Murugha Mutt; ಮುರುಘಾ ಮಠದಲ್ಲಿ ಗಣ್ಯರ ಜತೆ ಶ್ರೀಗಳಿದ್ದ 47 ಪೋಟೋ ಕಳ್ಳತನ!

By Suvarna News  |  First Published Oct 8, 2022, 5:59 PM IST

ಮುರುಘಾ ಶ್ರೀಗಳ ವಿರೋಧಿ ಬಣ ಮಾತ್ರ, ಮುರುಘಾ ಮಠದಲ್ಲಿ ಅವರ ಭಾವಚಿತ್ರ ಕೂಡ ಇರ ಕೂಡದು ಎಂದು ಪ್ಲಾನ್ ಮಾಡಿದೆ. ಅದಕ್ಕಾಗಿಯೇ ಮುರುಘಾ ಮಠದಲ್ಲಿ ಮುರುಘಾ ಶ್ರೀ ಹಲವು ಗಣ್ಯರ ಜತೆ ತೆಗೆಸಿದ್ದ ಪೋಟೋ ಕದ್ದೊಯ್ದಿರೋದು ಬೆಳಕಿಗೆ ಬಂದಿದೆ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಅ.8): ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ಬಂಧನವಾಗಿ ಈಗಾಗಲೇ ತಿಂಗಳುಗಳೇ ಕಳೆದು ಹೋಗಿದೆ. ಆದ್ರೆ ಮುರುಘಾ ಶ್ರೀಗಳ ವಿರೋಧಿ ಬಣ ಮಾತ್ರ, ಮುರುಘಾ ಮಠದಲ್ಲಿ ಅವರ ಭಾವಚಿತ್ರ ಕೂಡ ಇರ ಕೂಡದು ಎಂದು ಪ್ಲಾನ್ ಮಾಡಿದೆ. ಅದಕ್ಕಾಗಿಯೇ ಮುರುಘಾ ಮಠದಲ್ಲಿ ಮುರುಘಾ ಶ್ರೀ ಹಲವು ಗಣ್ಯರ ಜತೆ ತೆಗೆಸಿದ್ದ ಪೋಟೋ ಕದ್ದೊಯ್ದಿರೋದು ಬೆಳಕಿಗೆ ಬಂದಿದೆ. ರಾತ್ರೋರಾತ್ರಿ ಮಠಕ್ಕೆ ನುಗ್ಗಿ ಮಠದ ರಾಜಾಂಗಣದ ಗೋಡೆ ಮೇಲೆ ಇದ್ದ ಸುಮಾರು 47 ಪೋಟೋಗಳನ್ನು ಕದ್ದು ಪರಾರಿ ಆಗ್ತಿರೋ ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ಖಾಲಿ ಖಾಲಿಯಾಗಿರುವ ಮುರುಘಾ ಮಠದ ರಾಜಾಂಗಣದ‌ ಗೋಡೆ. ಇದೇ ತಿಂಗಳು 5ನೇ ತಾರೀಖಿನ ಮಧ್ಯರಾತ್ರಿ ಕಳ್ಳರು ಚಿತ್ರದುರ್ಗ ಮುರುಘಾ ಮಠಕ್ಕೆ ಏಕಾಏಕಿ ನುಗ್ಗಿ, ಮುರುಘಾ ಶ್ರೀಗಳು ವಿವಿಧ ಗಣ್ಯರೊಂದಿಗೆ ತೆಗೆಸಿ ಹಾಕಲಾಗಿದ್ದ ಸುಮಾರು 47 ಪೋಟೋಗಳನ್ನು ಕದ್ದು ಪರಾರಿ ಆಗಿದ್ದಾರೆ. ಮುರುಘಾ ಶ್ರೀಗಳು ರಾಷ್ಟ್ರಪತಿ, ಪ್ರಧಾನಿ, ಸಿಎಂಗಳು ಸೇರಿ ವಿವಿಧ ಗಣ್ಯರ ಜತೆ ತೆಗೆಸಿದ್ದ ಎಲ್ಲಾ‌ ಪೋಟೋಗಳನ್ನು ಕದ್ದು ಪರಾರಿ ಆಗಿರೋದು ಮಠದಲ್ಲಿ ‌ಮತ್ತೊಂದು ಆತಂಕ‌ ಸೃಷ್ಟಿಸಿದೆ. ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮುರುಘಾ ಮಠದ SJM ವಿದ್ಯಾಪೀಠದ ಕಾರ್ಯದರ್ಶಿಗಳು‌ ದೂರು ದಾಖಲಿಸಿದ್ದಾರೆ. ಖದೀಮರು ರಾತ್ರೋರಾತ್ರಿ ಮಠಕ್ಕೆ ಬಂದು ಈ ಕೃತ್ಯ ಎಸಗಿರೋದು ಖಂಡನೀಯ, ಆದ್ದರಿಂದ ಪೊಲೀಸರು ಸೂಕ್ತ ತನಿಖೆ ನಡೆಸಿ ಕಳ್ಳರ ಹಿಂದೆ ಯಾರ ಕೈವಾಡ ಇದೆ ಎಂದು ಕಂಡು ಹಿಡಿಹಿಡಿದು ಸೂಕ್ತ ಶಿಕ್ಷೆ ನೀಡಬೇಕಿದೆ‌ ಎಂದು ಮಠದ ಪ್ರಭಾರ ಶ್ರೀಗಳು ಆಗ್ರಹಿಸಿದ್ದಾರೆ.

Latest Videos

undefined

ಮುರುಘಾಶ್ರೀ ಪ್ರಕರಣ: ಎಸ್.ಕೆ‌ ಬಸವರಾಜನ್ ದಂಪತಿ ವಿರುದ್ದ ATROCITY CASE ದಾಖಲಿಸಲು ದಲಿತ ಸಂಘಟನೆ ಆಗ್ರಹ

ಇನ್ನು ಕೇಸ್ ದಾಖಲಾಗಿರುವ ಬಗ್ಗೆ ಎಸ್ಪಿ ಅವರನ್ನೇ ವಿಚಾರಿಸಿದ್ರೆ, ಮುರುಘಾ ಮಠದಲ್ಲಿ ಪೋಟೋಗಳು ಕಳ್ಳತನ ಆಗಿವೆ ಎಂಬ ವಿಷಯಕ್ಕೆ‌ ಸಂಬಂಧಿಸಿದಂತೆ‌ SJM  ವಿದ್ಯಾಪೀಠದ ಕಾರ್ಯದರ್ಶಿ ವಸ್ತ್ರದ್ ಮಠ್ ಅವರು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಯಾರೋ ಅಪರಿಚಿತರು ಮಧ್ಯರಾತ್ರಿ ಮುರುಘಾ ಮಠಕ್ಕೆ ನುಗ್ಗಿ ಮುರುಘಾ ಶ್ರೀಗಳು ವಿವಿಧ ಗಣ್ಯರೊಂದಿಗೆ ತೆಗೆಸಿದ್ದ ಪೊಟೋಗಳನ್ನು ಕಳ್ಳತನ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಸಂಬಂಧ ತನಿಖೆ ಶುರುವಾಗಿದೆ ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚಲಾಗುವುದು ಎಂದು ಭರವಸೆ ನೀಡಿದರು.

ಶೂನ್ಯಪೀಠ ಮುರುಘಾ ಮಠಕ್ಕೆ ಅನ್ಯ ಸಮುದಾಯದವರು ಪೀಠಾಧ್ಯಕ್ಷರು ಯಾಕಾಗಬಾರದು? - ಬಿ.ಕಾಂತರಾಜ್

ಒಟ್ಟಾರೆಯಾಗಿ ಈಗಾಗಲೇ ಮುರುಘಾ ಮಠದಲ್ಲಿ ಒಂದು ರೀತಿ ಬೂದಿ ಮುಚ್ಚಿದ ಕೆಂಡದಂತೆ ವಾತಾವರಣ ಹೊಗೆ ಆಡುತ್ತಲೇ ಇದೆ. ಇಂತಮ ಸಮಯದಲ್ಲಿ ಖದೀಮರು ಮುರುಘಾ ಶ್ರೀಗಳ ಮೇಲಿನ ದ್ವೇಷಕ್ಕೆ ಮಠದಲ್ಲಿದ್ದ ಪೋಟೋಗಳನ್ನು ರಾತ್ರೋರಾತ್ರಿ ಕದ್ದೊಯ್ದಿರೋದು ಖಂಡನೀಯ ಎನ್ನುತ್ತಿದೆ ಭಕ್ತಗಣ. ಅದ್ಯಾರೇ ಇರಲಿ ಪೊಲೀಸರು ಆದಷ್ಟು ಬೇಗ ಖದೀಮರ ಎಡೆಮುರಿ ಕಟ್ಟಬೇಕಿದೆ.

click me!