ಅಪರಿಚಿತನ ಸ್ನೇಹ ಆಕೆಗೆ ಮುಳುವಾಯ್ತು : ಕೊನೆಗೆ ಮೋಸದ ಅರಿವಾಯ್ತು

By Kannadaprabha News  |  First Published Oct 1, 2020, 1:03 PM IST

ಅಪರಿಚಿತನೊಂದಿಗೆ ಮಾಡಿದ ಸ್ನೇಹ ಆಕೆಗೆ ಮುಳುವಾಗಿ ಕೊನೆಗೆ ಭಾರೀ ದೊಡ್ಡ ಮೋಸಕ್ಕೆ ಒಳಗಾಗಬೇಕಾಯ್ತು. 


ಚಿಕ್ಕಬಳ್ಳಾಪುರ (ಅ.01): ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಬಂದಿದ್ದ ಫ್ರೆಂಡ್‌ ರಿಕ್ವೆಸ್ಟ್‌ನ್ನು ಒಪ್ಪಿ ಬರೊಬ್ಬರಿ 4.90 ಲಕ್ಷ ರು.ಗಳನ್ನು ಕಳೆದುಕೊಂಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದ್ದು, ಪ್ರಕರಣ ಮುಖಪುಟ ಬಳಸುವವರಿಗೆ ಎಚ್ಚರಿಕೆ ಗಂಟೆಯಾಗಿದೆ.

ಬಾಗೇಪಲ್ಲಿ ನಗರ ನಿವಾಸಿ ಎನ್‌.ಸತ್ಯ ಎಂಬಾಕೆ ಹಣ ಕಳೆದುಕೊಂಡ ಮಹಿಳೆಯಾಗಿದ್ದು, ಸತ್ಯರ ಫೇಸ್‌ಬುಕ್‌ಗೆ ಕಳೆದ ಸೆ. 3ರಂದು ಆರ್ಥೋಪಿಟಿಕ್‌ ಸರ್ಜನ್‌ ಲೂಕಸ್‌ ಹೆನ್ರಿ ಎಂಬಾತ ಕಳುಹಿಸಿದ ಫ್ರೆಂಡ್‌ ರಿಕ್ವೆಸ್ಟ್‌ಗೆ ಆಕ್ಸೆಪ್ಟ್‌ ನೀಡಿದ್ದಾರೆ. ಬಳಿಕ ಇಬ್ಬರೂ ವಾಟ್ಸಪ್‌ನಲ್ಲಿ ಚಾಟ್‌ ಮುಂದುವರೆಸಿದ್ದಾರೆ. ವಿದೇಶದಿಂದ ಲ್ಯಾಪ್‌ ಟ್ಯಾಪ್‌, ಗೋಲ್ಡ್‌ ಚೈನ್‌ಗಳು, ಐಪೋನ್‌ ಹ್ಯಾಂಡ್‌ ಬ್ಯಾಂಗ್ಸ್‌, ಸೆಂಟ್‌ಬಾಟಲ್‌, ಕೈಗಡಿಯಾರ ಮೊದಲಾದ ವಸ್ತುಗಳ ಗಿಫ್ಟ್‌ ಕಳುಹಿಸುತ್ತಿದ್ದು, ಪಡೆದುಕೊಳ್ಳುವಂತೆ ಮಹಿಳೆಗೆ ಫೇಸ್‌ಬುಕ್‌ನಲ್ಲಿ ಪರಿಚಿತನಾದ ವ್ಯಕ್ತಿ ತಿಳಿಸಿದ್ದಾನೆ.

Tap to resize

Latest Videos

ಹತ್ರಾಸ್ ಬೆನ್ನಲ್ಲೇ ಉತ್ತರ ಪ್ರದೇಶ ಮತ್ತೊಂದು ಗ್ಯಾಂಗ್ ರೇಪ್! ...

ಬಳಿಕ ಮಹಿಳೆಯೊಬ್ಬರು ಈ ಪಾರ್ಸಲ್‌ ಪಡೆಯಲು 45 ಸಾವಿರ ಪಾರ್ಸಲ್‌ ಚಾರ್ಜ್ ನೀಡುವಂತೆ, ಬಳಿಕ ಸಾವಿರಾರು ಪೌಂಡ್ಸ್‌ ಹಣವಿದೆ ಎಂದು ಆಂಟಿ ಮನಿಲ್ಯಾಂಡರಿಂಗ್‌ ಪ್ರಮಾಣ ಪತ್ರಕ್ಕಾಗಿ ಒಂದು ಲಕ್ಷ ಹೀಗೆ ಹಲವು ಕಾರಣಗಳನ್ನು ಹೇಳಿ 4.90 ಲಕ್ಷ ರು.ಗಳನ್ನು ವಿವಿಧ ಖಾತೆಗಳಿಗೆ ಮಹಿಳೆಯಿಂದ ಜಮಾವಣೆ ಮಾಡಿಸಿಕೊಂಡಿದ್ದಾರೆ. ಬಳಿಕ ಆದಾಯ ತೆರಿಗೆ ಎಂದು 4 ಲಕ್ಷಗಳಿಗೆ ಬೇಡಿಕೆ ಇಟ್ಟಸಂದರ್ಭದಲ್ಲಿ ಮೋಸ ಹೋಗಿರುವುದು ಮಹಿಳೆಗೆ ಅರಿವಾಗಿದೆ. ಈ ಕುರಿತು ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

click me!