ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದ ಬೆನ್ನಲ್ಲೇ, ಜಿಲ್ಲಾಡಳಿತದಿಂದ ಮತ್ತೊಂದು ಶಾಕ್‌: ಬೆಸ್ತುಬಿದ್ದ ಎಂ.ಎಂ. ಹಿರೇಮಠ

By Sathish Kumar KH  |  First Published Mar 29, 2023, 11:09 PM IST

ಕಾಂಗ್ರೆಸ್‌ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಹಾವೇರಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಂ.ಎಂ. ಹಿರೇಮಠ ಅವರಿಗೆ ಜಿಲ್ಲಾಡಳಿತ ಭಾರಿ ಶಾಕ್‌ ನೀಡಿದೆ.


ಹಾವೇರಿ (ಮಾ.29): ಕಾಂಗ್ರೆಸ್‌ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಹಾವೇರಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಂ.ಎಂ. ಹಿರೇಮಠ ಅವರಿಗೆ ಜಿಲ್ಲಾಡಳಿತ ಭಾರಿ ಶಾಕ್‌ ನೀಡಿದೆ. ಲಿಂಗಾಯತ ಸಮುದಾಯಕ್ಕೆ ಸೇರಿದ್ದರೂ ಬೇಡ ಜಂಗಮ ಸಮುದಾಯಕ್ಕೆ ಸೇರಿದವರೆಂದು ಪರಿಶಿಷ್ಟ ಜಾತಿ (ಎಸ್‌ಸಿ) ಪ್ರಮಾಣ ಪತ್ರ ಪಡೆದುಕೊಂಡಿದ್ದನ್ನು ರದ್ದುಗೊಳಿಸಿದೆ. 

ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಂ.ಎಂ. ಹಿರೇಮಠಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಟಿಕೆಟ್‌ ನೀಡದೇ ಕೈಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ತಾವು ಸ್ವತಂತ್ರವಾಗಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿಕೊಂಡಿದ್ದರು. ಹಾವೇರಿ ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದವರಿಗೆ ಟಿಕೆಟ್‌ ಕೈತಪ್ಪಿದ್ದು ಒಂದೆಡೆ ಹಿನ್ನಡೆಯಾದರೆ, ಈಗ ಎಸ್‌ಸಿ ಪ್ರಮಾಣಪತ್ರವೇ ರದ್ದುಗೊಂಡಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ.

Latest Videos

undefined

ಹಿಂದೂ- ಮುಸ್ಲಿಂ ವಿವಾಹ : ಪೋಷಕರ ವಿರೋಧಕ್ಕೆ ಹೆದರಿ ನೇಣಿಗೆ ಶರಣಾದ ಪ್ರೇಮಿಗಳು

ಕಾಂಗ್ರೆಸ್‌ ಟಿಕೆಟ್‌ ವಂಚಿತ ಬೆನ್ನಲ್ಲೇ ಪ್ರಮಾಣಪತ್ರವೂ ರದ್ದು:  ಕಾಂಗ್ರೆಸ್‌ ಟಿಕೆಟ್‌ ಸಿಗದಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಹಿರೇಮಠ ಮುಂದಾಗಿದ್ದರು. ಇಂದು ಬೆಂಬಲಿಗರ ಸಭೆಯನ್ನೂ ನಡೆಸಿದ್ದರು. ಆದರೆ, ಚುನಾವಣೆ ಹೊಸ್ತಿಲಲ್ಲಿ ಅವರಿಗೆ ಎಸ್‌ಸಿ ಪ್ರಮಾಣಪತ್ರ ರದ್ದುಗೊಳಿಸಿ ಜಿಲ್ಲಾಡಳಿತ ಶಾಕ್‌ ನೀಡಿದೆ. ಮುಖ್ಯವಾಗಿ ಲಿಂಗಾಯತ ಹಾಗೂ ಬೇಡ ಜಂಗಮ ಜಾತಿಗೆ ಇರುವಂತಹ ವ್ಯತ್ಯಾಸವನ್ನು ಇಲ್ಲಿ ಗುರುತಿಸಿ ಪಟ್ಟಿ ಮಾಡಲಾಗಿದೆ. ಜೊತೆಗೆ, ಈ ಎರಡೂ ಸಮುದಾಯದ ಜನರು ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳನ್ನು ತೋರಿಸಿಕೊಟ್ಟು, ಬೇಡ ಜಂಗಮ ಎಂದು ಸುಳ್ಳು ಹೇಳಿ ಎಸ್‌ಸಿ ಪ್ರಮಾಣಪತ್ರ ಪಡೆದಿದ್ದನ್ನು ರದ್ದುಗೊಳಿಸಿ ಆದೇಶಿಸಿದೆ.

ಸುಪ್ರೀಂ ಕೋರ್ಟ್‌ ಮೊರೆ ಹೋಗಲು ತೀರ್ಮಾನ:  ಇನ್ನು ಎಂ.ಎಂ.ಹಿರೇಮಠ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಆಗಿದ್ದ ಹಿನ್ನೆಲೆಯಲ್ಲಿ ತನ್ನ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಹಾವೇರಿ ತಹಶೀಲ್ದಾರರಿಂದ 2022ರಲ್ಲಿ ಬೇಡಜಂಗಮ ಸಮುದಾಯ ಎಂದು ಅರ್ಜಿ ಸಲ್ಲಿಸಿ ಪರಿಶಿಷ್ಟ ಜಾತಿ (ಎಸ್‌ಸಿ) ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದರು. ಆದರೆ, ಹಾವೇರಿ ತಹಶಿಲ್ಧಾರ ಕೊಟ್ಟಿದ್ದ ಸರ್ಟಿಫಿಕೇಟ್ ನೀಡಿದ್ದು, ನಿಯಮಾನುಸಾರ ಇಲ್ಲ ಎಂದು ಬೇಡ ಜಂಗಮ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿ  ರದ್ದಗೊಳಿಸಿದ್ದಾರೆ. ಈಗ ಜಿಲ್ಲಾಧಿಕಾರಿ ನೀಡಿದ ಆದೇಶದ ವಿರುದ್ಧ ಸುಪ್ರೀಂ ಕೊರ್ಟ್ ಗೆ ಮೆಲ್ಮನವಿ ಹೋಗುವುದಾಗಿ ಹಿರೇಮಠ ಹೇಳಿದ್ದಾರೆ.

ಕಾಂಗ್ರೆಸ್‌ ಸೋತರೆ ಡಿ.ಕೆ.ಶಿವಕುಮಾರ್‌ ಬಿಜೆಪಿ ಮೇಲೆ ದೂರು ಕೊಡ್ತಾರೆ: ಸಿಟಿ ರವಿ

ಬಿ.ಡಿ. ಹಿರೇಮಠ ಆಸ್ಪತ್ರೆಗೆ ದಾಖಲು: ಇನ್ನು ರಾಜ್ಯದಲ್ಲಿ ಕಳೆದ 273 ದಿನಗಳಿಂದ ಬೇಡ ಜಂಗಮ ಸಮುದಾಯಕ್ಕೆ ಪರಿಶಿಷ್ಟ ಜಾತಿ (ಎಸ್‌ಸಿ) ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಮಾಡುತ್ತಿದ್ದ ಬೇಡ ಜಂಗಮ ಒಕ್ಕೂಟದ ಅಧ್ಯಕ್ಷ ಬಿ.ಡಿ. ಹಿರೇಮಠ್ ಆರೋಗ್ಯದಲ್ಲಿ ಏರುಪೇರಾಗಿದೆ. ಪ್ರತಿನಿತ್ಯ ಧರಣಿ ಮಾಡುವಂತೆಯೇ ಇಂದು ಬೆಳಗ್ಗೆ ಕೂಡ ಸ್ವಾತಂತ್ರ್ಯ ಉದ್ಯಾನಕ್ಕೆ ತೆರಳಿ ಪ್ರತಿಭಟನಾ ಧರಣಿಗೆ ಕುಳಿತುಕೊಂಡಾಗ ವೇಳೆ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಉಸಿರಾಟ ಸಮಸ್ಯೆ ಹಾಗೂ ಕೆಮ್ಮು ಸೇರಿ ಇತರೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯಿಂದ ತೀವ್ರ ಅಸ್ವಸ್ಥಗೊಂಡು ಕುಸಿದಿದ್ದಾರೆ. ತಕ್ಷಣವೇ ಅವರನ್ನು ಇತರೆ ಪ್ರತಿಭಟನಾ ನಿರತರು ಬಿ.ಡಿ. ಹಿರೇಮಠ ಅವರನ್ನು ನಗರದ ಮಲ್ಲಿಗೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಗಂಭೀರ ಸಮಸ್ಯೆಯಿಲ್ಲ ಎಂದು ವೈದ್ಯರಿ ತಿಳಿಸಿದ್ದಾರೆ.

click me!