ತುಂಗಭದ್ರಾ ಜಲಾಶಯಕ್ಕೆ ಕಳೆದ 5 ದಿನಗಳಲ್ಲಿ 5,49,877 ಕ್ಯುಸೆಕ್ ನೀರು ಹರಿದು ಬಂದಿದೆ| ಜಲಾಶಯದ ನೀರಿನ ಮಟ್ಟವು 1627.23 ಅಡಿಗಳಷ್ಟು ಇತ್ತು| ಡ್ಯಾಂನಲ್ಲಿ 80 ಟಿಎಂಸಿ ನೀರು ಶೇಖರಣೆ|
ಮುನಿರಾಬಾದ್(ಆ.12): ತುಂಗಭದ್ರಾ ಜಲಾಶಯಕ್ಕೆ ಮಂಗಳವಾರ 1,04,000 ಕ್ಯುಸೆಕ್ ನೀರು ಹರಿದು ಬಂದಿದ್ದು, ಜಲಾಶಯದ ನೀರಿನ ಮಟ್ಟವು 1627.23 ಅಡಿಗಳಷ್ಟು ಇತ್ತು. ಜಲಾಶಯದಲ್ಲಿ 80 ಟಿಎಂಸಿ ಗಳಷ್ಟು ನೀರು ಶೇಖರಣೆಯಾಗಿರುತ್ತದೆ.
5 ದಿನಗಳಲ್ಲಿ 5,49,877 ಕ್ಯುಸೆಕ್ ನೀರು
ತುಂಗಭದ್ರಾ ಜಲಾಶಯಕ್ಕೆ ಕಳೆದ 5 ದಿನಗಳಲ್ಲಿ (ಶುಕ್ರವಾರದಿಂದ ಮಂಗಳವಾರದ ವರೆಗೆ) 5,49,877 ಕ್ಯುಸೆಕ್ ನೀರು ಹರಿದು ಬಂದಿದೆ. ಶುಕ್ರವಾರ ಜಲಾಶಯಕ್ಕೆ 1,03,000 ಕ್ಯುಸೆಕ್, ಶನಿವಾರ 1,06,000 ಕ್ಯುಸೆಕ್, ಭಾನುವಾರ 1,20,000 ಕ್ಯುಸೆಕ್, ಸೋಮವಾರ 1,16,877 ಕ್ಯುಸೆಕ್ ಹಾಗೂ ಮಂಗಳವಾರ 1,04,000 ಕ್ಯುಸೆಕ್ ನೀರು ಹರಿದು ಬಂದಿದೆ.
ಹೊಸಪೇಟೆ: ತುಂಗಭದ್ರಾ ಡ್ಯಾಂಗೆ ಒಂದೇ ದಿನ 9 ಟಿಎಂಸಿ ನೀರು..!
ಇಂದಿನಿಂದ ಜಲಾಶಯಕ್ಕೆ ಹರಿದು ಬರುವ ನೀರಿನ ಒಳಹರಿವಿನ ಪ್ರಮಾಣ ಇಳಿಮುಖವಾಗಲಿದ್ದು, ಅದು 70ರಿಂದ 80 ಸಾವಿರ ಕ್ಯುಸೆಕ್ ಅಸುಪಾಸಿನಲ್ಲಿ ಇರಲಿದೆ ಎಂಬ ಮಾಹಿತಿಯು ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.