ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರವಾಗಿ ಮಣಿಪಾಲದಲ್ಲಿ ಪ್ರತಿಕ್ರಿಯಿಸಿದ ಯುವ ಸಂಸದ ತೇಜಸ್ವಿಸೂರ್ಯ ಈವರೆಗೆ ರಾಜ್ಯದಲ್ಲಿ ದೊಡ್ಡಮಟ್ಟದ ಉಗ್ರ ಚಟುವಟಿಕೆ ನಡೆದಿಲ್ಲ. ಈ ಒಂದು ಘಟನೆ ರಾಜ್ಯವನ್ನು ಎಚ್ಚರಿಸಿದೆ. ಕರಾವಳಿಯಲ್ಲೇ ಒಂದು ಎನ್ ಐ ಎ ಆಫೀಸ್ ಸ್ಥಾಪಿಸಬೇಕಾಗಿದೆ ಎಂದಿದ್ದಾರೆ.
ಉಡುಪಿ (ನ.22): ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆ ಮಾಡಬೇಕು ಎಂಬುದು ಕೆಲವರ ಉದ್ದೇಶವಾಗಿದೆ. ಆರ್ಥಿಕ ಶಕ್ತಿಕೇಂದ್ರದಲ್ಲಿ ಕೋಮುಗಲಭೆ ಸೃಷ್ಟಿಸುವ ಷಡ್ಯಂತ್ರ ನಡೆದಿರುವುದು ಬಯಲಾಗಿದೆ. ಕರ್ನಾಟಕದಲ್ಲಿ ಸರಣಿ ಕೊಲೆಗಳು ನಡೆದಿದ್ದವು. ಈಗ ರಾಜ್ಯದ ಶಾಂತಿ ಸುವ್ಯವಸ್ಥೆ ಕೆಡಿಸುವ ಕೆಲಸ ನಡೆಯುತ್ತಿದೆ ಎಂದು ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿಸೂರ್ಯ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರವಾಗಿ ಮಂಗಳವಾರ ಮಣಿಪಾಲದಲ್ಲಿ ಪ್ರತಿಕ್ರಿಯಿಸಿದರು. ಈವರೆಗೆ ರಾಜ್ಯದಲ್ಲಿ ದೊಡ್ಡಮಟ್ಟದ ಉಗ್ರ ಚಟುವಟಿಕೆ ನಡೆದಿಲ್ಲ. ಈ ಒಂದು ಘಟನೆ ರಾಜ್ಯವನ್ನು ಎಚ್ಚರಿಸಿದೆ. ಕರಾವಳಿಯಲ್ಲೇ ಒಂದು ಎನ್ ಐ ಎ ಆಫೀಸ್ ಸ್ಥಾಪಿಸಬೇಕಾಗಿದೆ. ಈ ಹಿಂದೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತನಾಡಿದ್ದೇನೆ. ಮತ್ತೊಮ್ಮೆ ಕೇಂದ್ರ ಸರಕಾರದ ಜೊತೆ ಮಾತನಾಡುತ್ತೇನೆ ಎಂದರು.
ಪಿ.ಎಫ್.ಐ ಬ್ಯಾನ್ ಮಾಡಿದಂತೆ ಭಯೋತ್ಪಾಧಕರನ್ನು ಬೇರು ಸಮೇತ ಕಿತ್ತು ಹಾಕುತ್ತೇವೆ. ಅಲ್ಲಿಯ ತನಕ ನಮ್ಮ ಸರಕಾರಗಳು ವಿಶ್ರಮಿಸುವುದಿಲ್ಲ. ಪೊಲೀಸ್- ಇಂಟೆಲಿಜನ್ಸ್ ಹಾಗು ಎನ್ ಐ ಎ ಜೊತೆಯಾಗಿ ಕೆಲಸ ಮಾಡಿದರೆ ಇಂತಹ ಘಟನೆ ತಡೆಗಟ್ಟಬಹುದು ಎಂದರು
undefined
ರಾಜ್ಯದ ಜನರ ಜೀವ ಮತ್ತು ವಸ್ತುಗಳ ಸಂರಕ್ಷಣೆ ನಮ್ಮ ಕರ್ತವ್ಯವಾಗಿದೆ. ನಾವು ಓಟ್ ಬ್ಯಾಂಕ್ ಗೆ ಮುಲಾಜು ಬಿದ್ದು ರಾಜಕೀಯ ಮಾಡುವುದಿಲ್ಲ, ರಾಷ್ಟ್ರ ಮತ್ತು ರಾಜ್ಯದ ಸುರಕ್ಷತೆಗೆ ನಮ್ಮ ಆದ್ಯತೆಯಾಗಿದೆ. ದೇಶದ ಸುರಕ್ಷತೆ ವಿಚಾರದಲ್ಲಿ ಕಾಂಪ್ರಮೈಸ್ ಮಾಡಲ್ಲ, ಬ್ಲ್ಯಾಸ್ಟ್ ಹಿಂದಿರುವವರನ್ನು ಕಾನೂನಾತ್ಮಕವಾಗಿ ಸಂಹಾರ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
90 ಕಿ.ಮೀ.ಸೈಕಲ್ ತುಳಿದು ತೇಜಸ್ವಿ ಸೂರ್ಯ ದಾಖಲೆ
ಪಣಜಿ: ಕೇಂದ್ರ ಸರ್ಕಾರ ಫಿಟ್ ಇಂಡಿಯಾ ಆಂದೋಲನದ ಅಂಗವಾಗಿ ಆಯೋಜಿಸಲಾಗಿದ್ದ ‘ಐರನ್ ಮ್ಯಾನ್ ರಿಲೇ’ಯನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪೂರ್ಣಗೊಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ರಿಲೇಯನ್ನು ಪೂರ್ಣಗೊಳಿಸಿದ ಮೊದಲ ಸಂಸದ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ.
Mangaluru Bomb Blast:ಅಧರ್ಮದಲ್ಲಿ ಬಂದವರಿಗೆ ಶಿಕ್ಷೆ ನೀಡಿದ ತುಳುನಾಡಿನ ಕಾರ್ಣಿಕ ಅವಳಿ ಪುರುಷರು!
ಇದು ಒಟ್ಟು 3 ವಿಭಾಗಗಳನ್ನು ಒಳಗೊಂಡ 70 ಮೈಲು ದೂರದ ಸ್ಪರ್ಧೆಯಾಗಿದ್ದು, ಮೂವರು ಕನ್ನಡಿಗರು ಸೇರಿ ಇದನ್ನು ಪೂರ್ಣಗೊಳಿಸಿದ್ದಾರೆ. ಮೊದಲ ಹಂತದಲ್ಲಿ 1.9 ಕಿ.ಮೀ. ದೂರದ ಈಜು, 2ನೇ ಹಂತದಲ್ಲಿ 90 ಕಿ.ಮೀ. ದೂರದ ಸೈಕ್ಲಿಂಗ್ ಮತ್ತು ಕೊನೆಯ ಹಂತದಲ್ಲಿ 21.1 ಕಿ.ಮೀ. ದೂರದ ಮ್ಯಾರಥಾನ್ ಅನ್ನು ಒಳಗೊಂಡಿದೆ. ನಾಗರಿಕ ಸೇವೆಯ ಅಧಿಕಾರಿ ಶ್ರೇಯಸ್ ಹೊಸೂರು ಅವರು ಮೊದಲ ಹಂತದ 1.9 ಕಿ.ಮೀ. ದೂರದ ಈಜು ಸ್ಪರ್ಧೆಯನ್ನು ಪೂರ್ಣಗೊಳಿಸಿದ್ದರೆ, ಸಂಸದ ತೇಜಸ್ವಿ ಸೂರ್ಯ 2ನೇ ಹಂತದ 90 ಕಿ.ಮೀ. ದೂರದ ಸೈಕ್ಲಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ. ಉದ್ಯಮಿ ಅಂಕಿತ್ ಜೈನ್ ಕೊನೆ ಹಂತದ 21.1 ಕಿ.ಮೀ. ದೂರದ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದ್ದಾರೆ.
ಮಂಗಳೂರು ಬ್ಲಾಸ್ಟ್ ಪ್ರಕರಣ: ಭಾರೀ ಅನಾಹುತ ತಪ್ಪಿಸಿದ ಆ '16 ಸೆಕೆಂಡ್'
ಫಿಟ್ ಇಂಡಿಯಾ ಆಂದೋಲನದ ಅಂಗವಾಗಿ 2019ರಲ್ಲಿ ಮೊದಲ ಬಾರಿಗೆ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ 2 ವರ್ಷ ಸ್ಥಗಿತಗೊಂಡಿದ್ದ ಈ ಸ್ಪರ್ಧೆಯನ್ನು ಈ ವರ್ಷ ಮತ್ತೆ ನಡೆಸಲಾಗಿದೆ.