ಚಿಕ್ಕಮಗಳೂರು: ದಯಾಮರಣಕ್ಕೆ ಪ್ರಧಾನಿಗೆ ಮನವಿ ಪ್ರಕರಣ, ಬಿಲ್ ಪಾವತಿ ಮಾಡಿಸಲು ಕ್ರಮ, ಸಿಇಓ

By Girish Goudar  |  First Published Nov 2, 2022, 2:55 PM IST

2 ವರ್ಷದಿಂದ 87 ಲಕ್ಷ ಬಿಲ್ ಪೆಂಡಿಂಗ್ ಮಾಡಿಟ್ಟ ಅಧಿಕಾರಿಗಳು: ಮನನೊಂದು ದಯಾಮರಣಕ್ಕೆ ಪ್ರಧಾನಿಗೆ ಪತ್ರ ಬರೆದಿದ್ದ ಕಂಟ್ರಾಕ್ಟರ್ ಬಸವರಾಜ್ 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ನ.02):  ಕೊರೋನಾ ಇಡೀ ಜಗತ್ತನ್ನೇ ಕಿರುಬೆರಳಲ್ಲಿ ಆಡಿಸಿದ ನರಹಂತಕ ಕಾಯಿಲೆ. ಅದರ ಹೆಜ್ಜೆ ಗುರುತುಗಳು ಜಗತ್ತಿನಾದ್ಯಂತ ಅಚ್ಚಳಿಯದೆ ಉಳಿದಿದೆ. ಹಲವು ಜೀವಗಳು ಹೋಗಿರುವ ಘಟನೆಗಳು ನಮ್ಮ ಕಣ್ಣುಮುಂದೆ ಇದೆ. ಕೋವಿಡ್ ಟೈಂನಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಪರಿಕರಗಳನ್ನು ಪೂರೈಕೆ ಮಾಡಿರುವ ಬಸವರಾಜ್ ಇದೀಗ ಬೀದಿಗೆ ಬಂದಿದ್ದಾರೆ.  

Latest Videos

undefined

ಹೌದು, ಮೂಲತಃ ಹುಬ್ಬಳ್ಳಿಯವರಾದ ಬಸವರಾಜ್ ಕೊರೋನಾದ ಮೊದಲ ಅಲೆ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆ ಕಡೂರು ಹಾಗೂ ಮೂಡಿಗೆರೆ ತಾಲೂಕಿಗೆ ಮೆಡಿಕಲ್ ಕಿಟ್, ಲೈಕ್ ಗಮ್ ಬೂಟ್, ಮಾಸ್ಕ್, ಫಾಗಿಂಗ್ ಮಿಷಿನ್, ಗ್ಲೌಸ್ ಸೇರಿದಂತೆ ವಿವಿಧ ಸಾಮಾಗ್ರಿಗಳನ್ನ ಕಳಿಸಿದ್ರು. ಅದರ ಮೌಲ್ಯ 87 ಲಕ್ಷ. ಆದ್ರೆ, ಅಧಿಕಾರಿಗಳು ಇವರಿಗೆ ಎರಡು ವರ್ಷದಿಂದ ಬಿಲ್ ಪೆಂಡಿಂಗ್ ಮಾಡಿಟ್ಟಿದ್ದಾರೆ. ಕಾರಣ ಸಮ್ಥಿಂಗ್ ಕೊಟ್ಟಿಲ್ಲ ಅಂತ. ಇವರು ಹುಬ್ಬಳ್ಳಿಯಿಂದ ಬಂದು ಪಂಚಾಯಿತಿ-ಪಂಚಾಯಿತಿ ಅಲೆದಿದ್ದಾರೆ. ಕೆಲವರು ಮಾಡಿದ್ದಾರೆ. ಮತ್ತಲವರು ನಮಗೇನು ಇಲ್ವಾ. ಪಂಚಾಯಿತಿ ಮೀಟಿಂಗ್ನಲ್ಲಿ ಇಡ್ಬೇಕು. ಅಧ್ಯಕ್ಷರು ಕೇಳ್ತಾರೆ. ಇಓ ಕೇಳ್ತಾರೆ. ಕೊಡೋದ್ನೆಲ್ಲಾ ಕೊಟ್ಬಿಡಿ ಬೇಗ ಕೆಲಸ ಆಗುತ್ತೆ ಅಂತಾರಂತೆ. ಕಡೂರು ಇಓ ದೇವರಾಜ್ ನಾಯಕ್ ಮುಲಾಜಿಲ್ದೆ ಹಣ ಕೇಳ್ತಾರಂತೆ. ಇದರಿಂದ ನೊಂದ ಇವರು ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ ಪಂಚಾಯಿತಿ ಸಿಇಓ ಪ್ರಭು ಅವರಿಗೆ ಸರ್... ಪ್ಲೀಸ್ ನಂಗೆ ಹಣ ಕೊಡಿಸಿ ಅಂತ ಮನವಿ ಮಾಡಿದ್ದಾರೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಜಿಲ್ಲಾ ಪಂಚಾಯಿತಿ ಸಿಇಓ ಪ್ರಭು ಬಸವರಾಜ್ ರಿಂದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. 

ಚಿಕ್ಕಮಗಳೂರು: ಕರ್ನಾಟಕ ರಾಜ್ಯೋತ್ಸವದ ವೇದಿಕೆಗೆ ನುಗ್ಗಲು ಯತ್ನ, ಪ್ರತಿಭಟನಾನಿರತರ ಬಂಧನ

ಕಾಲಮಿತಿಯೊಳಗೆ ಹಣ ಪಾವತಿಯ ಭರವಸೆ

ಬಸವರಾಜ್ ಮೂಡಿಗೆರೆ ಹಾಗೂ ಕಡೂರಿಗೆ ಕೊರೋನಾ ನಿಯಂತ್ರಣಕ್ಕೆ ಸಾಮಾಗ್ರಿಗಳನ್ನ ಕಳುಹಿಸಿದ್ದು 2020ರ ನವೆಂಬರ್ನಲ್ಲಿ. ಅಂದ್ರೆ, ಭರ್ತಿ 2 ವರ್ಷ ಆಯ್ತು. ಸ್ವಾಯತ್ತವಾಗಿ ಕಾರ್ಯನಿರ್ವಹಿಸುವ ಶಕ್ತಿ ಇರುವ ಪಂಚಾಯಿತಿಗಳಿಂದ ಆದೇಶ ಪಡೆದು ಕೋವಿಡ್ ನಿಯಂತ್ರಣಕ್ಕೆ ಕೆಲ ಸಾಮಾಗ್ರಿಗಳನ್ನ ರವಾನಿಸಿದ್ದರು. ಆದ್ರೆ, ಎರಡು ವರ್ಷವಾದ್ರೂ ಪಂಚಾಯಿತಿಗಳು ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಬಸವರಾಜ್ ಆರು ತಿಂಗಳ ಹಿಂದೆಯೇ ಸಿಇಓ ಭೇಟಿ ಮಾಡಿ ಬಿಲ್ ಪಾವತಿಗೆ ಮನವಿ ಮಾಡಿದ್ದರು. ಆಗ, ಸಿಇಓ ಕೂಡ ನಿಯಮಬದ್ಧವಾಗಿ ಕಾರ್ಯದೇಶ ಪಡೆದು ಸಪ್ಲೇ ಮಾಡಿದ್ದಾರೆ ಬಿಲ್ ಪಾವತಿ ಮಾಡಿ ಎಂದು ಸೂಚಿಸಿದ್ದರು. ಆದರೆ, ಬಿಲ್ ಪಾವತಿ ಆಗದಿದ್ದಾಗ ಬಸವರಾಜ್ ನಮ್ಮನ್ನ ಮತ್ತೆ ಸಂಪರ್ಕಿಸಿಲ್ಲ ಅಂತಾರೆ ಸಿಇಓ ಪ್ರಭು. ಈಗ ಮತ್ತೆ ಬಂದು ದಾಖಲೆ ನೀಡಿದ್ದಾರೆ. ಕೂಡಲೇ ಕಾಲಮಿತಿಯೊಳಗೆ ಹಣವನ್ನ ಪಾವತಿ ಮಾಡುವಂತೆ ಸೂಚಿಸುತ್ತೇನೆ ಎಂದು ಸಿಇಓ ಪ್ರಭು ಕೂಡ ಭರವಸೆ ನೀಡಿದ್ದಾರೆ.

ಒಟ್ಟಾರೆ, ದೇವ್ರು ಕೊಟ್ರು ಕೂಡ ಪೂಜಾರಿ ಕೊಡ್ಲಿಲ್ಲ ಅನ್ನಂಗಾಯ್ತು ಗ್ರಾಮ ಪಂಚಾಯಿತಿ-ಅಧಿಕಾರಿಗಳ ಕಥೆ. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಕಠಿಣ ಕ್ರಮಗಳನ್ನ ಕೈಗೊಂಡಿತ್ತು. ಜೀವ ಉಳಿಸಿಲು ಪಂಚಾಯಿತಿಗಳಿಗೆ ಲಕ್ಷ-ಲಕ್ಷ ಹಣ ನೀಡಿತ್ತು. ಆದ್ರೆ, ಜೀವ ಉಳಿಸಲು ಜೀವ ರಕ್ಷಕ ನೀಡಿದ ಕಂಟ್ರಾಕ್ಟರ್ಗಳಿಗೆ ಅಧಿಕಾರಿಗಳು ಹಣ ನೀಡಿಲ್ಲ ಅಂದರೆ ಏನರ್ಥ. ಬೇಕು ಅಂತಾನೇ ನೀಡಿಲ್ವೋ ಅಥವ ಮತ್ಯಾವ ಕಾರಣಕ್ಕೆ ನೀಡಿಲ್ವೋ ಎಂಬ ಪ್ರಕರಣದ ಸುತ್ತ ಅನುಮಾನಗಳ ಹುತ್ತ ಬೆಳೆಯುತ್ತೆ. ಅದೇನೆ ಇದ್ರು, ಈಗ ಸಿಇಓ ಕೂಡಲೇ ಆದೇಶ ಮಾಡ್ತೀನಿ ಎಂದಿದ್ದಾರೆ.
 

click me!