೂಕಿನ ದಕ್ಷಿಣ ಕಾಶಿ ಎಂದು ಭಾಸ್ಕರ ನಗರವೆಂದು ಕರೆಯಲ್ಪಡುವ ಶ್ರೀ ಕ್ಷೆತ್ರ ರಾಮನಾಥಪುರದ ಐತಿಹಾಸಿಕ ರಾಮೇಶ್ವರ ದೆವಾಲಯ ಇಂದು ಅವನತಿ ಅಂಚಿಗೆ ಬಂದು ತಲುಪಿದೆ. 

ಪ್ರತಿದಿನ ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿರುವ ಈ ದೇವಾಲಯ ನಿರ್ವಹಣೆ ಇಲ್ಲದೆ ಇಂದು ಶಿಥಿಲಾವಸ್ಥೆ ತಲುಪಿದೆ. ಹೊಯ್ಸಳರ ಕಾಲದ ಮೂಲ ದೇವಾಲಯಕ್ಕೆ ನಂತರದ ಅರಸರು ಸುಮಾರು 36ಕ್ಕು ಹೆಚ್ಚು  ಶಿವಲಿಂಗಗಳನ್ನು ಪ್ರತಿಷ್ಠಾಪಿಸಿ ಕಲ್ಲಿನ ಮಂಟಪ ನಿರ್ಮಿಸಿ ಅದರ ಮೆಲೆ ಫೌಳಿಯನ್ನು ನಿರ್ಮಿಸಿದ್ದರು.

ದೆವಾಲಯದ ಪಶ್ಚಿಮ ದಿಕ್ಕಿನಲ್ಲಿ ಕಾವೇರಿ ನದಿ ಹರಿಯುತ್ತದೆ. ನದಿಯಯಲ್ಲಿ ಈ ಹಿಂದೆ ವ್ಯಾಪಕವಾಗಿ ಮರಳು ತೆಗೆಯುವ ಕಾರ್ಯ ನಡೆಯುತ್ತಿತ್ತು. ಮರಳು ತೆಗೆಯುವ ಮನುಷ್ಯನ ದುರಾಸೆ ಫಲವಾಗಿ ಅಂದಿನಿಂದಲೇ ದೇವಾಲಯದ ಅವನತಿ  ಆರಂಭವಾಗಿತ್ತು. 

2 ತಿಂಗಳ ಬಳಿಕ ಹಾಸನ ಅನ್‌ಲಾಕ್ : ದೇಗುಲಗಳು ಓಪನ್

ಪಶ್ಚಿಮ ದಿಕ್ಕಿನ ಕಲ್ಲಿನ ಕಂಬಗಳು ಹಳ್ಳದ ಕಡೆಗೆ ಎಳೆಯಲಾರಂಭಿಸಿ, ಕಲ್ಲುಗಳ ನಡುವೆ ಬಿರುಕು ಕಾಣಲಾರಂಭಿಸಿದ್ದುವು. ಇದು ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ಆದ ನಂತರ ಮರಳು ತೆಗೆಯುವ ಕಾರ್ಯಕ್ಕೆ ತಡೆ ಬಿತ್ತಾದರೂ ದೇವಾಲಯದ ಸಂರಕ್ಷಣಾ ಕಾರ್ಯ ಅಥವಾ ದುರಸ್ತಿ ಕಾರ್ಯ ನಡೆಯಲೇ ಇಲ್ಲ. 

ಇನ್ನು ಮೂಲದೇವಾಲಯವೂ ಶಿಥಿಲಾವಸ್ಥೆ ತಲುಪಿದ್ದು ದೇವಾಲಯದಲ್ಲಿ ಸೋರಿಕೆ ಉಂಟಾಗಿ ಮಳೆಗಾಲದಲ್ಲಿ ನೀರು ನಿಲ್ಲಲಾರಂಭಿಸಿದೆ. ದೇವಾಲಯದ ಕಲ್ಲಿನಿಂದ ನಿರ್ಮಿಸಿರುವ ಸುಂದರ ವಿಮಾನಗೋಪುರ ಮತ್ತು ಬೃಹತ್ ರಾಜಗೋಪುರಗಳೆರಡರ ಮೇಲೂ ದೊಡ್ಡ ದೊಡ್ಡ ಗಿಡಗಂಟೆಗಳು ಬೆಳೆದು ನಿಂತಿವೆ.

click me!