ಕೊರೋನಾ ಚುಚ್ಚುಮದ್ದು ನನ್ನ ಮೇಲೆ ಪ್ರಯೋಗಿಸಿ ಎಂದ ವಕೀಲ

By Kannadaprabha NewsFirst Published Mar 21, 2020, 8:35 AM IST
Highlights

ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದು, ಸಂಧೋಧಕರು ಔಷಧ ಕಂಡು ಹಿಡಿಯಲು ಸತತ ಪರಿಶ್ರಮಿಸುತ್ತಿದ್ದಾರೆ. ಹಾಗೆಯೇ ಸರ್ಕಾರ, ಅಧಿಕಾರಿಗಳೂ, ಜನರೂ ಸೋಂಕು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಚಾಮರಾಜನಗರದ ವಕೀಲರೊಬ್ಬರು ಚುಚ್ಚುಮದ್ದು ಪ್ರಯೋಗಿಸಲು ತಮ್ಮ ದೇಹ ನೀಡುವುದಾಗಿ ಹೇಳಿದ್ದಾರೆ.

ಚಾಮರಾಜನಗರ(ಮಾ.21): ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದು, ಸಂಧೋಧಕರು ಔಷಧ ಕಂಡು ಹಿಡಿಯಲು ಸತತ ಪರಿಶ್ರಮಿಸುತ್ತಿದ್ದಾರೆ. ಹಾಗೆಯೇ ಸರ್ಕಾರ, ಅಧಿಕಾರಿಗಳೂ, ಜನರೂ ಸೋಂಕು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಚಾಮರಾಜನಗರದ ವಕೀಲರೊಬ್ಬರು ಚುಚ್ಚುಮದ್ದು ಪ್ರಯೋಗಿಸಲು ತಮ್ಮ ದೇಹ ನೀಡುವುದಾಗಿ ಹೇಳಿದ್ದಾರೆ.

ಕೊರೋನಾ ವೈರಸ್‌ಗೆ ಚುಚ್ಚುಮದ್ದು ಕಂಡುಹಿಡಿಯಲು ತನ್ನ ದೇಹವನ್ನು ಬಳಸಿಕೊಳ್ಳಿ ಎಂದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ವಕೀಲರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

'ಭಾನುವಾರ ಇಡೀ ದೇಶಕ್ಕೇ ಮದ್ದು ಸಿಂಪಡಿಸ್ತಾರಂತೆ ಮೋದಿ'..!

ಕೊಳ್ಳೇಗಾಲದ ವಕೀಲ ಬಸವರಾಜು ಎಂಬುವರು ಜೀವಂತ ದೇಹದಾನ ಮಾಡಲು ಮುಂದಾಗಿದ್ದು ತನ್ಮ ದೇಹಕ್ಕೆ ಕೊರೋನಾ ವೈರಸ್‌ ಇಂಜೆಕ್ಟ್ ಮಾಡಿ, ಚುಚ್ಚುಮದ್ದನ್ನು ಪ್ರಯೋಗಿಸಿ ಮಹಾಮಾರಿಗೆ ಯಶಸ್ವಿ ಔಷಧಿ ಕಂಡು ಹಿಡಿದು ಜಗತ್ತನ್ನು ರಕ್ಷಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

click me!