'ಪಾಕ್‌ ಜಿಂದಾಬಾದ್‌' ಪರ ವಿವಾದಾತ್ಮಕ ಪೋಸ್ಟ್‌: ವಿವಾದಕ್ಕೆ ಕಾರಣವಾದ ನಟ ಚೇತನ್‌ ಕುಮಾರ್‌ ಹೇಳಿಕೆ

Published : Nov 19, 2022, 11:36 PM ISTUpdated : Nov 19, 2022, 11:52 PM IST
'ಪಾಕ್‌ ಜಿಂದಾಬಾದ್‌' ಪರ ವಿವಾದಾತ್ಮಕ ಪೋಸ್ಟ್‌: ವಿವಾದಕ್ಕೆ ಕಾರಣವಾದ ನಟ ಚೇತನ್‌ ಕುಮಾರ್‌ ಹೇಳಿಕೆ

ಸಾರಾಂಶ

'ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳ ಪರ ಮಾತನಾಡುವ ಮೂಲಕ ವಿವಾದಾವನ್ನ ಮೈಮೇಲೆ ಎಳೆದುಕೊಂಡ ನಟ ಚೇತನ್‌ ಕುಮಾರ್ 

ಬೆಂಗಳೂರು(ನ.19): ಸದಾ ವಿವಾದಗಳ ಮೂಲಕ ಸುದ್ದಿಯಲ್ಲಿರುವ ನಟ ಚೇತನ್‌ ಕುಮಾರ್ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಹೌದು, ಈ ಬಾರಿ 'ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳ ಪರ ಮಾತನಾಡುವ ಮೂಲಕ ವಿವಾದಾವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. 

ನಿನ್ನೆ ನಡೆದ ಕಾಲೇಜು ಫೆಸ್ಟ್‌ನಲ್ಲಿ ಬೆಂಗಳೂರಿನ 3 ವಿದ್ಯಾರ್ಥಿಗಳು 'ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆಗಳನ್ನು ಕೂಗಿದ್ದರು. ಈ ಕಾರಣಕ್ಕಾಗಿ  ಆರ್ಯನ್, ರಿಯಾ ಮತ್ತು ದಿನಕರ್ ಎಂಬ ವಿದ್ಯಾರ್ಥಿಗಳಿಗೆ ಥಳಿಸಿ ಬೆದರಿಸಿ ಮತ್ತು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. 

ಐಷಾರಾಮಿ ಬಂಗಲೆಯಲ್ಲಿ ಜೀವನ ನಡೆಸುವವರು ನೆಗ್ಲೆಟ್ ಮಾಡ್ಲಿ: ಉಪೇಂದ್ರಗೆ ಟಾಂಗ್ ಕೊಟ್ಟ ಚೇತನ್

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚೇತನ್‌ ಕುಮಾರ್‌ ಅವರು ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಿನ್ನೆ ನಡೆದ ಕಾಲೇಜು ಫೆಸ್ಟ್‌ನಲ್ಲಿ ಬೆಂಗಳೂರಿನ 3 ವಿದ್ಯಾರ್ಥಿಗಳು 'ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಇದನ್ನು ವಿನೋದಕ್ಕಾಗಿ ಮಾಡಲಾಗಿದೆ. ಈ ಕಾರಣಕ್ಕಾಗಿ  ಆರ್ಯನ್, ರಿಯಾ ಮತ್ತು ದಿನಕರ್ ಅವರನ್ನು ಥಳಿಸಿ ಬೆದರಿಸಿ ಮತ್ತು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.ಇದು ಅಸಂಬದ್ಧ ಮತ್ತು ಅಪಾಯಕಾರಿ. ಪಾಕಿಸ್ತಾನದ ಜನರು ನಮ್ಮ ಸಹೋದರಿಯರು ಮತ್ತು ಸಹೋದರರು - ನಮ್ಮ ಶತ್ರುಗಳಲ್ಲ. ವಾಕ್ ಸ್ವಾತಂತ್ರ್ಯವನ್ನು ನಾವು ಎತ್ತಿ ಹಿಡಿಯಬೇಕು ಅಂತ ಬರೆದುಕೊಂಡಿದ್ದಾರೆ. ಇವರ ಪೋಸ್ಟ್‌ಗೆ ಫೇಸ್‌ಬುಕ್‌ನಲ್ಲಿ ಜನರು ಕೆಂಡಕಾರಿದ್ದಾರೆ. 
 

PREV
Read more Articles on
click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಬೆಂಗಳೂರಿನ ಹಲವೆಡೆ ಡಿ.6, 8ಕ್ಕೆ ಪವರ್ ಕಟ್, ಯಾವ ಏರಿಯಾದಲ್ಲಿ 8 ಗಂಟೆ ವಿದ್ಯುತ್ ಕಡಿತ?