ದೀಪಾವಳಿಗೆ ಇಸ್ಪೀಟ್ ಆಡುವವರೇ ಎಚ್ಚರ; ಪೊಲೀಸರು ನಿಮ್ಮ ಬೆನ್ನು ಬೀಳ್ತಾರೆ!

By Ravi Janekal  |  First Published Oct 21, 2022, 3:39 PM IST

ದೀಪಾವಳಿ ಅಂದರೆ ಇಸ್ಪೀಟು ಆಟ ಎಂಬ ಸಾಮಾನ್ಯ ಅನಿಸಿಕೆ ಇದೆ. ಬಹುತೇಕರು ದೀಪಾವಳಿಯಲ್ಲಿ ರಾತ್ರಿಯಿಡೀ ದೀಪ ಕಾಯುವ ನೆಪದಲ್ಲಿ ಇಸ್ಪೀಟು ಆಡುತ್ತ ಆಡುತ್ತಾರೆ.  ಈ ಬಾರಿ ಪೊಲೀಸ್ ಇಲಾಖೆ ಇಸ್ಪೀಟ್ ಆಟಕ್ಕೆ ಬ್ರೇಕ್ ಹಾಕಿದೆ.


ವರದಿ- ದೊಡ್ಡೇಶ್ ಯಲಿಗಾರ್ ಏಷಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಅ.21) ದೀಪಾವಳಿ ಅಂದರೆ ಇಸ್ಪೀಟು ಆಟ ಎಂಬ ಸಾಮಾನ್ಯ ಅನಿಸಿಕೆ ಇದೆ. ಬಹುತೇಕರು ದೀಪಾವಳಿಯಲ್ಲಿ ರಾತ್ರಿಯಿಡೀ ದೀಪ ಕಾಯುವ ನೆಪದಲ್ಲಿ ಇಸ್ಪೀಟು ಆಡುತ್ತ ಆಡುತ್ತಾರೆ. ರಾತ್ರಿ ಬೆಳಗಾಗುವುದರೊಳಗೆ ಲಕ್ಷಾಂತರ ರೂ. ಹಣ ಕಳೆದುಕೊಳ್ಳುತ್ತಾರೆ. ಕೆಲವರು ಗಳಿಸುತ್ತಾರೆ. ದೀಪಾವಳಿ ಹಬ್ಬದ ರಾತ್ರಿ ರಾಜ್ಯಾದ್ಯಂತ ಕೋಟ್ಯಂತರ ರೂಪಾಯಿ ಆಟ ನಡೆಯುತ್ತದೆ.

Tap to resize

Latest Videos

undefined

ಹುಬ್ಬಳ್ಳಿ: ಜೂಜಾಡುತ್ತಿದ್ದ ಆರಕ್ಷಕರ ಬಂಧನ, ಪೊಲೀಸರನ್ನೇ ಅಂದರ್ ಮಾಡಿದ ಖಡಕ್ ಕಾರ್ಯಾಚರಣೆ..!

ಕೆಲವು ಜಿಲ್ಲೆಗಳಲ್ಲಿ ಇಸ್ಪೀಟು ಆಟ ಎಷ್ಟುಮಿತಿ ಮೀರಿದೆ ಎಂದರೆ ಕೂಡಿಟ್ಟ ಹಣವೆಲ್ಲ ಇಸ್ಪೀಟು ಆಟದಲ್ಲಿ ಸೋತು ಕುಟುಂಬ ಬೀದಿಗೆ ಬಂದ ಘಟನೆಗಳು ನಡೆದಿವೆ. ಹೀಗಾಗಿ ಈ ಬಾರಿ ಪೊಲೀಸ್ ಇಲಾಖೆ ಇಸ್ಪೀಟ್ ಆಟಕ್ಕೆ ಬ್ರೇಕ್ ಹಾಕಿದೆ.

ಯಾವ ಜಿಲ್ಲೆಯಲ್ಲಿ ಇಸ್ಪೀಟು  ಆಟಕ್ಕೆ ಬ್ರೇಕ್

ಕೊಪ್ಪಳ ಜಿಲ್ಲೆಯ ಜನರಿಗೆ ದೀಪಾವಳಿ ಹಬ್ಬ ಬಂದರೆ ಸಾಕು, ಇಸ್ಪೀಟ್ ಆಡುವವರಿಗೆ ಅದೇನೋ ಒಂಥರಾ ಹುಮ್ಮಸ್ಸು. ದೀಪಾವಳಿ ಹಬ್ಬಕ್ಕಾಗಿ ಕಾದು ಕುಳಿತುಕೊಳ್ಳುವ ಇಸ್ಪೀಟು ಗ್ಯಾಂಗ್ ಗಳಿವೆ. ಈ ಒಂದು ರಾತ್ರಿಯಲ್ಲೇ ಲಕ್ಷಾಂತರ ಹಣ ಗಳಿಸುತ್ತಾರೆ. ಇಸ್ಪಿಟ್ ಆಟದಲ್ಲಿ ಪಳಗಿದವರು.

 ದೀಪಾವಳಿ ಹಬ್ಬದ ನೆಪದಲ್ಲಿ‌ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಇಸ್ಪೀಟ್ ಆಟವಾಡುವವರು ಹಗಲು ರಾತ್ರಿ ಇಸ್ಪೀಟ್ ಆಡುವುದರಲ್ಲಿ ಫುಲ್ ಬ್ಯುಸಿಯಾಗಿರುತ್ತಾರೆ.‌ ದೀಪಾವಳಿ ಸಮಯದ ಮೂರು ದಿನಗಳಲ್ಲಿ ಕೊಪ್ಪಳವೊಂದರಲ್ಲೇ ಕೋಟ್ಯಂತರ ರೂಪಾಯಿ ಇಸ್ಪೀಟ್ ಆಟವನ್ನು ಆಡುತ್ತಾರೆ. ಹೀಗಾಗಿ ಈ ಜಿಲ್ಲೆಯಲ್ಲಿ ಈ ವರ್ಷ ಇಸ್ಪೀಟ್ ಆಟಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ.

ಪೊಲೀಸ್ ಇಲಾಖೆಯಿಂದ ಜಾಗೃತಿ:

ಈ ಬಾರಿ ಇಸ್ಪೀಟ್ ಆಟಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶ, ಪ್ರಮುಖ ವೃತ್ತಗಳಲ್ಲಿ ಹಾಗೂ ಇಸ್ಪೀಟ್ ಆಟವಾಡುವ ಸ್ಥಳಗಳಲ್ಲಿ ಜಾಗೃತಿಗಾಗಿ ಡಂಗೂರ ಸಾರುವ ಮೂಲಕ ಇಸ್ಪೀಟ್ ಆಟ ಆಡಬಾರದೆಂದು ಎಚ್ಚರಿಕೆ ನೀಡುತ್ತಿದ್ದಾರೆ.

ಹಬ್ಬದ ನೆಪದಲ್ಲಿ ಸಂಪ್ರದಾಯವೆಂದು ಇಸ್ಪೀಟ್ ಆಟ:

ಉತ್ತರ ಕರ್ನಾಟಕ ಭಾಗದಲ್ಲಿ ದೀಪಾವಳಿ ಸಂದರ್ಭದಲ್ಲಿ ಸುಮಾರು ಮೂರು ನಾಲ್ಕು ದಿನ ಇಸ್ಪೀಟು ಆಡುತ್ತಾರೆ. ಈ ದಿನಗಳಲ್ಲಿ ಇಸ್ಪೀಟು ಸಾಮಾನ್ಯ ಎಂಬಂತೆ ಇದೆ. ಇದನ್ನು ದೀಪಾವಳಿ ಹಬ್ಬದ ಒಂದು  ಭಾಗವೆಂಬಂತೆ ಆಡುತ್ತಾರೆ. ಈ ಸಂದರ್ಭದಲ್ಲಿ ಅನೇಕರು ಹಣ ಕಳೆದುಕೊಳ್ಳುತ್ತಾರೆ.ಮೊದಲಿನಿಂದಲೂ ಈ ಸಂಪ್ರಾದಾಯ ಇದೆ ಎಂಬಂತೆ ವಾದಿಸುತ್ತಿದ್ದಾರೆ.

ಇಸ್ಪೀಟ್ ಆಡಿದರೆ ಕಠಿಣ ಕ್ರಮದ ಎಚ್ಚರಿಕೆ

 ಕೊಪ್ಪಳ ಜಿಲ್ಲೆಯಲ್ಲಿ ಇಸ್ಪೀಟು ಆಟವನ್ನು ಬಂದ್ ಮಾಡಲು ಖಡಕ್ ಎಚ್ಚರಿಕೆ ನೀಡಿರುವ ಪೊಲೀಸ್ ಇಲಾಖೆ. ಇಸ್ಪಿಟ್ ಆಡುವುದು ಕಂಡುಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ. ಅಕ್ಟೋಬರ್ 23 ರಿಂದ 27 ರವರೆಗೆ ಹಬ್ಬದಲ್ಲಿ ದೀಪವು ಆರದಂತೆ ಕಾಯಬೇಕು ಎಂಬ ಕಾರಣಕ್ಕೆ ಬೀದಿ ಅಂಗಡಿಗಲ್ಲಿ ಗುಂಪು ಕೂಡಿಕೊಂಡು ಜನರು ಇಸ್ಪೀಟು ಆಡುತ್ತಾರೆ. ಅಂಗಡಿ ಮಾಲೀಕರೇ ಇಸ್ಪೀಟ್ ಆಡುವವರನ್ನು ಕರೆಸಿ, ಅವರಿಗೆ ಎಲ್ಲ ವ್ಯವಸ್ಥೆ ಮಾಡಿಕೊಡುತ್ತಾರೆ.

ಪಾವಗಡದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಇಸ್ಪೀಟ್, ಮಟ್ಕಾ ದಂಧೆ

ಈ ಬಾರಿ ಇದಕ್ಕೆಲ್ಲ ಬ್ರೇಕ್ ಬಿದ್ದಿದೆ. ಆದರೂ ಇಸ್ಪಿಟ್ ಗ್ಯಾಂಗ್ ಇದ್ಯಾವುದಕ್ಕೂ ಬಗ್ಗಲ್ಲ. ರಹಸ್ಯವಾಗಿ ಇಸ್ಪೀಟ್ ಆಡಲು ತೊಡಗುತ್ತಾರೆ.  ಹಾಗೊಂದು ವೇಳೆ ಇಸ್ಪೀಟ್ ಆಡಿದ್ದು ಕಂಡು ಬಂದರೆ ಅವರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಪೊಲೀಸ್ ಠಾಣಾವಾರು ಡಂಗೂರು. ಧ್ವನಿವರ್ಧಕಗಳ ಮೂಲಕ ಇಸ್ಪೀಟ್ ಆಡದಂತೆ ತಿಳಿಸಿದ್ದಾರೆ. ಎಲ್ಲಿಯೇ ಅಕ್ರಮವಾಗಿ ಇಸ್ಪೀಟು ಆಡುವುದು ಕಂಡು ಬಂದರೆ 112 ಕರೆಮಾಡಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಎಸ್ಪಿ ಅರುಣಾಂಗ್ಶು ಗಿರಿ ಹೇಳಿದ್ದಾರೆ.

ಇಸ್ಪೀಟು ಆಟದ ವಿಚಾರದಲ್ಲಿ ರಾಜಕಾರಣಿಗಳು, ಯಾರಾದರೂ ಒತ್ತಡ ಹಾಕಿದರೂ ನಾವು ಬಗ್ಗುವುದಿಲ್ಲ. ಜಿಲ್ಲೆಯಲ್ಲಿ ಜನರು ಸಂತೋಷದಿಂದ ಹಬ್ಬ ಆಚರಿಸಲಿ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ಈ ವರ್ಷ ದೀಪಾವಳಿ ಸಮಯದಲ್ಲಿ ಇಸ್ಪೀಟ್ ಆಟ ಆಡುವುದು ಬಂದ್ ಆಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

click me!