ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಸಿದ ಕೆ.ಎಸ್‌.ಭಗವಾನ್‌

By Web DeskFirst Published Jan 26, 2019, 3:43 PM IST
Highlights

ಸಾಹಿತಿ ಪ್ರೊ.ಕೆ.ಎಸ್‌.ಭಗವಾನ್‌ ಮತ್ತೊಂದು ವಿವದಾತ್ಮಕ ಹೇಳಿಕೆ ನೀಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮೈಸೂರು, (ಜ.26): ‘ರಾಮ ಮಂದಿರ ಏಕೆ ಬೇಡ?’ ಕೃತಿಯ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾರಿಗುವ ಚಿಂತಕ ಪ್ರೊ.ಕೆ.ಎಸ್‌.ಭಗವಾನ್‌ ಅವರಿಗೆ ಸದ್ಯಕ್ಕೆ ಯಾವುದೇ ಹೇಳಿಕೆ ನೀಡದಂತೆ ಪೊಲೀಸರು ಸೂಚನೆ ನೀಡಿದ್ದಾರೆ.  

ಆದ್ರೆ ಭಗವಾನ್‌ ಇದ್ಯಾವುದಕ್ಕೂ ಕ್ಯಾರೆ ಎನ್ನದೇ ಮತ್ತೆ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಮೈಸೂರಿನ ಅಂಬೇಡ್ಕರ್ ಪಾರ್ಕ್​ನಲ್ಲಿ ಇಂದು (ಶನಿವಾರ) ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶ್ರೀರಾಮನ ಬಗ್ಗೆ ಬರೆಯುವ ಭಗವಾನ್ ದೊಡ್ಡ ದುರಂತ: ಹಿರಿಯ ಕಾಂಗ್ರೆಸ್ಸಿಗ

ಭಾರತ ಇನ್ನೂ ಹಿಂದೂ ಧರ್ಮದ ಗುಲಾಮಗಿರಿಯಲ್ಲಿದೆ. ಬ್ರಾಹ್ಮಣರನ್ನು ಹೊರತುಪಡಿಸಿ ಲಿಂಗಾಯತರು, ಒಕ್ಕಲಿಗರು ಸೇರಿದಂತೆ ಎಲ್ಲರೂ ಶೂದ್ರರು. 

ಮನುಸ್ಮೃತಿಯಲ್ಲಿ ಶೂದ್ರರು ಅಂದ್ರೆ ದಾಸಿಯ ಮಕ್ಕಳು, ಸೂ..ಮಕ್ಕಳು ಅಂತ ಬರೆದಿದ್ದಾನೆ. ಜನರಿಗೆ ಗುಲಾಮಗಿರಿಯನ್ನು ವಿರೋಧ ಮಾಡುವ ತಾಕತ್ ಇಲ್ಲ. ನಾವು ವಿರೋಧ ವ್ಯಕ್ತಪಡಿಸಿದ್ದಕ್ಕೆ ಕೆಲ ಗುಲಾಮರು ನನ್ನನ್ನು ವಿರೋಧಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರೊ. KS ಭಗವಾನ್‌ ಗೃಹ ಬಂಧನ

 ಒಂದು ವರ್ಗದ ಗುಲಾಮರು ಮತ್ತು ಅವರ ಗುಲಾಮರು ನನ್ನ ವಿರೋಧಿಸುತ್ತಾರೆ. ಇದೇ ಗುಲಾಮರು ಹೋಗಿ ಬಾಬ್ರಿ ಮಸೀದಿ ಹೊಡೆದು ಹಾಕಿದರು. 

ಕೆಲ ಗುಲಾಮರು ಹಣ ಕೊಟ್ಟು ಮನೆಯಲ್ಲಿರುತ್ತಾರೆ. ಈ ಗುಲಾಮರು ನಾವು ಶೂದ್ರರು, ಸೂ.. ಮಕ್ಕಳು ಅನ್ನೋ ಅರಿವಿಲ್ಲದೆ ಕೆಲಸ ಮಾಡ್ತಾರೆ ಎಂದು ಕಿಡಿಕಾರಿದರು.

click me!