Kantara Row; ಚೇತನ್ ಗೆ ನಟನೆ ಮಾಡಲು ಗೊತ್ತಿರಬಹುದು, ಆದರೆ ನಮಗೆ ಪ್ರಾರ್ಥನೆ ಮಾಡಲು ಗೊತ್ತಿದೆ

By Gowthami K  |  First Published Oct 21, 2022, 3:47 PM IST

ದೈವಾರಾಧನೆಯ ಬಗ್ಗೆ ಚಿತ್ರನಟ ಚೇತನ್ ನೀಡಿರುವ ಹೇಳಿಕೆಗೆ ಕರಾವಳಿಯಲ್ಲಿ ಆಕ್ರೋಶ ಮುಂದುವರಿದಿದೆ.   ಇದೀಗ ಖ್ಯಾತ ದೈವ ನರ್ತಕ  ಕುಮಾರ ಪಂಬದ ಅವರು, ನಮ್ಮ ಮೂಲ ಆರಾಧನೆಯ ದೈವವಾದ ಪಂಜುರ್ಲಿ ಯ ಮುಂದೆ ಈ ಬಗ್ಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.


ಉಡುಪಿ (ಅ.21): ದೈವಾರಾಧನೆಯ ಬಗ್ಗೆ ಚಿತ್ರನಟ ಚೇತನ್ ನೀಡಿರುವ ಹೇಳಿಕೆಗೆ ಕರಾವಳಿಯಲ್ಲಿ ಆಕ್ರೋಶ ಮುಂದುವರಿದಿದೆ. ಸ್ವತಹ ದೈವಾರಾಧಕರು ಕೂಡ ಚೇತನ್ ವಿರುದ್ಧ ಮುಗಿಬೀಳಲು ಆರಂಭಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿರುವ ಖ್ಯಾತ ದೈವ ನರ್ತಕ  ಕುಮಾರ ಪಂಬದ ಅವರು, ನಮ್ಮ ಮೂಲ ಆರಾಧನೆಯ ದೈವವಾದ ಪಂಜುರ್ಲಿ ಯ ಮುಂದೆ ಈ ಬಗ್ಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಭೂತಾರಾಧನೆ ಹಿಂದು ಸಂಪ್ರದಾಯ ಅಲ್ಲ ಎಂದು ನಟ ಚೇತನ್ ಹೇಳಿಕೆ ನೀಡಿದ್ದರು. ನಟರಿಗೆ ನಟನೆ ಮಾಡಲು ಗೊತ್ತಿರಬಹುದು, ಆದರೆ ನಾವು ದೈವಾರಾಧಕರು ನಮಗೆ ನಟಿಸಲು ಗೊತ್ತಿಲ್ಲ ಎಂದು ಹೇಳಿದ್ದಾರೆ. ನಾವು ತಲೆತಲಾಂತರಗಳಿಂದ ಸತ್ಯವನ್ನು ಪಾಲನೆ ಮಾಡಿಕೊಂಡು ಬಂದವರು. ಭೂತಾರಾಧನೆಗೆ ಇಂತಿಷ್ಟು ವರ್ಷದ ಹಿನ್ನೆಲೆ ಎಂಬ ದಾಖಲೆ ನಮ್ಮಲ್ಲಿ ಇಲ್ಲದೆ ಇರಬಹುದು. ಆದರೆ ಯಾವುದೋ ಒಂದು ಪುಸ್ತಕ ಹಿಡಿದುಕೊಂಡು ಚೇತನ್ ಈ ರೀತಿ ಮಾತನಾಡುವುದು  ತಪ್ಪು ಎಂದು ಹೇಳಿದರು. ಕರಾವಳಿಯಾದ್ಯಂತ ಪರವ, ಪಂಪದ,  ನಲಿಕೆಯವರು ಜೀವಿಸುತ್ತಿದ್ದೇವೆ, ಆದರೆ ನಾವು ಅಲೆಮಾರಿಗಳು ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಹಿರಿಯರ ಕಾಲದಿಂದಲೂ ನಾವು ಹಿಂದೂ ಸಂಪ್ರದಾಯವನ್ನು ಆರಾಧನೆ ಮಾಡಿಕೊಂಡು ಬರುತ್ತಿದ್ದೇವೆ ನಮ್ಮ ದೈವಗಳಿಗೆ ಮೂಲ ಶಬ್ದವೇ ತುಳು ಎಂದರು.

ಚೇತನ್ ನೀಡಿರುವ ಹೇಳಿಕೆಯಿಂದ ನಮಗೆ ನೋವಾಗಿದೆ , ನಾವು ನಂಬಿಕೊಂಡ ಸತ್ಯದ ಮೂಲಕ ಚೇತನ್ ಗೆ ಪ್ರತಿಕ್ರಿಯೆ ಕೊಡುತ್ತೇವೆ. ನಟ ಚೇತನ್ ಬಹಳ ದೊಡ್ಡ ಜ್ಞಾನಿ ಆಗಿರಬಹುದು. ಆದರೆ ನಮ್ಮ ನೆಲ ನಮ್ಮ ಕುಲ ನಮ್ಮ ಆಚರಣೆಯ ಬಗ್ಗೆ ಮಾತನಾಡುವ ಜ್ಞಾನ ಇವರಿಗೆ ಇಲ್ಲ ಎಂದು ಕಿಡಿ ಕಾರಿದ್ದಾರೆ

Latest Videos

undefined

ವ್ಯಕ್ತಿಗತವಾಗಿ ಚೇತನ್ ಗೆ ನಾವು ಉತ್ತರ ಕೊಡುವುದಿಲ್ಲ. ಸಂಸ್ಕೃತಿಯ ಅವಹೇಳನ ಆದಾಗೆಲ್ಲ ನಾವು ದೈವದ ಮುಂದೆ ಪ್ರಾರ್ಥನೆ ಮಾಡುತ್ತೇವೆ. ನಾವು ಸೇವೆ ಕೊಡುವ ದೈವಗಳ ಮುಂದೆ ಈ ಕುರಿತು ನಾವು ಪ್ರಾರ್ಥನೆ ಮಾಡುತ್ತೇವೆ. ನಮ್ಮ ಮೂಲ ಆರಾಧನೆಯ ಪಂಜುರ್ಲಿ ದೈವದ ಮುಂದೆ ಈ ಬಗ್ಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಹೇಳಿದರು.

ಸಂಸ್ಕ್ರತಿ ಇಲ್ಲದವರು ಸಂಸ್ಕ್ರತಿ ಬಗ್ಗೆ ಮಾತನಾಡಬಾರದು , ನಟ ಚೇತನ್‌ಗೆ ಸಚಿವ ಸುನೀಲ್ ಕುಮಾರ್ ಟಾಂಗ್

ನಟ ಚೇತನ ವಿರುದ್ಧ  ಧಾರವಾಡದಲ್ಲಿ ದೂರು
ಕಾಂತಾರ’ ಚಿತ್ರದಲ್ಲಿ ತೋರಿಸಿರುವಂತೆ ಭೂತದ ಕೋಲ, ದೈವಾರಾಧನೆ ಹಿಂದೂ ಸಂಸ್ಕೃತಿಗೆ ಸೇರಿದ ಆಚರಣೆ ಅಲ್ಲ. ಅದು ಮೂಲ ನಿವಾಸಿಗಳಾದ ಆದಿವಾಸಿಗಳ ಹಬ್ಬ. ಅದನ್ನು ಹಿಂದೂ ಧರ್ಮದ ಜತೆ ಸೇರಿಸಿರುವುದು ತಪ್ಪು’ ಎಂದು ಹೇಳಿಕೆ ನೀಡಿರುವ ನಟ ಚೇತನ್‌ ವಿರುದ್ಧ ಧಾರವಾಡ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಿಂದೂ ಜಾಗರಣ ವೇದಿಕೆ ಮುಖಂಡ ಜಯತೀರ್ಥ ಮಳಗಿ ದೂರು ದಾಖಲಿಸಿದ್ದಾರೆ. ಚೇತನ್‌ ಹಿಂದೂ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ದೂರು ನೀಡಿದ್ದಾರೆ.

ಕಾಂತಾರ ಚಿತ್ರ ವಿವಾದ: ನಟ ಚೇತನ್‌ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಕಿಡಿ

ಕಾಂತಾರ ಚಿತ್ರದ ಬಗ್ಗೆ ನಟ ಚೇತನ್‌ ವಿವಾದಾತ್ಮಕ ಹೇಳಿಕೆಗೆ ಖಂಡನೆ
 ಮೈಸೂರು:ಕಾಂತಾರ ಚಿತ್ರದ ಬಗ್ಗೆ ನಟ ಚೇತನ್‌ ಅವರು ವಿವಾದಾತ್ಮಕ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ನಗರಾಧ್ಯಕ್ಷ ಜೋಗಿ ಮಂಜು ಖಂಡಿಸಿದ್ದಾರೆ.

ರಿಷಬ್‌ ಶೆಟ್ಟಿನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರವು ದೇಶಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿದ್ದು, ನಟ ರಿಷಬ್‌ ಶೆಟ್ಟಿಭೂತ ಕೋಲ ದೈವರಾಧನೆ ಹಿಂದೂ ಸಂಸ್ಕೃತಿಯ ಒಂದು ಭಾಗ ಎಂದು ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ನಟ ಚೇತನ್‌ ತಮ್ಮದೇ ಶೈಲಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ದೈವಾರಾಧನೆ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ ಎಂದಿರುವ ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗಾರಾಧನೆ, ಭೂತಾರಾಧನೆ, ದೈವಾರಾಧನೆ ತುಳುನಾಡಿನ ಮಣ್ಣಿನ ಸತ್ವ. ಇದರಲ್ಲಿ ಹುಳುಕನ್ನು ಹುಡುಕಿ ಸಮಾಜದಲ್ಲಿ ಓಡಕನ್ನು ಉಂಟುಮಾಡಲು ಪ್ರಯತ್ನ ಪಡುತ್ತಿರುವ ಚೇತನ್‌ ಎಂಬ ವ್ಯಕ್ತಿ ಮೊದಲು ತಮ್ಮನ್ನು ತಾವು ವೈದ್ಯರ ಬಳಿ ಪರೀಕ್ಷಿಸಿಕೊಳ್ಳಲಿ ಎಂದು ಅವರು ಕಿಡಿಕಾರಿದ್ದಾರೆ.

click me!