* ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರಿಗೆ ಹೋಳಿಗೆ ಊಟ
* ಮಾದರಿಯಾದ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಕಾರ್ಯ
* ಚಿಕ್ಕಬಳ್ಳಾಪುರದ ಬಿಜಿಎಸ್ ಶಾಲೆಯಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್
ಚಿಕ್ಕಬಳ್ಳಾಪುರ,(ಮೇ.30): ನಗರ ಹೊರ ವಲಯದ ಮಂಚನಬಲೆಯಲ್ಲಿ ಆದಿಚುಂಚನಗಿರಿ ಶಾಖಾ ಮಠದ ವತಿಯಿಂದ ಸ್ಥಳೀಯ ಬಿಜಿಎಸ್ ಶಾಲೆಯಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಭಾನುವಾರ ಸೋಂಕಿತರಿಗೆ ಹೋಳಿಗೆ ಊಟ ಉಣಬಡಿಸಲಾಗಿದೆ.
ಇತ್ತೀಚೆಗೆ ಕೋವಿಡ್ ಕೇರ್ ಸೆಂಟರ್‌ನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಉದ್ಘಾಟಿಸಿದ್ದರು. ಸೋಂಕಿತರಿಗೆ ಉತ್ತಮವಾಗಿ ಮೂಲ ಸೌಕರ್ಯಗಳನ್ನು ಒದಗಿಸಿರುವ ಆದಿಚುಂಚನಗಿರಿ ಶಾಖಾ ಮಠ ಸೋಂಕಿತರಿಗೆ ಹೋಳಿಗೆ ಊಟ ನೀಡಿ ಸಂತೈಸಿದೆ.
undefined
ಬಾಣಸಿಗನಾದ ರೇಣುಕಾಚಾರ್ಯ: ಶಾಸಕರಿಂದ ಸೋಂಕಿತರಿಗೆ ಉಪಹಾರ ನೀಡೋ ಕಾರ್ಯ
ಕೋವಿಡ್ ಕೇರ್ ಸೆಂಟರ್‌ಗೆ ಗ್ರಾ.ಪಂ ಅಧ್ಯಕ್ಷೆ ಗಾಯಿತ್ರಮ್ಮ, ಉಪಾಧ್ಯಕ್ಷ ಶ್ರೀಧರ್, ಮುಖಂಡರಾದ ಮರಳಕುಂಟೆ ಕೃಷ್ಣಮೂರ್ತಿ ಮತ್ತಿತರರು ತೆರಳಿ ಸೋಂಕಿತರಿಗೆ ಖುದ್ದು ಹೋಳಿ ಊಟ ಬಡಿಸಿದರು.
ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಆರೋಪದ ನಡುವೆ ಆದಿಚುಂಚನಗಿರಿ ಶಾಖಾ ಮಠ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರಿಗೆ ಹೋಳಿಗೆ ಊಟ ನೀಡುವ ಮೂಲಕ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಸೋಂಕಿತರ ಮೆಚ್ಚುಗೆ ಗಳಿಸಿದ್ದಾರೆ. ನಿತ್ಯ ಸೋಂಕಿತರಿಗೆ ಉತ್ತಮ ಪೌಷ್ಠಿಕ ಆಹಾರ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಶ್ರೀಮಠ ನೀಡುತ್ತಿದೆ.