'ದೇಶದ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅಪಾರ'

By Kannadaprabha News  |  First Published Oct 18, 2023, 10:39 AM IST

ಕೃಷಿಯಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ ಎಂದು ಆದರ್ಶ ಯುವತಿ ಮಂಡಳಿಯ ಅಶ್ವಿನಿ ಅಭಿಪ್ರಾಯಪಟ್ಟರು. ಆದರ್ಶ ಯುವತಿ ಮಂಡಳಿ, ಭೂಶಕ್ತಿ ಕೇಂದ್ರ ನೆಲಹಾಲ್ ಸಹಯೋಗದಲ್ಲಿ ಯಲದಬಾಗಿ ಗ್ರಾ.ಪಂ. ಆವರಣದಲ್ಲಿ ನಡೆದ ರೈತ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.


 ತುಮಕೂರು :  ಕೃಷಿಯಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ ಎಂದು ಆದರ್ಶ ಯುವತಿ ಮಂಡಳಿಯ ಅಶ್ವಿನಿ ಅಭಿಪ್ರಾಯಪಟ್ಟರು. ಆದರ್ಶ ಯುವತಿ ಮಂಡಳಿ, ಭೂಶಕ್ತಿ ಕೇಂದ್ರ ನೆಲಹಾಲ್ ಸಹಯೋಗದಲ್ಲಿ ಯಲದಬಾಗಿ ಗ್ರಾ.ಪಂ. ಆವರಣದಲ್ಲಿ ನಡೆದ ರೈತ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

ಕೃಷಿ ಚಟುವಟಿಕೆಗಳ ಆರಂಭದಿಂದ ಕೊನೆಯವರೆಗೂ ಬಿಡುವಿಲ್ಲದೆ ಬೀಜ ಬಿತ್ತನೆ, ಬೆಳೆ ಕಟಾವು, ಕುರಿ,ಮೇಕೆ, ಹಸು ಸಾಕಾಣಿಕೆ ಇತ್ಯಾದಿಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಹಾಗಾಗಿ, ಆಹಾರ ಮತ್ತು ಕೃಷಿ ಪದ್ಧತಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಮಹಿಳಾ ರೈತರನ್ನು ಗುರುತಿಸುವ ಮತ್ತು ಗೌರವಿಸುವ ಸಲುವಾಗಿ ರೈತ ಮಹಿಳಾ ದಿನ ಆಚರಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸಂತಸದ ವಿಷಯ ಎಂದರು. ಕೃಷಿ ಸಂಬಂಧಿತ ಎಲ್ಲಾ ಕೆಲಸಗಳಲ್ಲಿ ಶೇ. 60-75ರಷ್ಟು ಮಹಿಳೆಯರು ಭಾಗಿಯಾಗಿದ್ದಾರೆ. ಸರ್ಕಾರ ಅವರನ್ನು ರೈತರಾಗಿ ಗುರುತಿಸುವುದು ಅಗತ್ಯ ಎಂದರು.

Tap to resize

Latest Videos

undefined

ರೈತ ಸಂಪರ್ಕ ಕೇಂದ್ರದ ಶಾಂತಕುಮಾರ್ ಮಾತನಾಡಿ, ರೈತ ಮಹಿಳೆಯರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ. ಮಹಿಳಾ ರೈತರು ರೈತ ಸಂಪರ್ಕ ಕೇಂದ್ರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.

ಯಲದಬಾಗಿ ಪಂಚಾಯತಿಯ ಪಿಡಿಒ ಭಾಗ್ಯಲಕ್ಷ್ಮಿ ಮಾತನಾಡಿ, ಶೇಕಡಾ 70ರಷ್ಟು ಮಹಿಳಾ ರೈತರು ಇದ್ದಾರೆ. ಅವರ ಹಕ್ಕುಗಳನ್ನು ರಕ್ಷಿಸುವ, ರೈತರೆಂದು ಅವರ ಗುರುತು ಖಾತ್ರಿಪಡಿಸಲು ಸಂಪನ್ಮೂಲಗಳ ಮೇಲಿನ ಅವರ ಹಕ್ಕುಗಳನ್ನು ಅರಿಯಲು ಸರ್ಕಾರವು ಕಾರ್ಯನಿರ್ವಹಿಸಬೇಕಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುರೇಖಾ, ಮಹಿಳಾ ರೈತರನ್ನು ಅಭಿನಂದಿಸಿ ಅವರ ಆರೋಗ್ಯ, ಪೌಷ್ಟಿಕತೆ, ಹಾಗೂ ಸರ್ಕಾರದ ಯೋಜನೆಗಳ ಕುರಿತು ತಿಳಿಸಿದರು.

ಕಾರ್ಯಕ್ರಮದಲ್ಲಿ ಆದಿಜನ ಪಂಚಾಯಿತಿಯ ಸಂಯೋಜಕರು ರಾಮಲಿಂಗಯ್ಯ, ತೋಟಗಾರಿಕೆ ಇಲಾಖೆಯ ಮಹಾಂತೇಶ್, ಯಲದಬಾಗಿ ಗ್ರಾ.ಪಂ.ಉಪಾಧ್ಯಕ್ಷೆ. ಅಮ್ಮಾಜಮ್ಮ, ಸದಸ್ಯರು, ವಿವಿಧ ಮಹಿಳಾ ಸಂಘಗಳ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆದಿಜನ ಪಂಚಾಯಿತಿಯ ಸದಸ್ಯರು, ಗ್ರಾಮದ ಮಹಿಳೆಯರು, ಭೂಶಕ್ತಿ ಕೇಂದ್ರದ ಮಲ್ಲಣ್ಣ, ಆದರ್ಶ ಯುವತಿ ಮಂಡಳಿಯ ಮಂಜುಳ ಮತ್ತು ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ 100 ರೈತ ಮಹಿಳೆಯರಿಗೆ ಮಾವು, ಬೇವು, ಹಲಸಿನ ಗಿಡಗಳನ್ನು ಸಿರಾ ಅರಣ್ಯ ಇಲಾಖೆ ವತಿಯಿಂದ ನೀಡಿ ಅಭಿನಂದಿಸಲಾಯಿತು. ವಿಜಯಲಕ್ಷ್ಮಿ ನಿರೂಪಿಸಿದರು.

click me!