ದುಡಿದು ತಿನ್ನೋಣ ಅಂದ್ರು ಜನ ಬಿಡ್ತಿಲ್ಲ, ಸಾಯೋಣ ಅನ್ನಿಸ್ತಿದೆ: ದರ್ಶನ್‌ ಕೇಸ್‌ ಆರೋಪಿ ಪತ್ನಿ ಕಣ್ಣೀರು..!

Published : Jun 26, 2024, 10:56 AM IST
ದುಡಿದು ತಿನ್ನೋಣ ಅಂದ್ರು ಜನ ಬಿಡ್ತಿಲ್ಲ, ಸಾಯೋಣ ಅನ್ನಿಸ್ತಿದೆ:  ದರ್ಶನ್‌ ಕೇಸ್‌ ಆರೋಪಿ ಪತ್ನಿ ಕಣ್ಣೀರು..!

ಸಾರಾಂಶ

ನಾನು ಪ್ರೀತಿಸಿ ತವರುಮನೆ ತೊರೆದು ಬಂದಿದ್ದೇನೆ. ನನಗೆ ಯಾರು ಬಂಧು ಬಳಗವಿಲ್ಲ. ರೇಣುಕಾಸ್ವಾಮಿ ಕೊಲೆ ಬಗ್ಗೆ ನನ್ನೊಂದಿಗೆ ರಘು ಚರ್ಚಿಸಿಲ್ಲ. ಗಂಡನ ಪರ ಕಾನೂನು ಹೋರಾಟ ಮಾಡುವ ಶಕ್ತಿ ನನಗಿಲ್ಲ. ಗಂಡ ಇಲ್ಲದೇ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ನಟ ದರ್ಶನ್ ನನ್ನ ಗಂಡನಿಗೆ ಕಾನೂನು ನೆರವು ಕೊಡಿಸಬೇಕು ಎಂದು ವಿನಂತಿಸಿದ ಎ4 ಆರೋಪಿ ರಾಘವೇಂದ್ರ ಪತ್ನಿ ಸಹನಾ 

ಚಿತ್ರದುರ್ಗ(ಜೂ.26):  ದುಡಿದು ತಿನ್ನೋಣ ಅಂದ್ರು ಜನ ಬಿಡ್ತಿಲ್ಲ. ಪಾರ್ಲ‌್ರಗೆ ಹೋಗಿ ಕೆಲಸ ಮಾಡೋಕು ನನಗೆ ಆಗ್ತಿಲ್ಲ. ಮನೆಯಲ್ಲಿ ನೆಮ್ಮದಿ ಇಲ್ಲದೇ ವಿಷ ಕುಡಿದು ಸಾಯೋಣ ಅನಿಸಿಬಿಟ್ಟಿದೆ. ಗಂಡ ಮಾಡಿದ ತಪ್ಪಿಗೆ ನಾನು ಮಗಳು ನಾಲ್ಕು ಗೋಡೆ ಮಧ್ಯೆ ಸಾಯುವ ಪರಿಸ್ಥಿತಿ ಬಂದಿದೆ ಎಂದು ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ4 ಆರೋಪಿ ರಾಘವೇಂದ್ರ ಪತ್ನಿ ಸಹನಾ ಕಣ್ಣೀರು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರೀತಿಸಿ ತವರುಮನೆ ತೊರೆದು ಬಂದಿದ್ದೇನೆ. ನನಗೆ ಯಾರು ಬಂಧು ಬಳಗವಿಲ್ಲ. ರೇಣುಕಾಸ್ವಾಮಿ ಕೊಲೆ ಬಗ್ಗೆ ನನ್ನೊಂದಿಗೆ ರಘು ಚರ್ಚಿಸಿಲ್ಲ. ಗಂಡನ ಪರ ಕಾನೂನು ಹೋರಾಟ ಮಾಡುವ ಶಕ್ತಿ ನನಗಿಲ್ಲ. ಗಂಡ ಇಲ್ಲದೇ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ನಟ ದರ್ಶನ್ ನನ್ನ ಗಂಡನಿಗೆ ಕಾನೂನು ನೆರವು ಕೊಡಿಸಬೇಕು ಎಂದು ವಿನಂತಿಸಿದರು. ಕೊಲೆ ಆದ ಬಳಿಕ ಹಣ, ಒಡವೆ ಯಾವುದೇ ವಸ್ತುಗಳನ್ನು ನನಗೆ ಕೊಟ್ಟಿಲ್ಲ. ನಮ್ಮ ಮನೆಯಲ್ಲಿ ಹಣ ಸೀಜ್ ಆಗಿದೆ ಅನ್ನೋದು ಸುಳ್ಳು. ರೇಣುಕಸ್ವಾಮಿ ಕೊಲೆಯಿಂದಾಗಿ ಅವರ ಕುಟುಂಬ ನೋವಲ್ಲಿರುವಂತೆ, ನಾನು ಸಂಕಷ್ಟದಲ್ಲಿದ್ದಿನಿ. ನನ್ನ ನೋವಿಗೆ ಯಾರೂ ಸ್ಪಂದಿಸುತ್ತಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪತ್ನಿ, ಮಗನ ಮಾತುಗಳಿಂದ ದರ್ಶನ್ ನಿರಾಳ, ಜೈಲಿನಲ್ಲಿ ಬೇಗ ನಿದ್ರೆಗೆ ಜಾರಿದ್ದ ನಟ!

ದರ್ಶನ್ ಮೇಲಿನ ಹುಚ್ಚು ಅಭಿಮಾನಕ್ಕೆ ನನ್ನ ಗಂಡ ಹೋಗಿದ್ದಾನೆಯೇ ವಿನಃ ಬೇರೆ ಯಾವುದೇ ತಪ್ಪು ಮಾಡಿಲ್ಲ. ಒಂದು ವೇಳೆ ಉದ್ದೇಶಪೂರ್ವಕವಾಗಿ ರಘು ತಪ್ಪು ಮಾಡಿದ್ದರೆ ಖಂಡಿತಾ ಶಿಕ್ಷೆ ಆಗಲಿ ಎಂದರು.

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ