Chikkamgaluru: ಮೈಸೂರಿನ ಬಳಿಕ ಕಾಫಿನಾಡಿನಲ್ಲಿ ವಿವಾದಿತ ಮಹಿಷ ದಸರಾ ಕಿಚ್ಚು!

By Govindaraj S  |  First Published Oct 18, 2023, 12:42 PM IST

ಮೈಸೂರು-ಉಡುಪಿ ಬಳಿಕ ಕಾಫಿನಾಡು ಚಿಕ್ಕಮಳೂರಿನಲ್ಲೂ ಕೂಡ ಮಹಿಷ ದಸರಾದ ಕಿಚ್ಚು ಹಬ್ಬಿದ್ದು, ದಲಿತ ಸಂಘಟನೆಗಳ ಒಕ್ಕೂಟ ಅದ್ಧೂರಿ ಮಹಿಷಾ ದಸರಾಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಭಗವಾನ್ ಕೈನಲ್ಲಿ ಉದ್ಘಾಟನೆ ಮಾಡಿಸಿ ಮಹಿಷಾ ದಸರಾ ಮಾಡಿಯೇ ತೀರುತ್ತೇವೆ ಎಂದು ಸವಾಲು ಹಾಕಿದ್ದಾರೆ. 
 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಅ.18): ಮೈಸೂರು-ಉಡುಪಿ ಬಳಿಕ ಕಾಫಿನಾಡು ಚಿಕ್ಕಮಳೂರಿನಲ್ಲೂ ಕೂಡ ಮಹಿಷ ದಸರಾದ ಕಿಚ್ಚು ಹಬ್ಬಿದ್ದು, ದಲಿತ ಸಂಘಟನೆಗಳ ಒಕ್ಕೂಟ ಅದ್ಧೂರಿ ಮಹಿಷಾ ದಸರಾಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಭಗವಾನ್ ಕೈನಲ್ಲಿ ಉದ್ಘಾಟನೆ ಮಾಡಿಸಿ ಮಹಿಷಾ ದಸರಾ ಮಾಡಿಯೇ ತೀರುತ್ತೇವೆ ಎಂದು ಸವಾಲು ಹಾಕಿದ್ದಾರೆ. ಆದರೆ, ಹಿಂದೂ ಸಂಘಟನೆಗಳು ಭಗವಾನ್ ಜಿಲ್ಲೆಗೆ ಕಾಲಿಟ್ಟರೇ ಪ್ರತಭಟನೆ ನಡೆಸುತ್ತೇವೆ. ಅವರು ಜಿಲ್ಲೆಗೆ ಬರೋದು ಬೇಡ ಎಂದು ಜಿಲ್ಲಾಡಳಿತಕ್ಕೆ ಮನವಿ ಕೂಡ ಸಲ್ಲಿಸಿದ್ದಾರೆ. 

Tap to resize

Latest Videos

ಇದೇ ತಿಂಗಳು 20 ರಂದು ಕಾಫಿನಾಡಿನಲ್ಲಿ ಮಹಿಷ  ದಸರಾ: ಸಾಹಿತಿ ಭಗವಾನ್ ಕಾಫಿನಾಡಿಗೆ ಬರೋದಕ್ಕೆ ಕಾಫಿನಾಡ ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಹಿಷಾ ದಸರಾ ಆಚರಣೆಗೆ ಬಿಜೆಪಿ ಸಹ ವಿರೋಧ ವ್ಯಕ್ತಪಡಿಸಿದೆ. ಸದಾ ಹಿಂದೂ ಧರ್ಮ, ಹಿಂದೂ ದೇವರು, ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಭಗವಾನ್ ಇತ್ತೀಚೆಗೆ ಒಕ್ಕಲಿಗ ಸಮುದಾಯದ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಸನಾತನ ಧರ್ಮದಲ್ಲಿ ದಸರಾ ವೇಳೆಯಲ್ಲಿ ನಡೆದುಕೊಂಡು ಬಂದ ಎಲ್ಲಾ ಸಂಪ್ರದಾಯಗಳು ನಡೆದೇ ನಡೆಯುತ್ತೆ. 

ನವರಾತ್ರಿ ಸಂಭ್ರಮ: ಶಾರದೆಗೆ ಬ್ರಾಹ್ಮಿ ಅಲಂಕಾರ, ಅನ್ನಪೂಣೇಶ್ವರಿಗೆ ಗಜಾರೂಢಾ ಬ್ರಹ್ಮಚಾರಿಣೀ ರೂಪ

ಆದ್ರೆ, ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಅವರು ಜಿಲ್ಲೆಗೆ ಬರೋದು ಬೇಡ. ಬಂದ್ರೆ ಹೋರಾಟ ಮಾಡೇ ಮಾಡ್ತೀವಿ. ಅವರ ಬರಬಾರದು ಎಂದು ಶ್ರೀರಾಮಸೇನೆ ಜಿಲ್ಲಾಧಿಕಾರಿ ಮನವಿಯನ್ನೂ ಮಾಡಿದ್ದು, ಅವರು ಜಿಲ್ಲೆಯ ಒಳಬರೋದಕ್ಕೆ ಯಾವುದೇ ಕಾರಣಕ್ಕೂ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಕೆಲವರು ಮಹಿಷಾ ಸಂಹಾರಕ್ಕೆ ಬಿಡೋದಿಲ್ಲ ಅಂತಿದ್ದಾರೆ. ಆದರೆ, ಸನಾತನ ಧರ್ಮದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ ನಡೆದೆ ನಡೆಯುತ್ತಿ ಎಂದು ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ. 

ಈವರೆಗೂ  ಮಹಿಷ ದಸರಾಗೆ ಅನುಮತಿ ನೀಡದ ಜಿಲ್ಲಾಡಳಿತ: ಇನ್ನು ಮಹಿಷಾ ದಸರಾ ಸಮಿತಿಯಿಂದ ಸಿದ್ಧತೆಗಳು ನಡೆಯುತ್ತಿದ್ದು, ಅದ್ಧೂರಿಯಾಗಿ ಮಹಿಷಾ ದಸರಾ ಕಾರ್ಯಕ್ರಮ ನಡೆಸಲು ಸನ್ನದ್ಧರಾಗಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನ ಪ್ರೋ. ಭಗವಾನ್ ಮಾಡಲಿದ್ದಾರೆ. ಶ್ರೀರಾಮ ಸೇನೆ ಹಾಗೂ ಒಕ್ಕಲಿಗರ ಸಂಘ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದು ಏನಾದ್ರು ವಿರೋಧ ಮಾಡಿದ್ರೆ ಪ್ರತಿರೋಧ ತೋರಲು ನಾವು ಸಿದ್ಧ ಎಂದು ದಲಿತ ಸಂಘಟನೆಗಳ ಒಕ್ಕೂಟ ಕೂಡ ಎಚ್ಚರಿಕೆ ನೀಡಿದೆ. ಕಾರ್ಯಕ್ರಮಕ್ಕೆ ವಿರೋಧ ಮಾಡಿದವರ ಮೇಲೆಯೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. ದಲಿತರಿಂದಲೇ ಮಹಿಷಾಸುರನನ್ನ ನಿರ್ಮಿಸಿ ಅವರಿಂದಲೇ ಸುಡಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಮನವಿ ಮಾಡ್ತೀವೆ. ಮಹಿಷಾಸುರನನ್ನ ಸುಡಬೇಡಿ. 

Chikkamagaluru: ನಗರಸಭೆ ಅಧ್ಯಕ್ಷರೇ ನಿಮಗೆ ಮಾನ, ಮರ್ಯಾದೆ ಇದ್ದರೆ ನಿಮ್ಮ ಬೆಂಬಲ ತೋರಿಸಿ!

ಆತ ಆದಿಪುರುಷ. ಮಹಾರಾಜ. ಅವರ ಒಳ್ಳೆಯ ಕೆಲಸವನ್ನ ಜನರಿಗೆ ಹೇಳುವ ಕೆಲಸ ಮಾಡಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟ ಕೂಡ ಮನವಿ ಮಾಡಿದ್ದು, ಕಾರ್ಯಕ್ರಮಕ್ಕೆ ಯಾರಾದ್ರು ಅಡ್ಡಿಪಡಿಸಿದ್ರೆ ನಾವು ಸೂಕ್ತ ರೀತಿಯಲ್ಲಿ ಉತ್ತರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆ, ಕಾಫಿನಾಡಿಗೆ ಕೆ.ಎಸ್. ಭಗವಾನ್ ಆಗಮಿಸೋದ್ರ ಬಗ್ಗೆ ಪರ-ವಿರೋಧ ಶುರುವಾಗಿದೆ. ಹಿಂದೂ ಸಂಘಟನೆ ಹಾಗೂ ಒಕ್ಕಲಿಗರು ಭಗವಾನ್ ಜಿಲ್ಲೆಗೆ ಬರೋದೇ ಬೇಡ ಅಂತಿದ್ದಾರೆ. ಆದ್ರೆ, ದಲಿತ ಸಂಘಟನೆಗಳು ಬಂದೇ ಬರ್ತಾರೆ. ಕಾರ್ಯಕ್ರಮ ಮಾಡೇ ಮಾಡ್ತೀವಿ ಅಂತಿದ್ದಾರೆ. ಇಬ್ಬರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಆದ್ರೆ, ಈವರೆಗೂ  ಮಹಿಷ ದಸರಾಗೆ ಜಿಲ್ಲಾಡಳಿತ ಅನುಮತಿಯನ್ನು ನೀಡಿಲ್ಲ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಕಿಚ್ಚನ್ನ ಜಿಲ್ಲಾಡಳಿತ ಹೇಗೆ ನಿಭಾಯಿಸುತ್ತೋ ಕಾದುನೋಡಬ್ಬೇಕು.

click me!