ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿ ಸರಳತೆ ಮೆರೆದ ದರ್ಶನ್

Published : Feb 02, 2019, 10:31 PM ISTUpdated : Feb 02, 2019, 11:47 PM IST
ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿ ಸರಳತೆ ಮೆರೆದ ದರ್ಶನ್

ಸಾರಾಂಶ

‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಪ್ರಸಂಗ ಸುತ್ತೂರು ಮಠದ ಜಾತ್ರಾ ಮಹೋತ್ಸವದಲ್ಲಿ ನಡೆದಿದೆ. 

ಮೈಸೂರು, [ಫೆ.02]: ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತ್ಯುನ್ನತ ಸ್ಥಾನಕ್ಕೆ ತಲುಪಿದ್ದರೂ ತಮ್ಮ ಸರಳತೆಯನ್ನು ಮರೆತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಹಲವು ಘಟನೆಗಳು ಆಗಾಗ ಸುದ್ದಿಯಾಗುತ್ತಿರುತ್ತವೆ. 

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಮಠದಲ್ಲಿ ಇಂದು [ಶನಿವಾರ] ನಡೆದ ಜಾತ್ರಾ ಮಹೋತ್ಸವದಲ್ಲಿ ದರ್ಶನ್ ಭಾಗಿಯಾಗಿದ್ದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಅವರ ಕಾಲಿಗೆ ನಮಸ್ಕರಿಸಿ ತಮ್ಮ ಸರಳತೆಯನ್ನು ಮೆರೆದಿದ್ದಾರೆ. 

ದರ್ಶನ್ ವೇದಿಕೆ ಮೇಲೆ ಕುಳಿತ್ತಿದ್ದರು. ನಂತರ ಸಿದ್ದರಾಮಯ್ಯ ಅವರು ವೇದಿಕೆ ಮೇಲೆ ಬರುತ್ತಿದ್ದಂತೆಯೇ ಅವರ ಬಲಿಗೆ ಹೋಗಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

 ಅಭಿಮಾನಿಗಳನ್ನು ಸದಾ ಕಾಲ ಸ್ಮರಿಸುವ ದರ್ಶನ್, ಹಿರಿಯರನ್ನೂ ಗೌರವಿಸುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ. 

"

ಇನ್ನು ಸಿದ್ದರಾಮಯ್ಯ ಎಲ್ಲೇ ಹೋಗಲಿ ಅಭಿಮಾನಿಗಳು ಕಾಲಿಗೆ ಕಾಲಿಗೆರಗಿರುವುದನ್ನು ಇಲ್ಲಿ ಸ್ಮರಿಸಬಹುದು. ಮೊನ್ನೇ ಅಷ್ಟೇ ಮಹಿಳೆಯರು ಸಹ ಸಿದ್ದ ಕಾಲಿಗೆ ಮನಸ್ಕರಿಸಿದ್ದರು.

ಇದೇ ವೇಳೆ ತಾವು ಸುತ್ತೂರು ಮಠದಿಂದ ನಡೆಸಲ್ಪಡುತ್ತಿರುವ ಜೆಎಸ್‌ಎಸ್ ಪಾಲಿಟೆಕ್ನಿಕ್ ನಲ್ಲಿ ವ್ಯಾಸಂಗ ಮಾಡಿರುವುದನ್ನು ಸ್ಮರಿಸಿಕೊಂಡರು. ತಮ್ಮ ತಂದೆ ಅನಾರೋಗ್ಯಕ್ಕೊಳಗಾದ ವೇಳೆ ಜೆಎಸ್‌ಎಸ್ ಆಸ್ಪತ್ರೆ ನಮಗೆ ತುಂಬಾ ಸಹಾಯ ಮಾಡಿದೆ ಎಂದು ಹೇಳಿದರು.
 

PREV
click me!

Recommended Stories

ಮೈಸೂರಿನ ಪುಟ್ಟ ರಾಜಕುಮಾರನ ಹುಟ್ಟುಹಬ್ಬ: ವಿಶೇಷ ಫೋಟೊಗಳನ್ನು ಶೇರ್ ಮಾಡಿದ ಮಹಾರಾಣಿ
Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!