* ಇಂದು ಬೆಳಿಗ್ಗೆ 8.18 ರಿಂದ 8.20 ರಲ್ಲಿ ನಡುವೆ ಭೂಕಂಪನ ಅನುಭವ
* ಸೆಪ್ಟೆಂಬರ್ 4ರ ರಾತ್ರಿಯೂ ಕೂಡ ಭೂಮಿ ಕಂಪಿಸಿದ ಅನುಭವವಾಗಿತ್ತು
* ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲು
ವಿಜಯಪುರ(ಸೆ.11): ಜಿಲ್ಲೆಯ ಇಂದು(ಶನಿವಾರ) ಮತ್ತೆ ಭೂಮಿ ನಡುಗಿದ ಅನುಭವವಾಗಿದೆ. ಹೌದು, ಜಿಲ್ಲೆಯಲ್ಲಿ ಎರಡನೇ ಬಾರಿ ಭೂಕಂಪನದ ಅನುಭವವಾಗಿದೆ. ಇಂದು ಬೆಳಿಗ್ಗೆ 8.18 ರಿಂದ 8.20 ರಲ್ಲಿ ನಡುವೆ ಭೂಕಂಪನ ಅನುಭವವಾಗಿದೆ.
ಇದಕ್ಕೂ ಮುನ್ನ ಸೆಪ್ಟೆಂಬರ್ 4ರ ರಾತ್ರಿಯೂ ಕೂಡ ಭೂಮಿ ಕಂಪಿಸಿದ ಅನುಭವವಾಗಿತ್ತು. ಅಂದು ವಿಜಯಪುರ ಜಿಲ್ಲೆಯಾದ್ಯಂತ ಭೂಕಂಪನ ಅನುಭವವಾಗಿತ್ತು.
ವಿಜಯಪುರದಲ್ಲಿ ಭೂಕಂಪನ ಅನುಭವ; 3.9 ರಷ್ಟು ತೀವ್ರತೆ
ಅಂದು ಭೂಕಂಪನ ಅಗಿದ್ದು ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲಾಗಿತ್ತು. ಮಹಾರಾಷ್ಟ್ರದ ಕೊಲ್ಹಾಪುರ ಭೂಕಂಪನದ ಕೇಂದ್ರ ಬಿಂದುವಾಗಿತ್ತು. ಅಂದು ಕರ್ನಾಟಕ ಹವಾಮಾನ ಇಲಾಖೆಯ ಮೂಲಕ ಮಾಹಿತಿಯನ್ನ ಜಿಲ್ಲಾಡಳಿತ ಕಲೆ ಹಾಕಿತ್ತು ಎಂದು ತಿಳಿದು ಬಂದಿದೆ.