ಟಮೋಟ, ಈರುಳ್ಳಿ ಬಳಿಕ ಈಗ ಬಾಳೆ ಹಣ್ಣಿಗೂ ಡಿಮ್ಯಾಂಡ್ ಬಂದಿದ್ದು ತಿಪಟೂರು ಸಮೀಪ ಕಾರೇಹಳ್ಳಿ ಸಂತೆಯಲ್ಲಿ ವರ್ತಕರು ಬಾಳೆಹಣ್ಣಿಗಾಗಿ ಮುಗಿಬಿದ್ದಿದ್ದಾರೆ.
ತುಮಕೂರು: ಟಮೋಟ, ಈರುಳ್ಳಿ ಬಳಿಕ ಈಗ ಬಾಳೆ ಹಣ್ಣಿಗೂ ಡಿಮ್ಯಾಂಡ್ ಬಂದಿದ್ದು ತಿಪಟೂರು ಸಮೀಪ ಕಾರೇಹಳ್ಳಿ ಸಂತೆಯಲ್ಲಿ ವರ್ತಕರು ಬಾಳೆಹಣ್ಣಿಗಾಗಿ ಮುಗಿಬಿದ್ದಿದ್ದಾರೆ.
ಶ್ರಾವಣ ಮಾಸದ ಹಿನ್ನೆಲೆ ಬಾಳೆಹಣ್ಣಿಗೆ ಪೂರ್ತಿ ಬೇಡಿಕೆ ಹೆಚ್ಚಾಗಿದ್ದು ಹಣ್ಣಿಗಾಗಿ ವರ್ತಕರು ಮುಗಿಬಿದ್ದಿದ್ದಾರೆ. ಬಾಳೆಹಣ್ಣು ಮಾರುಕಟ್ಟೆಗೆ ಹೋಗುವ ಮುನ್ನವೇ ರೈತನ ಮೇಲೆ ವರ್ತಕರು ಮುಗಿಬಿದಿದ್ದಾರೆ . ಹೀಗಾಗಿ ನಡು ರಸ್ತೆಯಲ್ಲಿ ಬಾಳೆ ಹಣ್ಣಿನ ಬೆಲೆಯನ್ನು ರೈತರು ಹರಾಜು ಕೂಗಿದರು. ಕೆ.ಜಿ.ಗೆ 120 ರು. ನಂತೆ ಬಾಳೆ ಹಣ್ಣನ್ನು ಹರಾಜಿಗೆ ಕೂಗಿದ್ದಾರೆ.
ಸಾಲು ಸಾಲು ಹಬ್ಬ ಗಗನಕ್ಕೇರಿದಹಣ್ಣುಗಳ ಬೆಲೆ
ಬೆಂಗಳೂರು (ಆ.19) ಕಡಿಮೆ ಪೂರೈಕೆ ಕಾರಣದಿಂದಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆಜಿ ಏಲಕ್ಕಿ ಬಾಳೆಹಣ್ಣಿನ ಬೆಲೆ 100 ರು. ದಾಟಿದೆ. ಅಲ್ಲದೆ, ಕಿತ್ತಳೆ, ಸೇಬು ಹಣ್ಣಿನ ದರವೂ 200 ರು. ದರದಲ್ಲೇ ಇದೆ. ಶ್ರಾವಣ ಮಾಸ ಆರಂಭದಲ್ಲಿ ಯೇ ಹಣ್ಣುಗಳ ಬೆಲೆ ಗಗನಕ್ಕೇರುತ್ತಿದೆ.
ಮಳೆ ವ್ಯತ್ಯಯ ಸೇರಿ ಇತರೆ ಕಾರಣದಿಂದ ಬೇಡಿಕೆಯಷ್ಟುಬಾಳೆಹಣ್ಣು ನಗರಕ್ಕೆ ಬರುತ್ತಿಲ್ಲ. ಹೆಚ್ಚಾಗಿ ಬೇಡಿಕೆ ಇರುವ ಏಲಕ್ಕಿ ಹಾಗೂ ಪಚ್ಚ ಬಾಳೆಹಣ್ಣು ಕಡಿಮೆಯಾಗಿವೆ. ನಗರದ ಬಿನ್ನಿಮಿಲ್, ಕೆ.ಆರ್.ಮಾರುಕಟ್ಟೆಗೆ ತಮಿಳು ನಾಡು, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಗ್ರಾಮಾಂತರ ಪ್ರದೇಶದಿಂದ ಪೂರೈಕೆಯಾಗುತ್ತಿದ್ದ ಬಾಳೆಹಣ್ಣು ಸಗಟು ಪ್ರಮಾಣ ಗಣನೀಯವಾಗಿ ಕುಸಿದಿದೆ. ಹೀಗಾಗಿ ಬೆಲೆ ಹೆಚ್ಚುತ್ತಿದೆ. ಚಿಲ್ಲರೆ ಮಾರು ಕಟ್ಟೆಗಳಲ್ಲಿ, ತಳ್ಳುಗಾಡಿಗಳಲ್ಲಿ ಕೆಜಿ ಬಾಳೆಹಣ್ಣು 110 ರು. ವರೆಗೂ ಮಾರಾಟವಾಗುತ್ತಿದೆ.
Today Horoscope: ಇಂದಿನಿಂದ ನಿಜ ಶ್ರಾವಣ ಮಾಸ ಆರಂಭ..ಈ ರಾಶಿಯವರಿಗೆ ವಿಷ ಜಂತುಗಳಿಂದ ತೊಂದರೆ !
ಸೀಸನ್ ಆರಂಭವಾಗುತ್ತಿದ್ದರೂ ಸೇಬು ಹಣ್ಣಿನ ಬೆಲೆ ಇಳಿಕೆಯಾಗಿಲ್ಲ. ಕಳೆದ ಎರಡು ತಿಂಗಳಿಂದ ಸೇಬು ಹಣ್ಣು ಕೆಜಿಗೆ 200-250 ರು. ದರದಲ್ಲಿಯೇ ಇದೆ. ಉತ್ತರ ಭಾರತದಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯ ಲ್ಲಿ ಸಂಚಾರ ವ್ಯತ್ಯಯವಾಗಿದೆ. ಅಲ್ಲಿಂದ ಸಮರ್ಪಕವಾಗಿ ಹಣ್ಣು ಪೂರೈಕೆ ಆಗುತ್ತಿಲ್ಲ. ಇನ್ನು ಕಿತ್ತಳೆ ಹಣ್ಣಿನ ದೇಸಿ ಮಾರುಕಟ್ಟೆಇನ್ನೂ ತೆರೆದುಕೊಂಡಿಲ್ಲ. ಹೀಗಾಗಿ ಈ ಹಣ್ಣಿನ ಬೆಲೆ ಕೂಡ ದ್ವಿಶತಕದಲ್ಲೇ ಮುಂದುವರಿದಿದೆ ಎಂದು ಹಣ್ಣಿನ ವ್ಯಾಪಾರಸ್ಥರು ಹೇಳಿದ್ದಾರೆ.
ಶ್ರಾವಣದಲ್ಲಿ ಮಂಗಳಗೌರಿ ವ್ರತ ಸೇರಿ ಸಾಲುಸಾಲಾಗಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳಿಗೆ ಹಣ್ಣುಗಳು ತುಟ್ಟಿಯಾಗುವುದು ಬಹುತೇಕ ನಿಶ್ಚಿತವಾಗಿದೆ.