ಸುಮಾರು 50 ವರ್ಷಗಳ ಬಳಿಕ ಜನಸಂಖ್ಯೆ ಆಧಾರದ ಮೇಲೆ ಹಿಂದುಳಿದವರಿಗೆ ಮೀಸಲಾತಿ ಹೆಚ್ಚಿಸಿದ ಬಿಜೆಪಿ ಸರ್ಕಾರದ ನಡೆಯನ್ನ ಮೆಚ್ಚಿ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದಲ್ಲಿ ಇಡೀ ಗ್ರಾಮಕ್ಕೆ ಗ್ರಾಮವೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದೆ.
ಚಿಕ್ಕಮಗಳೂರು (ನ.22): ಸುಮಾರು 50 ವರ್ಷಗಳ ಬಳಿಕ ಜನಸಂಖ್ಯೆ ಆಧಾರದ ಮೇಲೆ ಹಿಂದುಳಿದವರಿಗೆ ಮೀಸಲಾತಿ ಹೆಚ್ಚಿಸಿದ ಬಿಜೆಪಿ ಸರ್ಕಾರದ ನಡೆಯನ್ನ ಮೆಚ್ಚಿ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಹೋಬಳಿಯ ಮಹಲ್ಗೋಡು ಗ್ರಾಮದಲ್ಲಿ ಇಡೀ ಗ್ರಾಮಕ್ಕೆ ಗ್ರಾಮವೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದೆ. ಗ್ರಾಮದ 300ಕ್ಕೂ ಅಧಿಕ ಜನ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಿಸಿದ್ದರಿಂದಲೇ ಬಿಜೆಪಿ ಸೇರಿದ್ದೇವೆ ಎಂದು ಘೋಷಣೆ ಕೂಗಿದ್ದಾರೆ. ಮಹಲ್ಗೋಡು ಗ್ರಾಮದಲ್ಲಿ ಬಹುತೇಕ ಹಿಂದುಳಿದ ಜನಾಂಗಕ್ಕೆ ಸೇರಿದ ಕುಟುಂಬಗಳು, ಮತದಾರರಿದ್ದಾರೆ. ಎಲ್ಲರೂ ಸ್ವಯಂಪ್ರೇರಿತರಾಗಿ ಬಿಜೆಪಿ ಸೇರಿದ್ದಾರೆ.
300ಕ್ಕೂ ಹೆಚ್ಚು ಕೈ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ: ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತಾಡಿದ ಮಾಜಿ ಸಚಿವ ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ವ್ಯಂಗ್ಯವಾಡಿದ್ದಾರೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮಹಲ್ಗೋಡು ಗ್ರಾಮದಲ್ಲಿ ಇಂದು 300ಕ್ಕೂ ಹೆಚ್ಚು ಜನ ಬಿಜೆಪಿ ಸೇರಿದ್ದಾರೆ. ಅವರೇ ಶಾಮಿಯಾನ ತಂದು, ಹಾಕಿ ಅವರೇ ಕಾರ್ಯಕ್ರಮ ಮಾಡಿ ಬಿಜೆಪಿ ಸೇರಿದ್ದಾರೆ. ಮೋದಿ, ಬೊಮ್ಮಾಯಿ ಹಾಗೂ ಬಿ.ಎಸ್.ವೈ ನಾಯಕತ್ವ ಮೆಚ್ಚಿ ಬಿಜೆಪಿ ಸೇರಿದ್ದಾರೆ.
undefined
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರ ಮೇಲೆ ಜನ ವಿಶ್ವಾಸ ಕಳೆದುಕೊಂಡು ಬಹಳ ದಿನಗಳಾಗಿವೆ. ಅವರಿಗೆ ಗೊತ್ತಿರೋದು ಎರಡೇ ವಿಷಯ. ಹಣ ಬಂದರೆ ನಾನು ತಂದೆ ಅನ್ನೋದು. ಬರದಿದ್ದರೆ ಜೀವರಾಜ್ ಬಿಟ್ಟಿಲ್ಲ ಅನ್ನೋದು ಎಂದು ಲೇವಡಿ ಮಾಡಿದರು.ಈ ದೇಶಕ್ಕೆ ಬಿಜೆಪಿ ಅನಿವಾರ್ಯ ಎಂಬ ತೀರ್ಮಾನವನ್ನ ಜನ ಮಾಡಿದ್ದು ,ದಲಿತರಿಗೆ ಮೀಸಲಾತಿ ಹೆಚ್ಚಿಸಿದ ನಮ್ಮ ನಿಲುವನ್ನ ಅವರು ಮೆಚ್ಚಿದ್ದಾರೆ. ದೇಶದ ಭದ್ರತೆಯನ್ನೂ ಗಮನಿಸಿ ಬಿಜೆಪಿ ಸೇರಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಾಂಗ್ರೆಸ್ ಯುವ ಮುಖಂಡ ರವಿರಾಜ ಕೊರವಿ ಬಿಜೆಪಿ ಸೇರ್ಪಡೆ
ಚಿಂಚೋಳಿ: ಜಿಲ್ಲಾ ಕೋಲಿ ಸಮಾಜದ ಅಧ್ಯಕ್ಷ, ಕಾಂಗ್ರೆಸ್ ಯುವ ಮುಖಂಡ ರವಿರಾಜ ಕೊರವಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ಸಮ್ಮುಖದಲ್ಲಿ ಸೇರ್ಪಡೆಯಾಗಿದ್ದಾರೆ.
ಶೀಘ್ರದಲ್ಲೆ ಸುಮಲತಾ ಬಿಜೆಪಿ ಸೇರ್ಪಡೆ: ಸಿ.ಪಿ.ಯೋಗೇಶ್ವರ್
ರವಿರಾಜ ಕೊರವಿ 2016ರಲ್ಲಿ ಕೋಡ್ಲಿ ಜಿಪಂ ಮತಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಪ್ರಬಲ ಆಕಾಂಕ್ಷಿಯಾಗಿದ್ದರು. ಕೊನೆಗಳಿಗೆಯಲ್ಲಿ ಟಿಕೆಟ್ ವಂಚಿತರಾಗಿ ಸ್ಪರ್ಧಿಸಿ ಕೇವಲ 215 ಮತಗಳಿಂದ ಬಿಜೆಪಿ ಅಭ್ಯರ್ಥಿ ರಾಮಲಿಂಗಾರೆಡ್ಡಿ ದೇಶಮುಖ ಅವರಿಂದ ಸೋಲು ಕಂಡಿದ್ದರು. 2011ರಲ್ಲಿ ಚಿಮ್ಮನಚೋಡ ಜಿಪಂ ಬಿಸಿಎಂ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ತಮ್ಮ ಪತ್ನಿ ಸುನಂದಾ ಕೊರವಿ ನಿಲ್ಲಿಸಿ ಗೆಲುವು ಸಾಧಿಸುವಲ್ಲಿ ಪ್ರಮುಖರಾಗಿದ್ದರು. ರವಿರಾಜ ಕೊರವಿ ಕಾಂಗ್ರೆಸ್ ಮತ್ತು ಬಿಜೆಪಿ ಸೇರ್ಪಡೆಯಾಗುವ ಮೊದಲು ತಾಲೂಕ ಜೆಡಿಎಸ್ ಅಧ್ಯಕ್ಷರಾಗಿದ್ದರು.
ಬಿಜೆಪಿ ಸೇರಿಕೊಳ್ಳಲಿದ್ದ ಜೆಡಿಎಸ್ ನಾಯಕನ ಬರ್ಬರ ಹತ್ಯೆ, ಕಲ್ಲಿನಿಂದ ಗುಪ್ತಾಂಗಕ್ಕೆ ಹೊಡೆದು ಕೊಲೆ!
ಬಿಜೆಪಿ ಸೇರಿದ ಸ್ವಸಹಾಯ ಸಂಘದ ಕಾರ್ಯಕರ್ತೆಯರು
ಯಲ್ಲಾಪುರ: ತಾಲೂಕಿನ ಮಳಗಿ ಗ್ರಾಪಂ ವ್ಯಾಪ್ತಿಯ ಹರಗನಹಳ್ಳಿ ಗ್ರಾಮದ ಸ್ವ ಸಹಾಯ ಸಂಘದ 50ಕ್ಕೂ ಹೆಚ್ಚಿನ ಕಾರ್ಯಕರ್ತೆಯರು ಬಿಜೆಪಿ ಸೇರಿದರು.
ಬಿಜೆಪಿ ಸೇರ್ಪಡೆಗೊಂಡ ಮಹಿಳೆಯರನ್ನು ಸಚಿವ ಶಿವರಾಮ ಹೆಬ್ಬಾರ್ ಪಕ್ಷದ ಶಾಲು ಹಾಕಿ ಬರಮಾಡಿಕೊಂಡರು. ಗ್ರಾಪಂ ಸದಸ್ಯರಾದ ಮಾರುತಿ ಹಾನಗಲ್, ನಾಗರತ್ನಾ ಸಾಲಿಗೇರ, ಪ್ರಮುಖರಾದ ಜಗದೀಶ ಪಾಟೀಲ್, ಜಗದೀಶ್ ಈರಾಪುರ, ಜಗದೀಶ್ ನಾಯ್ಕ, ರಮೇಶ್ ಹಸ್ಲರ್, ಅಣ್ಣಪ್ಪ ಬೋವಿ ಹಾಗೂ ಪಕ್ಷದ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.