Reservation ಹೆಚ್ಚಳಕ್ಕೆ ಒಪ್ಪಿಗೆ, ನ.5 ರಂದು ಬಿಜೆಪಿ ಎಸ್ಟಿ ಸಮಾವೇಶಕ್ಕೆ ಬಳ್ಳಾರಿಯಲ್ಲಿ ಸಿದ್ಧತೆ

By Suvarna News  |  First Published Oct 8, 2022, 6:26 PM IST

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ಸಿಕ್ಕಿರೋ ಹಿನ್ನೆಲೆ, ಬಳ್ಳಾರಿಯಲ್ಲಿ ಬಿಜೆಪಿ ಎಸ್ಟಿ ಸಮಾವೇಶ ಮಾಡಲು ಶ್ರೀರಾಮುಲು ಸೇರಿದಂತೆ ಕಾರ್ಯಕರ್ತರಲ್ಲಿ ಹುರುಪು ಹೆಚ್ಚಾಗಿದೆ.


ವರದಿ ; ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ

ಬಳ್ಳಾರಿ (ಅ.8): ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ಸಿಕ್ಕಿರೋ ಹಿನ್ನೆಲೆ, ಬಳ್ಳಾರಿಯಲ್ಲಿ ಬಿಜೆಪಿ ಎಸ್ಟಿ ಸಮಾವೇಶ ಮಾಡಲು ಶ್ರೀರಾಮುಲು ಸೇರಿದಂತೆ ಕಾರ್ಯಕರ್ತರಲ್ಲಿ ಹುರುಪು ಹೆಚ್ಚಾಗಿದೆ. ಸಿದ್ದರಾಮೋತ್ಸವ ಮಾಡಿದ ಬಳಿಕ ರಾಜ್ಯ ಬಿಜೆಪಿ ಸರ್ಕಾರ ತಮ್ಮ ವರ್ಚಸ್ಸನ್ನು ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಐದು ಕಡೆಗಳಲ್ಲಿ ವಿವಿಧ ಸಮುದಾಯದ ಸಮಾವೇಶ ಮಾಡಲು ಚಿಂತನೆ ನಡೆಸಿತ್ತು. ಇದರ ಭಾಗವಾಗಿ ಬಳ್ಳಾರಿಯಲ್ಲಿ ಎಸ್ಟಿ ಸಮಾವೇಶ ಮಾಡಲು ಯೋಜನೆ ರೂಪಿಸಲಾಗಿತ್ತು. ಆದ್ರೇ, ಮೀಸಲಾತಿ ವಿಚಾರದಲ್ಲಿ ಯಾವುದೇ ಬೆಳವಣಿಗೆಯಾಗದ ಹಿನ್ನೆಲೆ ಎಸ್ಟಿ ಸಮಾವೇಶಕ್ಕೆ ಶ್ರೀರಾಮುಲು ಹಿಂದೇಟು ಹಾಕಿದ್ರು. ಇದೀಗ ಸರ್ವಪಕ್ಷಗಳ ಸಭೆ ಸೇರಿದಂತೆ ಸಚಿವ ಸಂಪುಟದಲ್ಲೂ ಮೀಸಲಾತಿ ಹೆಚ್ಚಳಕ್ಕೆ ಅಸ್ತು ಎಂದ ಕಾರಣ ನವೆಂಬರ್ 5 ರಂದು ಎಸ್ಟಿ ಸಮಾವೇಶ ಮಾಡಲು ಬಳ್ಳಾರಿ ಬಿಜೆಪಿ ಘಟಕ  ಸಿದ್ದತೆ ಮಾಡಿಕೊಳ್ಳುತ್ತಿದೆ. ಇನ್ನು ಮೀಸಲಾತಿ ವಿಚಾರದಲ್ಲಿ ಶ್ರೀರಾಮುಲು ಸೇರಿದಂತೆ ಬಿಜೆಪಿ ಮೇಲೆ ಸಮುದಾಯದ ಮುಖಂಡರು ಸಾಕಷ್ಟು ಆಕ್ರೋಶಗೊಂಡಿದ್ರು. ಸಾಮಾಜಿಕ ಜಾಲತಾಣದಲ್ಲಿ ಟೀಕೆ ಟಿಪ್ಪಣಿ ಮಾಡೋದ್ರ ಜೊತೆ ಶ್ರೀರಾಮುಲು ಬಗ್ಗೆ ವ್ಯಂಗ್ಯವಾಗಿ ಮಾತನಾಡುತ್ತಿದ್ರು. ಆದ್ರೇ, ಇದೀಗ ಮೀಸಲಾತಿ ವಿಚಾರದಲ್ಲಿ ತಾತ್ವಿಕ ಒಪ್ಪಿಗೆ ಸಿಕ್ಕ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲ ಜಾಲತಾಣದಲ್ಲಿ ಶ್ರೀರಾಮುಲು ಅವರನ್ನು  ವೈಭವೀಕರಿಸಲಾಗುತ್ತಿದೆ. ಶ್ರೀರಾಮುಲು ಅವರನ್ನು ಆಧುನಿಕ ಭಗೀರಥ ಎನ್ನುವ ರೀತಿಯಲ್ಲಿ ಎಸ್ಟಿ ಸಮುದಾಯ ಮುಖಂಡರೇ ರಾರಾಜಿಸುತ್ತಿದ್ದಾರೆ. ಇದರ ಜೊತೆಗೆ ಬಳ್ಳಾರಿ ಮತ್ತು ವಿಜಯನಗರ ಎರಡು ಅವಳಿ‌ ಜಿಲ್ಲೆಯ ಹತ್ತು ಕ್ಷೇತ್ರದ ಪೈಕಿ 7 ಮೀಸಲು ಕ್ಷೇತ್ರಗಳಿವೆ. ಇದೀಗ ಮೀಸಲಾತಿ ಹೆಚ್ಚಳವಾಗಿರೋದು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ 5 ಎಸ್ಟಿ ಮತ್ತು 2 ಎಸ್ಸಿ ಕ್ಷೇತ್ರಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸಲಾಗುತ್ತದೆ ಎಂದು  ವಿಶ್ಲೇಷಿಸಲಾಗುತ್ತಿದೆ.

Latest Videos

undefined

ಯಾವ ರಾಜ್ಯದಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮೀಸಲಾತಿ ಇದೆ? ಹಿಂದುಳಿದ ವರ್ಗದ ಕತೆಏನು?

ಬಳ್ಳಾರಿ ವಿಜಯನಗರದಲ್ಲಿ ಸಂಭ್ರಮಾಚರಣೆ: ಎಸ್ಸಿ,ಎಸ್ಟಿ ಮೀಸಲಾತಿಗೆ ತಾತ್ವಿಕ ಒಪ್ಪಿಗೆ ನೀಡಿದ ಹಿನ್ನೆಲೆ, ಬಳ್ಳಾರಿ ಮತ್ತು ಹೊಸಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸಮುದಾಯದ ಮುಖಂಡರು ಸಂಭ್ರಮಾಚರಣೆ ಮಾಡಿದ್ರು. ಬಳ್ಳಾರಿಯಲ್ಲಿನ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡೋದ್ರ ಜೊತೆಗೆ ಶಾಸಕ ಸೋಮಶೇಖರ್ ರೆಡ್ಡಿ, ವಾಲ್ಮೀಕಿ  ಪುತ್ಥಳಿಗೆ ಹಾಲಿನ ಅಭಿಷೇಕ ಮಾಡಿದ್ರು.  ಮೀಸಲಾತಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೀರಾಮುಲುಗೆ ಮತ್ತು ಸಚಿವ ಸಂಫುಟದಲ್ಲಿ ಒಪ್ಪಿಗೆ ನೀಡಿದ ಸಿಎಂ ಬಸವರಾಜ ಬೊಮ್ಮಯಿ ಅವರ ಬ್ಯಾನರ್ ಗೂ ಹಾಲೇರೆದು ಸಂಭ್ರಮಿಸಿದ್ರು.  ಇದರ ಜೊತೆ ನೂರೊಂದು ತೆಂಗಿನ ಕಾಯಿ ಒಡೆದು‌ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು. 

ಎಸ್‌ಸಿ,ಎಸ್‌ಟಿ ಮೀಸಲಾತಿ ಹೆಚ್ಚಳ ನಿರ್ಧಾರ ಸ್ವಾಗತಾರ್ಹ: ಎಚ್‌.ಸಿ. ಮಹದೇವಪ್ಪ

ಶ್ರೀರಾಮುಲು ಹಾಡಿ ಹೊಗಳಿದ ಸೋಮಶೇಖರ ರೆಡ್ಡಿ: ಎಸ್ ಸಿ / ಎಸ್ಟಿ ಸಮುದಾಯಕ್ಕೆ ಸಚಿವ ಶ್ರೀರಾಮುಲು ಕೊಟ್ಟ ಮಾತಿನಂತೆ ಮೀಸಲಾತಿ ನಡೆದು ಕೊಂಡಿದ್ದಾರೆ.  ಶ್ರೀರಾಮುಲು ಹೋರಾಟದಿಂದ ಮೀಸಲಾತಿ ಸಿಕ್ಕಿದೆ ಎಂದು   ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ರು.  ಶ್ರೀರಾಮುಲು ಮಾತು ಕೊಟ್ರೆ ಅದು ಶ್ರೀರಾಮ ಮಾತು ಕೊಟ್ಟಂತೆ ಮೀಸಲಾತಿಯಿಂದಾಗಿ  ಹಿಂದುಳಿದ ಸಮಾಜದವರಿಗೆ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅನೂಕೂಲವಾಗಲಿದೆ ಎಂದ್ರು. ಮೀಸಲಾತಿ ಕೊಟ್ಟಿದ್ದರಿಂದ ಅವಳಿ ಜಿಲ್ಲೆಯ ಏಳು ಮೀಸಲು ಕ್ಷೇತ್ರ ಸೇರಿದಂತೆ ರಾಜ್ಯದ ಹಲವು ಕಡೆ ಇರೋ  ಮೀಸಲು ಕ್ಷೇತ್ರದಲ್ಲಿ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದ್ರು.  

click me!