ನಟ ಗಣೇಶ್‌ಗೆ ಜಮೀನಿನಲ್ಲಿ ಶಾಶ್ವತ ರೆಸಾರ್ಟ್ ಕಟ್ಟುತ್ತಿರುವ ಬಗ್ಗೆ ಹೋರಾಟಕ್ಕೆ ತೆರಳಿದ್ದ ರೈತ ಸಂಘ ಕಾರ್ಯಕರ್ತರು ಹಾಗೂ ಸ್ಥಳೀಯ ರೈತರ ನಡುವೆ ಮಾತಿನ ಚಕಮಕಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಳಿಯ ಜಕ್ಕಹಳ್ಳಿಯಲ್ಲಿ ನಡೆದಿದೆ.
ಗುಂಡ್ಲುಪೇಟೆ (ಸೆ.08): ನಟ ಗಣೇಶ್‌ಗೆ ಜಮೀನಿನಲ್ಲಿ ಶಾಶ್ವತ ರೆಸಾರ್ಟ್ ಕಟ್ಟುತ್ತಿರುವ ಬಗ್ಗೆ ಹೋರಾಟಕ್ಕೆ ತೆರಳಿದ್ದ ರೈತ ಸಂಘ ಕಾರ್ಯಕರ್ತರು ಹಾಗೂ ಸ್ಥಳೀಯ ರೈತರ ನಡುವೆ ಮಾತಿನ ಚಕಮಕಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಳಿಯ ಜಕ್ಕಹಳ್ಳಿಯಲ್ಲಿ ನಡೆದಿದೆ. ರೈತಸಂಘದ ಕಾರ್ಯಕರ್ತರು ಹಾಗೂ ಸ್ಥಳೀಯ ರೈತರು ನಡುವೆ ಮಾತಿನ ಚಕಮಕಿ ನಡೆದು ಗಣೇಶ್ ಜಮೀನಿಗೆ ತೆರಳಲು ಅಡ್ಡಿಪಡಿಸಿದರೂ ಸ್ಥಳೀಯ ಪೊಲೀಸರು ಮೌನವಹಿಸಿದ್ದರು ಎಂದು ರೈತ ಸಂಘದ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ಆರೋಪಿಸಿದ್ದಾರೆ.
ನಟ ಗಣೇಶ್ ಗೆ ಸೇರಿದ ಜಮೀನಿಗೆ ರೈತಸಂಘದ ಕಾರ್ಯಕರ್ತರು ಏಕೆ ಹೋಗಬೇಕು. ಕಷ್ಟ ಸುಖಗಳಿಗೆ ರೈತ ಸಂಘದ ಕಾರ್ಯಕರ್ತರು ಒಂದು ದಿನವೂ ಸ್ಪಂದಿಸಿಲ್ಲ ಎಂದು ಸ್ಥಳೀಯ ರೈತರು ತರಾಟೆಗೆ ತೆಗೆದುಕೊಂಡರು. ನಂತರ ರೈತಸಂಘದ ಕಾರ್ಯಕರ್ತರ ಆಗ್ರಹಕ್ಕೆ ಮಣಿದು ಐವರು ರೈತ ಸಂಘದ ಮುಖಂಡರು ಗಣೇಶ್, ಜಮೀನಿಗೆ ಹೋಗಿ ಬರಲು ಕೊನೆಗೂ ಪೊಲೀಸರು ಅವಕಾಶ ಮಾಡಿಕೊಟ್ಟ ಬಳಿಕ ಪ್ರತಿಭಟನೆ ಅಂತ್ಯಗೊಂಡಿತು.
undefined
ಬೆಂಗಳೂರು-ಚೆನೈ ಹೈವೇ ಪರಿಶೀಲಿಸಿದ ಎಡಿಜಿಪಿ ಅಲೋಕ್ ಕುಮಾರ್: ಅಪಘಾತಗಳು ತಡೆಯಲು ಸೂಚನೆ
ರೈತ ಸಂಘದ ಮಹದೇವಪ್ಪ ಮಾತನಾಡಿ, ಸೂಕ್ಷ ಪರಿಸರ ವಲಯದಂಚಿನಲ್ಲಿ ತಾತ್ಕಾಲಿಕ ಕಟ್ಟಡದ ಬದಲು ಶಾಶ್ವತ ಕಟ್ಟಡ ನಿರ್ಮಿಸಿದ್ದಾರೆ. ಬಂಡೀಪುರ ಸುತ್ತ ಮುತ್ತ ಅಕ್ರಮವಾಗಿ ತಲೆ ಎತ್ತಿರುವ ರೆಸಾರ್ಟ್, ಹೋಂ ಸ್ಟೇಗಳನ್ನು ತೆರವುಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ರೈತಸಂಘದ ಮಹೇಶ್, ಷಣ್ಮುಖಸ್ವಾಮಿ ಸೇರಿದಂತೆ ರೈತ ಸಂಘದ ಕಾರ್ಯಕರ್ತರು ಇದ್ದರು. ಸ್ಥಳೀಯ ರೈತರಲ್ಲಿ ಚಿತ್ರನಟ ಗಣೇಶ್‌ಗೆ ಸೇರಿದ ಕೆಲಸಗಾರರು ಆಗಿದ್ದರು ಎನ್ನಲಾಗಿದೆ.
ಬಿಜೆಪಿಯವರು ನಾಥೂರಾಮ್ ಗೋಡ್ಸೆ ವಂಶಸ್ಥರು: ಸಿಎಂ ಸಿದ್ದರಾಮಯ್ಯ
ನಟ ಗಣೇಶ್ ಕಟ್ಟಡ ನಿರ್ಮಾಣ ಅನುಮತಿ ರದ್ದು: ಬಂಡೀಪುರ ಅರಣ್ಯ ಪ್ರದೇಶದಲ್ಲಿ ನಟ ಗಣೇಶ್ ಅವರಿಗೆ ತಾತ್ಕಾಲಿಕ ಕಟ್ಟಡ ನಿರ್ಮಿಸಲು ನೀಡಿದ್ದ ಅನುಮತಿಯನ್ನು ರದ್ದುಗೊಳಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ನಟ ಗಣೇಶ್ ಅವರಿಗೆ ಬಂಡೀಪುರ ಅರಣ್ಯದ ಸಮೀಪ ಗುಂಡ್ಲುಪೇಟೆ ತಾಲೂಕಿನ ಜಕ್ಕಳಿಯ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ತಾತ್ಕಾಲಿಕ ಕಟ್ಟಡ ನಿರ್ಮಿಸಲು ಕ್ರಮಬದ್ಧವಾಗಿ ಮತ್ತು ನಿಯಮಬದ್ಧವಾಗಿ ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಆದರೆ, ಅವರು ಶಾಶ್ವತ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅನುಮತಿ ರದ್ದು ಮಾಡಲಾಗಿದೆ ಎಂದರು. ಗಣೇಶ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣ ನ್ಯಾಯಾಲಯದಲ್ಲಿ ಇದೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಸಚಿವರು ಹೇಳಿದರು.