
ಹಾಸನ(ಸೆ.11): ಬ್ಯುಸಿ ರಸ್ತೆಯಲ್ಲಿ ಮನಬಂದಂತೆ ಬೈಕ್‌ಗಳಲ್ಲಿ ಓಡಾಟ ನಡೆಸಿ ಸಾರ್ವಜನಿಕರಿಗೆ ತೊಂದರೆ ಕೊಟ್ಟ ಯುವಕರ ವಿರುದ್ಧ ಪ್ರಕರಣ ದಾಖಲಾದ ಘಟನೆ ನಗರದಲ್ಲಿ ಇಂದು(ಶನಿವಾರ) ನಡೆದಿದೆ.
ನಗರದ ಎಂ.ಜಿ ರಸ್ತೆಯಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಕಾರಿನಲ್ಲಿ ಯುವಕನನ್ನ ಮೆರವಣಿಗೆ ಮಾಡಿದ್ದರು. ಆರ್.ಎಕ್ಸ್., ಬುಲೆಟ್ ಬೈಕ್‌ಗಳಲ್ಲಿ ಜಿಗ್ ಜಾಗ್ ಮಾಡುತ್ತಾ ರಸ್ತೆಯಲ್ಲಿ ಓಡಾಟ ನಡೆಸಿ ಯುವಕರು ಪುಂಡಾಟ ನಡೆಸಿದ್ದರು.
ಕೆಆರ್‌ಎಸ್‌ನಲ್ಲಿ ಯುವಕನ ಪುಂಡಾಟಕ್ಕೆ ಪೊಲೀಸ್ ಅಧಿಕಾರಿ ಸಾಥ್, ಬೀದಿ ವ್ಯಾಪಾರಿಗಳಿಗೆ ಮಾತ್ರ ಥಳಿತ!
ಕಾರಿನ ಹಿಂದೆ ಮುಂದೆ ಇದ್ದ ಬೈಕ್‌ಗಳು ಸಾರ್ವಜನಿಕರಿಗೆ ಜಾಗ ಬಿಡದೆ ಯುವಕರು ಪುಂಡಾಟ ನಡೆಸಿದ್ದರು. ಯುವಕರ ಪುಂಡಾಟದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಹಾಸನ ಪೊಲೀಸರು ಕಾರು, ಬೈಕ್‌ನಲ್ಲಿ ಓಡಾಡಿದ್ದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರಿನಲ್ಲಿದ್ದ ತೇಜೂರಿನ ಸುರೇಶ್ ಎಂಬುವರ ವಿರುದ್ಧವೂ ಕೇಸ್ ದಾಖಲಾಗಿದೆ. ಕಾರು, ಬೈಕ್‌ಗಳನ್ನ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.