ಎಂಟು ವರ್ಷ ಅಧ್ಯಯನ ಮಾಡಿ ಪಿಎಫ್‌ಐ ಬ್ಯಾನ್‌: ನಳಿನ್‌ ಕುಮಾರ್‌ ಕಟೀಲ್‌

By Kannadaprabha News  |  First Published Sep 29, 2022, 7:08 PM IST

ಧಾರ್ಮಿಕ ಸಂಘಟನೆ ಹೆಸರಿನಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆದಿತ್ತು. ಇವರಿಗೆ ವಿದೇಶಿ ಹಣ ಹರಿದು ಬರುತಿತ್ತು. ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದರು. ಈ ಸಂಘಟನೆಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಉದ್ದೇಶವಾಗಿತ್ತು. ಯಾವುದೇ ಸಂಘಟನೆಗಳು ದೇಶದ್ರೋಹ ಕೆಲಸ ಮಾಡಿದರೆ ಕ್ರಮ ಜರುಗಿಸುತ್ತೇವೆ ಎಂದ ಕಟೀಲ್‌ 


ಅಥಣಿ(ಸೆ.29):  ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿರುವ ಸಂಸ್ಥೆಗಳನ್ನು ನಿಷೇಧ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಕಳೆದ ಎಂಟು ವರ್ಷಗಳು ಅಧ್ಯಯನ ಮಾಡಿ ಪಿಎಫ್‌ಐ ಬ್ಯಾನ್‌ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಅವರು ಅಥಣಿ ತಾಲೂಕಿನ ಮಧಬಾಂವಿ ಗ್ರಾಮದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಸಂಘಟನೆ ಹೆಸರಿನಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆದಿತ್ತು. ಇವರಿಗೆ ವಿದೇಶಿ ಹಣ ಹರಿದು ಬರುತಿತ್ತು. ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದರು. ಈ ಸಂಘಟನೆಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಉದ್ದೇಶವಾಗಿತ್ತು. ಯಾವುದೇ ಸಂಘಟನೆಗಳು ದೇಶದ್ರೋಹ ಕೆಲಸ ಮಾಡಿದರೆ ಕ್ರಮ ಜರುಗಿಸುತ್ತೇವೆ ಎಂದರು.

Tap to resize

Latest Videos

‘‘ಸಾಮೂಹಿಕ ನಾಯಕತ್ವದಡಿ ಚುನಾವಣೆಗೆ ಹೋಗ್ತೀವಿ; ಇದು ನಮ್ಮ, ಸತೀಶ್ ಜಾರಕಿಹೊಳಿ ಗುರಿ’’: NALIN KUMAR KATEEL

ಕಾಂಗ್ರೆಸ್‌ ವಿಸರ್ಜನೆ ಮಾಡ್ತಾರಾ?:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್‌ ಸಹ ಬ್ಯಾನ್‌ ಮಾಡಲಿ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಗಾಂಧೀಜಿ ತತ್ವ ಸಿದ್ಧಾಂತದ ಮೇಲೆ ನಮ್ಮ ಪಕ್ಷ ಇದೆ ಎಂದು ಸಿದ್ದರಾಮಯ್ಯನವರು ಹೇಳುತ್ತಾರೆ. ಗಾಂಧೀಜಿ ಅವರು ಕಾಂಗ್ರೆಸ್‌ ಪಕ್ಷವನ್ನು ವಿಸರ್ಜನೆ ಮಾಡಿ ಎಂದು ಹೇಳಿದ್ದರು. ಇವರು ಕಾಂಗ್ರೆಸ್‌ನ್ನು ವಿಸರ್ಜಿಸುತ್ತಾರೆ? ಎಂದು ಪ್ರಶ್ನಿಸಿದರು.

ಭಯೋತ್ಪಾದನೆ ಸೃಷ್ಟಿದ್ದು ಕಾಂಗ್ರೆಸ್‌:

ಅದರಂತೆ ಪ್ರಿಯಂಕಾ ಖರ್ಗೆ ಅವರು ಈ ಸಂಘಟನೆಗಳ ಬ್ಯಾನ್‌ ಮಾಡಲು ಎಂಟು ವರ್ಷಗಳು ಬೇಕಾಯಿತು ಎಂಬ ಹೇಳಿಕೆ ಉತ್ತರಿಸಿದ ಕಟೀಲ, ಈ ದೇಶವನ್ನು 60 ವರ್ಷಗಳ ಕಾಲ ಆಳಿದ್ದು ಕಾಂಗ್ರೆಸ್‌ ಪಕ್ಷ. ಅವರಿಗೆ ಏಕೆ? ಬ್ಯಾನ್‌ ಮಾಡಲು ಆಗಲಿಲ್ಲ. ಈ ದೇಶದಲ್ಲಿ ಭಯೋತ್ಪಾನೆ ಸೃಷ್ಟಿಸಿದ್ದು ಕಾಂಗ್ರೆಸ್‌ ಪಕ್ಷ. ಅದಲ್ಲದೇ ರಾಜ್ಯದಲ್ಲಿ ಸಿದ್ದರಾಮಯ್ಯನವರ ಅಧಿಕಾರವದಿಯಲ್ಲಿ ಭಯೋತ್ಪಾದನೆಯಲ್ಲಿ ತೊಡಗಿದವರ ಮೇಲೆ ಇರುವ ಕೇಸ್‌ಗಳಿಗೆ ಬಿ ರಿಪೋರ್ಚ್‌ ಹಾಕಿದ್ದು ಕಾಂಗ್ರೆಸ ಪಕ್ಷ ಎಂದು ಹೇಳುತ್ತ ಖರ್ಗೆ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸಚಿವರಾಗಿದ್ದರು. ಅವರಿಗೆ ಈ ಸಂಸ್ಥೆಗಳನ್ನು ಬ್ಯಾನ್‌ ಮಾಡಲು ಯೋಗ್ಯತೆ ಇರಲಿಲ್ಲವಾ? ಎಂದು ಪ್ರಶ್ನೆ ಮಾಡಿ ಅಂಥವರಿಗೆ ಕಾಂಗ್ರೆಸ್‌ ಓಟ್‌ ಬ್ಯಾಂಕ್‌ ರಾಜಕಾರಣಕ್ಕೆ ಬೆಂಗಾವಲಾಗಿತ್ತು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಹಗರಣ:

ಪಿಎಸ್‌ಐ ನೇಮಕಾತಿ ಹಗರಣ ಕಾಂಗ್ರೆಸ್‌ ಕಾಲಾವಧಿಯಲ್ಲಿ. ಅದನ್ನು ತನಿಖೆ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ. ತನಿಖಾ ವರದಿ ಬಂದ ಮೇಲೆ ಸತ್ಯಾಸತ್ಯತೆ ಗೊತ್ತಾಗುತ್ತದೆ ಎಂದು ಹೇಳಿದರು.

ಸಿದ್ದರಾಮಯ್ಯ ಪೇಮೆಂಟ್‌ ಸಿಎಂ: ನಳಿನ್‌ ಕುಮಾರ್‌ ಕಟೀಲ್‌

ಯತ್ನಾಳರಿಗೆ ನೋಟಿಸು:

ಪದೇ ಪದೇ ಪಕ್ಷದ ಮುಖಂಡರ ವಿರುದ್ಧ ಹೇಳಿಕೆಯನ್ನು ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿರುವ ನಿಮ್ಮ ಪಕ್ಷದ ಹಿರಿಯ ಶಾಸಕರಾದ ಬಸವರಾಜ ಪಾಟೀಲ(ಯತ್ನಾಳ) ಅವರ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಕಟೀಲ ಉತ್ತರಿಸಿ, ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರಮಟ್ಟದಲ್ಲಿ ಶಿಸ್ತು ಸಮಿತಿ ಇದೆ. ಅವರು ಈಗಾಗಲೇ ಯತ್ನಾಳ ಅವರಿಗೆ ನೋಟಿಸ್‌ ನೀಡಿದ್ದಾರೆ. ಅವರಿಂದ ಉತ್ತರ ಬಂದಿಲ್ಲ ಎಂದು ಹೇಳಿದರು.

ಅಧ್ಯಕ್ಷ, ಬಿಎಲ್‌ಒ-2ಗಳ ಪ್ರತ್ಯಕ ಸಭೆ

ಕಾಗವಾಡ ಮತಕ್ಷೇತ್ರದ ಬೂತ್‌ ಸಮಿತಿ ಅಧ್ಯಕ್ಷರುಗಳ, ಬಿಎಲ್‌ಒ-2 ಸದಸ್ಯರ ಪ್ರತ್ಯಕ ಸಭೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳೀನಕುಮಾರ ಕಟೀಲ ಅವರು ನಡೆಸಿದರು. ರಾಜ್ಯಾಧ್ಯಕ್ಷರಾದ ನಳಿನಕುಮಾರ ಕಟೀಲರು ಪಕ್ಷದ ನಿಯಮದ ಪ್ರಕಾರ ಎಷ್ಟುಕೆಲಸ ಮಾಡಿದ್ದಿರಿ ಎಂದು ಪ್ರಶ್ನೆ ಮಾಡಿದಾಗ ಖೇವಲ ಇಬ್ಬರು ಸದಸ್ಯರು ಸ್ಪಟ ಉತ್ತರ ನೀಡಿದರೆ ಇನ್ನೂಳಿದವರಿಂದ ಯಾವುದೇ ಉತ್ತರ ಬರಲಿ. ಆಗ ಅಧ್ಯಕ್ಷರಾದ ಕಟೀಲರು ಎಲ್ಲ ಸದಸ್ಯರಿಗೆ ಶಿಕ್ಷಕರ ರೂಪದಲ್ಲಿ ಪಾಠ ಹೇಳಿದಂತೆ ಪ್ರತಿಯೊಬ್ಬರು ಬೂತ್‌ ಅಧ್ಯಕ್ಷರ ಮತ್ತು ಬಿಎಲ್‌ಒ-2 ಅವರು ಅವರ ಕರ್ತವ್ಯಗಳ ಬಗ್ಗೆ ವಿವರವಾಗಿ ಹೇಳಿದರು.
 

click me!