ತಾಕತ್ತಿದ್ರೆ ಮಂಗಳೂರಿಗೆ ಬಂದು ಪ್ರಶ್ನೆ ಮಾಡಲಿ: ನಟ ಚೇತನ್ ಗೆ ಕಾಂತಾರದ 'ಗುರುವ'ನ ಸವಾಲು!

By Suvarna News  |  First Published Oct 19, 2022, 4:38 PM IST

ದೈವಾರಾಧನೆ ಹಿಂದೂ ಸಂಸ್ಕೃತಿಯೇ ಅಲ್ಲ ಎಂದು ಕಾಂತಾರ ಸಿನಿಮಾದ ಬಗ್ಗೆ ಹೊಸ ವಿವಾದ ಹುಟ್ಟು ಹಾಕಿದ ನಟ ಚೇತನ್ ವಿರುದ್ದ ಕಾಂತಾರ ಸಿನಿಮಾ ತಂಡ ಗರಂ ಆಗಿದೆ. ಅಲ್ಲದೇ ಸಿನಿಮಾವನ್ನ ಎಳೆದು ತಂದ ಕಾರಣಕ್ಕೆ ಕಾಂತಾರದ 'ಗುರುವ' ಪಾತ್ರಧಾರಿ ಸ್ವರಾಜ್ ಶೆಟ್ಟಿ, ನಟ ಚೇತನ್‌ ಗೆ ಸವಾಲು ಹಾಕಿದ್ದಾರೆ.


ಭರತ್ ರಾಜ್ ಏಷ್ಯಾನೆಟ್ ಸುವರ್ಣ ಮಂಗಳೂರು
ಮಂಗಳೂರು: ದೈವಾರಾಧನೆ ಹಿಂದೂ ಸಂಸ್ಕೃತಿಯೇ ಅಲ್ಲ ಎಂದು ಕಾಂತಾರ ಸಿನಿಮಾದ ಬಗ್ಗೆ ಹೊಸ ವಿವಾದ ಹುಟ್ಟು ಹಾಕಿದ ನಟ ಚೇತನ್ ವಿರುದ್ದ ಕಾಂತಾರ ಸಿನಿಮಾ ತಂಡ ಗರಂ ಆಗಿದೆ. ಅಲ್ಲದೇ ಸಿನಿಮಾವನ್ನ ಎಳೆದು ತಂದ ಕಾರಣಕ್ಕೆ ಕಾಂತಾರದ 'ಗುರುವ' ಪಾತ್ರಧಾರಿ ಸ್ವರಾಜ್ ಶೆಟ್ಟಿ, ನಟ ಚೇತನ್‌ ಗೆ ಸವಾಲು ಹಾಕಿದ್ದಾರೆ. ತಾಕತ್ತಿದ್ರೆ ಮಂಗಳೂರಿಗೆ ಬಂದು ದೈವಾರಾಧನೆ ಬಗ್ಗೆ ಪ್ರಶ್ನೆ ಮಾಡಿ ಅಂತ ಸವಾಲು ಎಸೆದಿದ್ದಾರೆ.

ಮಂಗಳೂರಿನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಸ್ವರಾಜ್ ಶೆಟ್ಟಿ (swaraj shetty) ಪ್ರತಿಕ್ರಿಯೆ ನೀಡಿದ್ದಾರೆ. ಹಿಂದೂ ಸಂಸ್ಕೃತಿ (Hindu Culture) ಅಲ್ಲ ಅಂತ ಹೇಳಲು ಅದು ಯಾವಾಗ ಬಂದಿರೋದು ಅಂತ ಯಾರಿಗಾದ್ರೂ ಗೊತ್ತಿದ್ಯಾ ದೈವಾರಾಧನೆಯನ್ನ ತುಳುನಾಡಿಗರು (Tulunaadu) ಮಾಡ್ತಾ ಇದಾರೆ. ಆದರೆ ಚೇತನ್ ರ ಹೇಳಿಕೆ ನಮ್ಮ ನಂಬಿಕೆಗೆ ಧಕ್ಕೆ ತರುವಂತಿದೆ. ಭೂತಾರಾಧನೆ ಮತ್ತು ಹಿಂದುತ್ವದ ಸಂಬಂಧದ ಬಗ್ಗೆ ‌ಮಾತನಾಡಬಾರದು.‌ ಅದರ ಬಗ್ಗೆ ನಿಮಗೆ ಗೊತ್ತಿದ್ಯಾ? ನಿಮ್ಮಲ್ಲಿ ಸಾಕ್ಷ್ಯ (Evidence) ಏನಿದೆ? ನಮ್ಮ ಪೂರ್ವಜರು ಹೇಳಿದ್ದನ್ನು ನಾವು ಮಾಡಿಕೊಂಡು ಬರ್ತಾ ಇದೀವಿ.‌ ದೈವಾರಾಧನೆ ಮತ್ತು ಕಾಂತಾರದ ವಿಷಯ ಬೇಡ, ಸಿನಿಮಾ ಸಿನಿಮಾವಾಗಿಯೇ ಇರಲಿ ಎಂದಿದ್ದಾರೆ. ಅಲ್ಲದೇ ಅವರು ನಟರಾಗಿ ಸಿನಿಮಾವಾಗಿಯೇ ಅದನ್ನ ನೋಡಿ ಖುಷಿ ಪಡಲಿ.‌ ಅದು ಬಿಟ್ಟು ಬೇಳೆ ಬೇಯಿಸಿ ಕೊಳ್ಳುವ ಕೆಲಸ ಬೇಡ. ತುಳುನಾಡಿನಲ್ಲಿ ದೈವಾರಾಧನೆ ಬಗ್ಗೆ ದಿಗ್ಗಜರು ಪುಸ್ತಕ ಬರೆದಿದ್ದಾರೆ.‌ ಇವರು ಅಂಥದ್ದನ್ನ ಓದಲಿ, ಅವರು ಇವರಿಗೆ ಉತ್ತರ ಕೊಡ್ತಾರೆ.

Tap to resize

Latest Videos

ಕೊರಗಜ್ಜನ ಮೇಲೆ ಗೌರವ ಇದೆ ಅಂತ ಚೇತನ್ ಹೇಳಿದ್ದಾರೆ.‌ ಆದರೆ ದೈವದ ಬಗ್ಗೆ ಗೌರವ ಅಲ್ಲ, ಭಕ್ತಿ ಬರಬೇಕು. ಒಂದೆರಡು ಸಲ ಇವರು ನಮ್ಮ ಭೂತಾರಾಧನೆಗಳಿಗೆ‌ ಬರಲಿ. ದೈವ ನಡೆಯನ್ನ ನಿಂತು ಒಮ್ಮೆ ನೋಡಿದರೆ ಭಕ್ತಿ ಬರಬಹುದು. ಶಿವದೂತ ಗುಳಿಗ ಅನ್ನೋ ‌ನಾಟಕದ ಕಥೆ ಒಂದು ಶಕ್ತಿಯ ಕಥೆ. ಗುಳಿಗನ ಕಥೆಯನ್ನ ಜನರ ಮುಂದೆ ತೆರೆದಿಡೋ ಕೆಲಸ ನಾವು ಮಾಡಿದ್ದೇವೆ. ಧರ್ಮವನ್ನ ಹಾಳು ಮಾಡೋರನ್ನ ಈ ದೈವಗಳು ಬಿಡಲ್ಲ. ಕರಾವಳಿಯ ಎಲ್ಲಾ ದೈವಗಳು ಇದೇ ರೀತಿ ಮಾಡುತ್ತದೆ.‌ ದೈವಗಳು ಭೂಮಿಯಲ್ಲಿ ಇರೋದೇ ಧರ್ಮ ರಕ್ಷಣೆಗಾಗಿ, ಅದನ್ನ ದಾಟಿದ್ರೆ ಉಳಿಗಾಲವಿಲ್ಲ. ನಾವು ಪೂರ್ವಜರ ನಂಬಿಕೆಗಳನ್ನು ಉಳಿಸಿ ದೈವಾರಾಧನೆ ‌ಮಾಡಿಕೊಂಡು ಬಂದಿದ್ದೇವೆ.‌

ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲವೇ ಅಲ್ಲ; ಸುದ್ದಿಗೋಷ್ಠಿಯಲ್ಲಿ ನಟ ಚೇತನ್ ಹೇಳಿಕೆ

ನಾನು ನಟನಾಗಿ ಅಲ್ಲ ಅಂದಿದದ್ದರೆ ಇನ್ನೂ ಕೋಪ ಬರ್ತಾ ಇತ್ತು. ನಮ್ಮೆಲ್ಲರಿಗೆ ಕಿಚ್ಚನ್ನ ಹಬ್ಬಿಸ್ತಾ ಇದೀರಿ, ಕಾಂತಾರ ಸಿನಿಮಾ ಬಗ್ಗೆ ಮಾತು ಬೇಡ.‌ ಮಂಗಳೂರಿಗೆ ಬಂದು ಪ್ರಶ್ನೆ ಕೇಳುವ ತಾಕತ್ ಇದ್ರೆ ಬಂದು ಮಾತನಾಡಲಿ.‌ ಈ ವಿವಾದ ಸಿನಿಮಾದ ಕಾರಣಕ್ಕೆ ಹುಟ್ಟಿಕೊಂಡಿದ್ದು, ನಮ್ಮದು ಒಂದು ಇರಲಿ ಅಂತ. ಇಷ್ಟು ದಿ‌ನ ಇಲ್ಲದ್ದು ಕಾಂತಾರ ಸಿನಿಮಾ ಬಂದ ನಂತರ ಹೇಗೆ ಬಂತು? ಸಿನಿಮಾ ಬಂದು 16 ದಿನದ ನಂತರ ಇವರು ವಿವಾದ ಮಾಡ್ತಾ ಇದಾರೆ. ಆದರೆ ದೈವಾರಾಧನೆ ಬಗ್ಗೆ ಮಾತು ಬೇಡ, ಸಿನಿಮಾ ಬದಿಗಿಟ್ಟು ‌ಮಾತನಾಡಿ.‌ ನಾಳೆ ದೈವಕ್ಕೆ ಕೋಪ ಬಂದ್ರೆ ಅವನನ್ನು ಮಾತ್ರ ಖಂಡಿತಾ ಬಿಡಲ್ಲ. ಇದರಿಂದ ಸಿನಿಮಾಗೆ ಡ್ಯಾಮೇಜ್ ಇಲ್ಲ, ಇದರಿಂದ ಪಬ್ಲಿಸಿಟಿ ಅಷ್ಟೇ, ಚೇತನ್‌ಗೆ ಗೆ ಧನ್ಯವಾದ ಅಂತ ಅವರು ಹೇಳಿದ್ದಾರೆ.

ರಿಷಬ್ ಶೆಟ್ಟಿ ಹೇಳಿದ ಹಾಗೆ ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ; ನಟ ಚೇತನ್ ಕುಮಾರ್

click me!